ಅಬ್ಬಾ! ಈ ಹೊಸ ಅಪ್ಲಿಕೇಶನ್ ಆಂಡ್ರಾಯ್ಡ್ ಗೇ ಸ್ಪರ್ಧಿ

Posted By: Staff

ಅಬ್ಬಾ! ಈ ಹೊಸ ಅಪ್ಲಿಕೇಶನ್ ಆಂಡ್ರಾಯ್ಡ್ ಗೇ ಸ್ಪರ್ಧಿ
ಜಗತ್ಪ್ರಸಿದ್ಧ ಆಪಲ್ ಕಂಪೆನಿಯ ಐಪೋನ್ ಹಾಗೂ ಐಪ್ಯಾಡ್ ಗಳಿಗೆ ಹೊಸದೊಂದು ಅಪ್ಲಿಕೇಶನ್ ಜೊತೆಯಾಗಲಿದೆ(Instragram 2.0 application for iPhone and iPad) . ಅದು ಇನ್ಸ್ಟಾಗ್ರಾಮ್ 2.0 (Instaragram 2.0). ಈ ಹೊಸ ಅಪ್ಲಿಕೇಶನ್ ಸಂಪೂರ್ಣ ಹೊಸ ರೀತಿಯ ಫೋಟೋ ಶೇರಿಂಗ್ ಸೌಲಭ್ಯದ ಅನುಭವ ನೀಡಲಿದೆ.

ಇನ್ಸ್ಟಾಗ್ರಾಮ್ ಹೊಚ್ಚಹೊಸ ಆವೃತ್ತಿ 2.0 ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಅವಕಾಶಗಳನ್ನು ಬಾಚಿಕೊಳ್ಳಲು ಕಾಯುತ್ತಿದೆ. ಇದು iOS ಡಿವೇಸ್ ಗಳಿಗೆ ಹೇಳಿ ಮಾಡಿಸಿದಂತಿದೆ. ಈ ಹೊಸ ಅಪ್ಲಿಕೇಶನ್ ನವೀಕರಿಸಿದ ಇಂಟರ್ ಫೇಸ್ ಹಾಗೂ ಆಧುನಿಕ ತಂತ್ರಜ್ಞಾನದ ಲೇಯರ್ಸ್ ಹೊಂದಿರುವ ಕ್ಯಾಮೆರಾ ಹೊಂದಿದೆ.

ಉತ್ತಮ ಗುಣಮಟ್ಟದ ಕ್ಯಾಮೆರಾ ಹೊಂದಿರುವ ಮೊಬೈಲುಗಳಿಂದ ಕ್ಯಾಮೆರಾ ತೆಗೆಯುವುದು ಈಗ ಜಗತ್ತಿನಲ್ಲಿ ತೀರಾ ಸಾಮಾನ್ಯವಾಗಿದೆ. ಅದಕ್ಕೆ ಈ ಹೊಸ ಮೊಬೈಲ್ ಅಪ್ಲಿಕೇಶನ್ ತುಂಬ ಉಪಯುಕ್ತವಾಗಲಿದೆ. ಈ ದಿಸೆಯಲ್ಲಿ ಅಮೇಚರ್ ಕಂಪೆನಿ ಸಾಕಷ್ಟು ಪ್ರಸಿದ್ಧಿ. 6 ಜನರನ್ನು ಹೊಂದಿರುವ ಈ ಸಂಸ್ಥೆಯ ಈ ಹೊಸ ಅಪ್ಲಿಕೇಶನ್, 150 ಮಿಲಿಯನ್ ಡೌನ್ ಲೋಡ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದಂದಿನಿಂದ ಹೊಂದಿದೆ ಎಂದರೆ ಇದರ ಯಶಸ್ಸು ಯಾವ ಮಟ್ಟದಲ್ಲಿದೆ ಎಂಬುದನ್ನು ತಿಳಿಯಬಹುದು.

ಇಮೇಜ್ ಗಳಿಗೆ ಅತಿ ಸುಲಭವಾಗಿ ಹೊಂದಿಕೆಯಾಗಬಲ್ಲ 4 ಲೇಯರ್ ಗಳನ್ನು ಹೊಂದಿರುವುದು ಈ ಇನ್ಸ್ಟಾಗ್ರಾಮ್ 2.0 ನ ವಿಶೇಷತೆಯಾಗಿದೆ. ಇದು ಮೊದಲಿನದಕ್ಕಿಂತ 200 ಪಟ್ಟು ಹೆಚ್ಚು ಪ್ರಬಲವಾಗಿದೆ. ಇಷ್ಟೇ ಅಲ್ಲ, ಇದು ಈಗ ಮಾರ್ಕೆಟ್ ನಲ್ಲಿ ರಾಜನಾಗಿ ಮೆರೆಯುತ್ತಿರುವ ಆಂಡ್ರಾಯ್ಡ್ ಅಪ್ಲಿಕೇಶನ್ ಗೆ ಅತ್ಯಂತ ಪ್ರಬಲ ಸ್ಪರ್ಧಿಯಾಗಲಿದೆ.

ಈ ಹೊಸ ಅಪ್ಲಿಕೇಶನ್ನಿನ ಪ್ರಾರಂಭಿಕ ಹಂತಗಳು ಮೊದಲಿನದರ ರೀತಿಯಲ್ಲೇ ಇದ್ದು ಆನಂತರ ಉನ್ನತ ಗುಣಮಟ್ಟದ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸಲಿದೆ. ಸದ್ಯಕ್ಕೆ ಕೇವಲ ಆಪಲ್ ಕಂಪೆನಿಯ ಐಫೋನ್ ಮತ್ತು ಐಪ್ಯಾಡ್ ನಲ್ಲಿ ಇದನ್ನು ಇನ್ಸ್ಟಾಲ್ ಮಾಡಿಕೊಳ್ಳಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot