ಮೋಟೋರೊಲಾ ಆಟ್ರಿಕ್ಸ್ ಸ್ವಾಗತಕ್ಕೆ ಸಿದ್ಧರಾಗಿ!

Posted By: Staff

ಮೋಟೋರೊಲಾ ಆಟ್ರಿಕ್ಸ್ ಸ್ವಾಗತಕ್ಕೆ ಸಿದ್ಧರಾಗಿ!
ಮೋಟೋರೊಲಾ ಮೊಬೈಲುಗಳು ಸಾಕಷ್ಟು ಜಗತ್ಪ್ರಸಿದ್ಧಿ ಗಳಿಸಿವೆ. ಇದೀಗ ಹೊಸದೊಂದು ಮೊಬೈಲ್ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಈ ಹೊಸ ಮೊಬೈಲ್ ಹೆಸರು ಮೋಟೋರೊಲಾ ಆಟ್ರಿಕ್ಸ್ 2. ಇದು ಬರುವ ಮೊದಲೇ ಯಾವ ಪರಿಯಲ್ಲಿ ಸದ್ದು-ಸುದ್ದಿ ಮಾಡುತ್ತಿದೆ ಎಂದರೆ ಉಳಿದ ಪ್ರತಿಸ್ಪರ್ಧಿ ಕಂಪೆನಿಗಳಿಗೆ ಚಳಿ-ಜ್ವರ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.

ಬರಲಿರುವ ಈ ಆಟ್ರಿಕ್ಸ್ ನಲ್ಲಿ ಹೇರಳ ಸಾಮರ್ಥ್ಯದ ಡ್ಯುಯಲ್ ಕೋರ್ ಟೆಕ್ಸಾಸ್ ಸಾಧನ OMAP ಪ್ರೊಸೆಸರ್, ಕ್ಲಾಕ್ ಸ್ಪೀಡ್ 1.2 GHz ಅಥವಾ 1.5 GHz ಇರಬಹುದೆಂದು ಹೇಳಲಾಗಿದೆ. ಇದರಲ್ಲಿ 1 GHz NVIDIA ಟೆಗ್ರಾ 2 CPU ಇರಬೇಕೆಂದು ಜನ ಬಯಸುತ್ತಿದ್ದಾರೆ.

ಹೊಸ ಈ ಮೊಬೈಲಿನಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ, ಫುಲ್ HD 1080p ವಿಡಿಯೋಸ್ ಇರುವುದರ ಜೊತೆಗೆ ಇನ್ನೊಂದು ಸೆಕೆಂಡರಿ ಕ್ಯಾಮೆರಾ ಖಂಡಿತವಾಗಿ ಇರುತ್ತದೆ ಎಂದೇ ನಂಬಲಾಗಿದೆ. ಇದು ಬಹಶಃ 2 ಮೆಗಾ ಪಿಕ್ಸೆಲ್ ಆಗಿರುವ ಸಾಧ್ಯತೆ ಹೆಚ್ಚು.

ಆಂಡ್ರಾಯ್ಡ್ 2.3.5 ಆವೃತ್ತಿಯ ಜಿಂಜರ್ ಬ್ರೆಡ್ OS ಇದರಲ್ಲಿ ಇದೆ. ಜೊತೆಗೆ ಗೂಗಲ್ ಟಾಕ್ ಹಾಗೂ ಇನ್ನಿತರ ಗೂಗಲ್ ಆಧಾರಿತ ಅಪ್ಲಿಕೇಶನ್ ಗಳೂ ಇದರಲ್ಲಿರಲಿವೆ. ಕೆಪಾಕ್ಟಿವ್ ಡಿಸ್ ಪ್ಲೇ, ಟಚ್ ಸ್ಕ್ರೀನ್, 4.5 ಇಂಚ್ ಸ್ಕ್ರೀನ್ ಹಾಗೂ 960 x 540 ರೆಸೊಲ್ಯೂಷನ್ ಇದೆ ಎಂದು ಹೇಳಲಾಗಿದೆ.

ಇಷ್ಟೇ ಅಲ್ಲದೇ, ಇದರಲ್ಲಿ ಡೆಸ್ಕ್ ಟಾಪ್ ಕಂಪ್ಯೂಟರ್ ರೀತಿ ಉಪಯೋಗಿಸಬಹುದಾದ ಮಾನಿಟರ್ ಮತ್ತು ಟಿವಿಗಳಿಗೆ ಸಂಪರ್ಕ ಕಲ್ಪಿಸುವ ಡಾಕಿಂಗ್ ಸಿಸ್ಟಮ್ ಸೌಲಭ್ಯ ಲಭ್ಯವಾಗಲಿದೆ. ಇದರ ಬೆಲೆ ಮಾತ್ರ ಸದ್ಯಕ್ಕೆ ತಿಳಿದಿಲ್ಲ. ತಿಳಿದ ತಕ್ಷಣ ಮಾಹಿತಿ ಸಿಗಲಿದೆ ಇಲ್ಲಿ, ನಿರೀಕ್ಷಿಸಿ...

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot