ಎಚ್ ಟಿ ಸಿ ಹೊಸ ಮೊಬೈಲ್ ಈ ತಿಂಗಳಲ್ಲೇ ಬಿಡುಗಡೆ

By Super
|
ಎಚ್ ಟಿ ಸಿ ಹೊಸ ಮೊಬೈಲ್ ಈ ತಿಂಗಳಲ್ಲೇ ಬಿಡುಗಡೆ
ಮೊಬೈಲ್ ಜಗತ್ತಿನಲ್ಲಿ ಎಚ್ ಟಿ ಸಿ ಸಾಕಷ್ಟು ಹೆಸರುವಾಸಿ. ಈಗಾಗಲೇ ಬಹಳಷ್ಟು ಗ್ರಾಹಕರನ್ನು ಹೊಂದಿರುವ ಈ ಕಂಪೆನಿ ಸದ್ಯದಲ್ಲಿಯೇ ಮಾರುಕಟ್ಟೆಗೆ ಹೊಸ ಮೊಬೈಲ್ ಬಿಡುಗಡೆಗೆ ಮುಂದಾಗಿದೆ. ಹೆಸರು ಎಚ್ ಟಿ ಸಿ ರೈಮ್. ಬಿಡುಗಡೆ ಇದೇ ತಿಂಗಳ ಕೊನೆಯಲ್ಲಿ( ಬಹುಶಃ 29ಕ್ಕೆ ). ಎಣಿಸುವಷ್ಟೇ ದಿನ ಬಾಕಿ!

ಈ ಹೊಸ ಮೊಬೈಲ್ ಸಾಕಷ್ಟು ವಿಶೇಷವಾಗಿದೆ. ಇದು ಸ್ಮಾರ್ಟ ಫೊನ್ ಮಾತ್ರ ಅಲ್ಲ, ಗಂಡು-ಹೆಣ್ಣು ಎರಡೂ ವರ್ಗ ಇಷ್ಟಪಡಬಹುದಾದ ಫೊನ್. ಏಕೆಂದರೆ ಸ್ತ್ರೀಯರು ಇಷ್ಟಪಡಬಹುದಾದ ಬಣ್ಣ ಹಾಗೂ ವಿನ್ಯಾಸ ಇದಕ್ಕಿದೆ.

ಈ ಹ್ಯಾಂಡ್ ಸೆಟ್ ನಲ್ಲಿರುವ ಉಳಿದ ವಿಶೇಷತೆಗಳು:
* 3.7 ಇಂಚುಗಳ WVGA ಸ್ಕ್ರೀನ್
* 1 GHz ಸಿಂಗಲ್ ಕೋರ್ ಪ್ರೊಸೆಸರ್
* 768 MB/ RAM
* 5 ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ
* ಆಂಡ್ರಾಯ್ಡ್ v2.3.4 ಜಿಂಜರ್ ಬ್ರೆಡ್ OS
* 3.4 ಆವೃತ್ತಿಯ ಎಚ್ ಟಿಸಿ ಸೆನ್ಸ್ ಯೂಸರ್ ಇಂಟರ್ ಫೇಸ್
* 3G, 802.11 b/g/n ವೈ-ಫೈ, 2.1 A2D ಬ್ಲೂಟೂಥ್, GPS
* ಡೀಸೆಂಟ್ 1600 mAh ಬ್ಯಾಟರಿ ಬ್ಯಾಕಪ್

ಹೀಗೆ ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಹೊಸ ಫೊನ್ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ಕೇವಲ ರು. 8,000. ಇನ್ನೇನು ಹೆಚ್ಚು ದಿನಗಳೇನೂ ಇಲ್ಲ ಬಿಡುಗಡೆಗೆ. ಆದರೆ ಈ ಹೊಸ ಫೊನ್ ಭಾರತಕ್ಕೆ ಬರುವುದ ಯಾವಾಗ ಎಂಬ ರಹಸ್ಯವನ್ನು ಕಂಪೆನಿ ಬಚ್ಚಿಟ್ಟಿದೆ. ಜಾಸ್ತಿ ದಿನ ಕಾಯಿಸದೇ ಈ ಹೊಸ ಫೊನ್ ನಿಮ್ಮ ಕೈಸೇರುವುದು ಗ್ಯಾರಂಟಿ ಬಿಡಿ!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X