Subscribe to Gizbot

ಸ್ಯಾಮ್ ಸಂಗ್ ಮತ್ತು ಆಪಲ್ ಐಫೋನ್ ಪ್ರಬಲ ಸ್ಪರ್ಧೇ!

Posted By: Super

ಸ್ಯಾಮ್ ಸಂಗ್ ಮತ್ತು ಆಪಲ್ ಐಫೋನ್ ಪ್ರಬಲ ಸ್ಪರ್ಧೇ!
ಮೊಬೈಲ್ ಮಾರುಕಟ್ಟೆಯಲ್ಲೀಗ ಎಲ್ಲೆಲ್ಲೂ ಯುದ್ಧದ ವಿಷಯವೇ! ಅದು ಆಪಲ್ ಮತ್ತು ಸ್ಯಾಮ್ ಸಂಗ್ ಯುದ್ಧದ ವಿಷಯ. ಸ್ಯಾಮ್ ಸಂಗ್ ವಿರುದ್ಧ್ ಕೇಸ್ ದಾಖಲಿಸಿ ಹೊರಾಡುವ ಗುಟುರು ಹಾಕುತ್ತಿದೆ, ಆಪಲ್ ಗ್ಯಾಜೆಟ್ ಸಂಸ್ಥೆ. ಸ್ಯಾಮ್ ಸಂಗ್ ಹೊರ ತರುತ್ತಿರುವ ಹೊಸ ಗೆಲಾಕ್ಸಿಗೆ ತನ್ನ ವಿನ್ಯಾಸವನ್ನು ಕಾಪಿ ಮಾಡುವುದರ ಮೂಲಕ ಪೇಟೆಂಟ್ ಕಾಯ್ದೆಯನ್ನ ಅದು ಉಲ್ಲಂಘಿಸಿದೆ ಎಂಬುದು ಆಪಲ್ ಆರೋಪ.

ಹೀಗಾಗಿ, ಇದೀಗ ಮೊಬೈಲ್ ಮಾರುಕಟ್ಟೆಯಲ್ಲಿ ಈ ಕಂಪೆನಿಗಳ ಮಧ್ಯೆ ಶೀತಲ ಸಮರ ಪ್ರಾರಂಭವಾಗಿದೆ. ಈ ಕಂಪೆನಿಗಳಿಂದ ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿರುವ ಫೋನುಗಳು ಸ್ಯಾಮ್ ಸಂಗ್ ಸ್ಟ್ರೆಟೋಸ್ಪಿಯರ್ ಹಾಗೂ ಆಪಲ್ i5.

ಆಪಲ್ ಐಫೋನ್ ಸೀರೀಸ್ ಸ್ಮಾರ್ಟ್ ಫೋನುಗಳಿಗೆ ಜಗತ್ತಿನೆಲ್ಲೆಡೆ ಸಾಕಷ್ಟು ಬೇಡಿಕೆಯಿದೆ. ಆಪಲ್ ಗ್ರಾಹಕರಿಗಂತೂ ಅದೇ ಜಗತ್ತು. ಆದರೆ ಏಷ್ಯಾ ಮಾರುಕಟ್ಟೆಯಲ್ಲಿ ಅದಕ್ಕೆ ಸಾಕಷ್ಟು ಪೈಪೋಟಿ ಇದೆ. ಈಗಂತೂ ಸ್ಯಾಮ್ ಸಂಗ್ ಅದಕ್ಕೆ ಪ್ರಬಲ ಸ್ಪರ್ಧಿ. ಹಾಗಾಗಿ ಇವೆರಡರ ಸ್ಪರ್ಧೆ ಮಾರುಕಟ್ಟೆಯಲ್ಲಿ ಬಿಸಿ ಬಿಸಿ ಸುದ್ದಿಯಾಗಿದೆ.

ಸ್ಯಾಮ್ ಸಂಗ್ ಸ್ಟ್ರೆಟೋಸ್ಪಿಯರ್ ಸಾಕಷ್ಟು ಆಧುನಿಕ ಹಾಗೂ ಸ್ಟೈಲಿಶ್. ಸಂಪೂರ್ಣ ಕ್ವೆರ್ಟಿ ಸ್ಲೈಡರ್ ಕೀ ಪ್ಯಾಡ್ ಮತ್ತು ಹೈ ಎಂಡ್ ಕಾನ್ಪಿಗರೆಶನ್ ಹೊಂದಿದೆ. ಆಪಲ್ ಕೆಪಾಕ್ಟಿವ್ ಡಿಸ್ ಪ್ಲೇ ಹಾಗೂ ಆಂಡ್ರಾಯ್ಡ್ OS ಹೊಂದಿದೆ. 5 ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ, 1.3 ಸೆಕೆಂಡರಿ ಕ್ಯಾಮೆರಾ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಇದರಲ್ಲಿದೆ. ಇದು 1GB RAM ಮತ್ತು ಅತ್ಯಂತ ಸಮರ್ಥ 1.4 GHz ಆಪಲ್ A5 ಡ್ಯುಯಲ್ ಕೋರ್ ಪ್ರೊಸೆಸರ್ ಹೊಂದಿದೆ. ಇದರ ಪ್ರತಿಸ್ಪರ್ಧಿ ಸ್ಯಾಮ್ ಸಂಗ್ ನಲ್ಲಿ ಏನೇನಿದೆ ಎಂಬುದು ಸದ್ಯಕ್ಕೆ ರಹಸ್ಯ.

ಇನ್ನು ಅತ್ಯಂತ ಪ್ರಮುಖವಾದ ಬೆಲೆ ವಿಷಯಕ್ಕೆ ಬಂದರೆ ಸ್ಯಾಮ್ ಸಂಗ್ ಸ್ಟ್ರೆಟೋಸ್ಪಿಯರ್ ಬೆಲೆ ಇನ್ನೂ ನಿಗದಿಯಾಗಿಲ್ಲ. ಆಪಲ್ ಐಫೋನ್ 5 ಬೆಲೆ ಭಾರತದ ಮಾರಕಟ್ಟೆ ರು. 40,000. ಎರಡೂ ಮೊಬೈಲುಗಳೂ ಸೂಪರ್, ಆಯ್ಕೆ ನಿಮ್ಮದು!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot