ಹೊಸ ಸ್ಯಾಮ್ ಸಂಗ್ ಫೊನ್ ಶೀಘ್ರ ಬರಲಿದೆ

Posted By: Staff

ಹೊಸ ಸ್ಯಾಮ್ ಸಂಗ್ ಫೊನ್ ಶೀಘ್ರ ಬರಲಿದೆ
ಜಗತ್ತಿನಲ್ಲಿ ಸ್ಯಾಮ್ ಸಂಗ್ ಫೊನ್ ಬಹಳಷ್ಟು ಪ್ರಸಿದ್ಧಿ. ಈ ಕಂಪೆನಿ ಗ್ಯಾಜೆಟ್ಸ್ ಲೋಕದಲ್ಲಿ ಪ್ರಬಲ ಸ್ಪರ್ಧಿ. ಈಗಾಗಲೇ ಮಾರುಕಟ್ಟೆಯಲ್ಲಿ ಹೇರಳವಾಗಿವೆ ಸ್ಯಾಮ್ ಸಂಗ್ ಕಂಪೆನಿಯ ಸಾಕಷ್ಟು ವಿಧದ ಮೊಬೈಲುಗಳು. ಇದೀಗ ಹೊಸ ಮೊಬೈಲ್ ಸ್ಯಾಮ್ ಸಂಗ್ shv e120l ಬಿಡುಗಡೆಗೆ ರೆಡಿಯಾಗಿದೆ.

ಈ ಮೊಬೈಲಿನಲ್ಲಿರುವ ವಿಶೇಷತೆಗಳು:
* 4.7 ಇಂಚುಗಳು, 16M ಕಲರ್, ಕೆಪಾಕ್ಟಿವ್ ಟಚ್ ಸ್ಕ್ರೀನ್
* 4.7 ಇಂಚ್ HD ಡಿಸ್ ಪ್ಲೇ/ 1280 x 720 ರೆಸೊಲ್ಯೂಷನ್
* 1.5 GHz ಡ್ಯುಯಲ್ ಕೋರ್ ಪ್ರೊಸೆಸರ್/ MSM8660/MDM9600 ಚಿಪ್ ಸೆಟ್
* ಆಂಡ್ರಾಯ್ಡ್ v2.3.5 ಜಿಂಜರ್ ಬ್ರೆಡ್ OS
* 1 GB RAM ಮತ್ತು 16 GB ಆಂತರಿಕ ಮೆಮೊರಿ/ ವಿಸ್ತರಿಸಬಲ್ಲ 32 GB
* LTE ರೇಡಿಯೋ, 8 ಮೆಗಾ ಪಿಕ್ಸೆಲ್ ಕ್ಯಾಮೆರಾ/ 2 ಮೆಗಾ ಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ/ 1080p ವಿಡಿಯೋ ರೆಕಾರ್ಡಿಂಗ್/ 1920 x 1080 ರೆಸೊಲ್ಯೂಷನ್
* LED ಫ್ಲಾಶ್ ತಂತ್ರಜ್ಞಾನ, ಜಿಯೋ ಟ್ಯಾಗಿಂಗ್, ನೈಟ್ ಮೋಡ್, ಫೇಸ್ ಡಿಟೆಕ್ಷನ್
* 3.0 ಆವೃತ್ತಿಯ ಬ್ಲೂಟೂಥ್, GPS, GSM ಗೆ 3G ಸಹಕಾರ ಇರಬಹುದೆಂಬ ಅಂದಾಜು
* ವೈ-ಫೈ, ಸೋಷಿಯಲ್ ನೆಟ್ ವರ್ಕ್
* ಉತ್ಕೃಷ್ಟ 1850 Li-Po ಬ್ಯಾಟರಿ

ಹೀಗೆ ಬರಲಿರುವ ಹೊಸ ಸ್ಯಾಮ್ ಸಂಗ್ ಫೋನಿನಲ್ಲಿರುವ ವಿಶೇಷತೆಗಳ ಮಾಹಿತಿ ದೊರೆತಿದ್ದರೂ ಬೆಲೆ ಮಾತ್ರ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಆಕರ್ಷಕ ಬೆಲೆ ಖಂಡಿತ ಎಂದು ನಂಬಲಾಗಿದೆ. ಏಕೆಂದರೆ ಸ್ಯಾಮ್ ಸಂಗ್ ಬಹು ಬುದ್ಧಿವಂತ ಕಂಪೆನಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot