Subscribe to Gizbot

ಬರಲಿದೆ ಹೊಸ ಎಲ್ ಜಿ ಆಪ್ಟಿಮಸ್ ಮೊಬೈಲ್!

Posted By: Super

ಬರಲಿದೆ ಹೊಸ ಎಲ್ ಜಿ ಆಪ್ಟಿಮಸ್ ಮೊಬೈಲ್!
ಎಲ್ ಜಿ ಮೊಬೈಲ್ ಜಗತ್ತಿನಾದ್ಯಂತ ಪ್ರಸಿದ್ಧ. ಸಾಕಷ್ಟು ಗ್ರಾಹಕರನ್ನು ಹೊಂದಿರುವ ಎಲ್ ಜಿ ಬಳಕೆದಾರರಿಗೆ ಅಚ್ಚುಮೆಚ್ಚಿನ ಫೊನ್. ಈಗಾಗಲೇ ಸಾಕಷ್ಟು ಎಲ್ ಜಿ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಇದೀಗ ಹೊಸ ಎಲ್ ಜಿ ಆಪ್ಟಿಮಸ್ EX ಬಿಡುಗಡೆಗೆ ಸಜ್ಜಾಗಿದೆ.

ಈ ಹೊಸ ಮೊಬೈಲ್ ಫೋನಿನಲ್ಲಿ ಸಾಕಷ್ಟು ವಿಶೇಷತೆಗಳಿವೆ. ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಫ್ಲಾಟ್ ಫಾರ್ಮ್ ಆಧಾರಿತ ಈ ಹೊಸ ಮೊಬೈಲ್ ಸ್ಯಾಮ್ ಸಂಗ್, ಸೋನಿ, ಎಲ್ ಜಿ ಗಳ ಸ್ಮಾರ್ಟ್ ಫೊನುಗಳಂತೇ ಅತ್ಯಾಧುನಿಕ.

ಈ ಹೊಸ ಎಲ್ ಜಿ ಆಪ್ಟಿಮಸ್ ನಲ್ಲಿ 4 ಇಂಚುಗಳ ಮಲ್ಟಿ ಟಚ್ ಸ್ಕ್ರೀನ್ ಇದೆ. ಇದು 800 X 480 ಪಿಕ್ಸೆಲ್ ರೆಸೊಲ್ಯೂಷನ್, ಸ್ಲೀಕ್ ಹಾಗೂ ಬಗೆಬಗೆಯ ಬಣ್ಣಗಳನ್ನು ಹೊಂದಿರುವ ಇದು ಸ್ಲಿಮ್ ಜೊತೆಗೆ ಕಡಿಮೆ ಭಾರ ಕೂಡ.

ಇದರಲ್ಲಿ 1.2GHz ಡ್ಯುಯಲ್ ಕೋರ್ ಪ್ರೊಸೆಸರ್, 5 ಮೆಗಾ ಪಿಕ್ಸೆಲ್ ಕ್ಯಾಮೆರಾ, ಆಂತರಿಕ ಹಾಗೂ ವಿಸ್ತರಿಸಬಲ್ಲ ಹೊರ ಮೆಮೊರಿ, ಮಲ್ಟಿ ಫಾರ್ಮೆಟ್ ವಿಡಿಯೋ, ಆಡಿಯೋ, ಉನ್ನತೀಕರಿಸಿದ ಬ್ಲೂಟೂಥ್, ವೈ-ಫೈ, ಡಾಟಾ ಶೇರಿಂಗ್ ಡಿವೈಸ್, ಸೋಷಿಯಲ್ ನೆಟ್ ವರ್ಕಿಂಗ್ ಅಪ್ಲಿಕೇಶನ್ ಇದೆ.

ಈ ಹೊಸ ಹ್ಯಾಂಡ್ ಸೆಟ್ ಬೆಲೆ ಇನ್ನೂ ನಿಗದಿಯಾಗಿಲ್ಲ. ಆಕರ್ಷಕ ಬೆಲೆಯೊಂದಿಗೆ ಮಾರುಕಟ್ಟೆಗೆ ಬಂದರೆ ಮಾರಾಟದಲ್ಲಿ ಯಶಸ್ಸು ಈ ಹೊಸ ಮೊಬೈಲಿಗೆ ಗ್ಯಾರಂಟಿ ಎನ್ನುತ್ತಿದೆ ಮೊಬೈಲ್ ಮಾರುಕಟ್ಟೆಯ ಅಂಗಳ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot