Subscribe to Gizbot

ಎಚ್ ಟಿ ಸಿ-ಮೋಟೋರೊಲಾ ಸ್ಪರ್ಧೆ: ಗೆಲುವು ಯಾರಿಗೆ?

Posted By: Super

ಎಚ್ ಟಿ ಸಿ-ಮೋಟೋರೊಲಾ ಸ್ಪರ್ಧೆ: ಗೆಲುವು ಯಾರಿಗೆ?
ಮೋಟೋರೊಲಾ ಮೊಬೈಲ್ ತನ್ನ ಹೊಸ ಆವಿಷ್ಕಾರದ ಮೊಟೋರೊಲಾ ಆಟ್ರಿಕ್ಷ್ 4G ಮೊಬೈಲ್ಲನ್ನು ಬಿಡುಗಡೆ ಮಾಡಿದೆ. ಈ ಮೊಬೈಲ್ HTC ಥಂಡರ್ ಬೋಲ್ಟ್ ಮೊಬೈಲ್ ಗೆ ತೀವ್ರ ಪ್ರತಿಸ್ಪರ್ಧಿಯಾಗಿದೆ.

ಈ ಎರಡು ಮೊಬೈಲ್ ಸಾಮರ್ಥ್ಯದಲ್ಲಿ ಬಹುತೇಕ ಒಂದೇ ರೀತಿಯಿದ್ದು, ಮುಖ್ಯವಾದ ವ್ಯತ್ಯಾಸವೆಂದರೆ ಮೊಟೋರೊಲಾ ಆಟ್ರಿಕ್ಷ್ 4G ಜಿ ಎಸ್ ಎಮ್ ಜಾಲವನ್ನು ಮಾತ್ರ ಸಪೋರ್ಟ್ ಮಾಡುತ್ತದೆ. HTC ಥಂಡರ್ ಬೋಲ್ಟ್ CDMA ಮಾತ್ರ ಸಪೋರ್ಟ್ ಮಾಡುತ್ತದೆ. ಈ ಎರಡೂ ಮೊಬೈಲ್ ಗಳು 3G ಸಂಪರ್ಕದಲ್ಲಿ ಒಂದೇ ರೀತಿಯ ಕಾರ್ಯ ವೈಖರಿ ಹೊಂದಿದೆ.

164 ಗ್ರಾಂನ HTC ಥಂಡರ್ ಬೋಲ್ಟ್ 135 ಗ್ರಾಂನ ಮೊಟೋರೊಲಾ ಆಟ್ರಿಕ್ಷ್ 4G ಗಿಂತ ತೂಕ ಮತ್ತು ಗಾತ್ರದಲ್ಲಿ ಅಧಿಕವಾಗಿದೆ. ಎರಡೂ ಮೊಬೈಲ್ ಗಳ ಲೌಡ್ ಸ್ಪೀಕರ್ ಉತ್ತಮ ಗುಣ ಮಟ್ಟದಲ್ಲಿದ್ದು ಥಂಡರ್ ಬೋಲ್ಟ್ ಶಬ್ಧದ ವಿಷಯದಲ್ಲಿ ಆಟ್ರಿಕ್ಷ್ 4G ಉತ್ತಮವಾಗಿದೆ. ಥಂಡರ್ ಬೋಲ್ಟ್ ನಲ್ಲಿ768 MB RAMನ್ನು ಬಳಸಿದ್ದು ಆಟ್ರಿಕ್ಷ್ 4G ಯಲ್ಲಿ 1 GB RAMನ್ನು ಬಳಸಿರುವುದರಿಂದ ಆಟ್ರಿಕ್ಷ್ 4G ನಲ್ಲಿ ಶಬ್ಧವು ಹೆಚ್ಚು ಸ್ಪಷ್ಟವಾಗಿ ಕೇಳಿಸುತ್ತದೆ.


ಕ್ಯಾಮೆರಾ ವಿಷಯಕ್ಕೆ ಬಂದಾಗ 8 Mp ಥಂಡರ್ ಬೋಲ್ಟ್ 5 Mpಆಟ್ರಿಕ್ಷ್ 4Gಗಿಂತ ಉತ್ತಮವಾಗಿದೆ. ಬ್ಯಾಟರಿ ಸಾಮರ್ಥ್ಯವು ಮೊಟೋರೊಲಾ ಆಟ್ರಿಕ್ಷ್ 4G ಯಲ್ಲಿ 8-9 ಗಂಟೆಯಿದ್ದು, ಥಂಡರ್ ಬೋಲ್ಟ್ ನಲ್ಲಿ 7 ಗಂಟೆಗಳ ಕಾಲವಿರುತ್ತದೆ.

ಮಾರುಕಟ್ಟೆ ದರ: ಮೊಟೋರೊಲಾ ಆಟ್ರಿಕ್ಷ್ 4G ಬೆಲೆ ರೂ 31,000 ಹಾಗೂ HTC ಥಂಡರ್ ಬೋಲ್ಟ್ ಬೆಲೆ ರೂ 29,000 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot