ಹೊಸ ಹ್ಯುವೈ ಮೊಬೈಲಿಗೆ ದಾರಿ ಬಿಡಿ!

Posted By: Staff

ಹೊಸ ಹ್ಯುವೈ ಮೊಬೈಲಿಗೆ ದಾರಿ ಬಿಡಿ!
125 g. ಮೊಬೈಲ್ ಮಾರ್ಕೆಟ್ ಗೆ ಹೊಸ ಅತಿಥಿಯ ಆಗಮನವಾಗುತ್ತಿದೆ. 4G ಆಧಾರಿತ ಮೊಬೈಲ್ ಹ್ಯಾಂಡ್ ಸೆಟ್ ಸದ್ಯದಲ್ಲೇ ಬರಲಿದೆ. ನಿಜವಾಗಿಯೂ 4G ಬರುತ್ತಿದೆಯೇ ಎಂಬುದು ಎಲ್ಲರೂ ಕೇಳುತ್ತಿರುವ ಪ್ರಶ್ನೆ. ಉತ್ತರ ಹೌದು, ಅದು ಹೊಸ ಹ್ಯುವೈ ಇಮ್ಪಲ್ಸ್ 4G ಹ್ಯಾಂಡ್ ಸೆಟ್.


ಈ 4G ತಂತ್ರಜ್ಞಾನವೆಂದರೆ ಇದು 3G ತಂತ್ರಜ್ಞಾನದ ನವೀಕರಣಗೊಂಡ ಆವೃತ್ತಿ. ಈ ನವೀನ ಆವೃತ್ತಿಯಲ್ಲಿ ಇಂಟರ್ನೆಟ್ ಮತ್ತು ಡೌನ್ ಲೋಡ್ ಕಾರ್ಯಗಳು ಸಾಕಷ್ಟು ವೇಗವಾಗಿ ನಡೆಯುತ್ತವೆ. ಹಾಗಾಗಿ ಇದು ಬಳಕೆದಾರ ಸ್ನೇಹಿ ಎನಿಸಿಕೊಳ್ಳಲಿದೆ.

ಈ ಹೊಸ ಮೊಬೈಲಿನಲ್ಲಿ ಇರುವ ವಿಶೇಷತೆಗಳು ಹೀಗಿವೆ:
* 4G ತಂತ್ರಜ್ಞಾನ
* ಆಂಡ್ರಾಯ್ಡ್ 2.2 ಆವೃತ್ತಿಯ OS
* 4.72 X 2.56 X 0.46 (120 X 65 X 11.9 mm) ಡೈಮೆನ್ಷನ್
* TFT, 480 X 800 ಪಿಕ್ಸೆಲ್ ರೆಸೊಲ್ಯೂಷನ್ ಡಿಸ್ ಪ್ಲೇ
* 3.8 ಇಂಚುಗಳ ಮಲ್ಟಿ ಟಚ್ ಸ್ಕ್ರೀನ್, ಪ್ರಾಕ್ಸಿಮಿಟಿ ಸೆನ್ಸರ್
* 5 ಮೆಗಾ ಪಿಕ್ಸೆಲ್ ಕ್ಯಾಮೆರಾ, ಲೆಡ್ ಫ್ಲಾಶ್, ಆಟೋಫೋಕಸ್
* WiFi 802.11 b/g/n ಡಿವೈಸ್
* 512 MB ಆಂತರಿಕ ಹಾಗೂ ವಿಸ್ತರಿಸಬಲ್ಲ 32 GB ಮೆಮೊರಿ
* ಮಲ್ಟಿಮೀಡಿಯಾದಲ್ಲಿ ಸಾಕಷ್ಟು ವಿಧದ ಆಡಿಯೋ-ವಿಡಿಯೋ ಫೈಲ್ಸ್ ಗಳು

ಹೀಗೆ ಸಾಕಷ್ಟು ವಿಧದ ಸ್ಪೆಷಾಲಿಟಿ ಹಾಗೂ ಸ್ಮಾರ್ಟ್ ಫೋನಿನಲ್ಲಿರುವ ಸಾಮಾನ್ಯು ಫೀಚರ್ಸ್ ಗಳನ್ನು ಹೊಂದಿರುವ ಬರಲಿರುವ ಈ ಹೊಸ 4G ಹ್ಯುವೈ ಇಮ್ಪಲ್ಸ್ ಸ್ಮಾರ್ಟ್ ಫೊನ್ ದರ ಇನ್ನೂ ನಿಗದಿಯಾಗಿಲ್ಲ. ಸದ್ಯದಲ್ಲೇ ನಿರೀಕ್ಷಿಸಿ...

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot