Subscribe to Gizbot

ಸ್ಯಾಮ್ ಸಂಗ್ ಮೊಬೈಲಿನಿಂದ ಇನ್ನು ಪೇಮೆಂಟ್ ಮಾಡಬಹುದು

Posted By: Super

ಸ್ಯಾಮ್ ಸಂಗ್ ಮೊಬೈಲಿನಿಂದ ಇನ್ನು ಪೇಮೆಂಟ್ ಮಾಡಬಹುದು
ಈಗಿನ ಪ್ರಪಂಚ ತುಂಬಾ ಫಾಸ್ಟ್ ಫಾಸ್ಟ್. ಸಮಯಕ್ಕೆ ಸೈಟ್ ಗಿಂತ ಹೆಚ್ಚು ಬೆಲೆ. ಹಾಗಾಗಿಯೇ ಬರುವಂತಾಗಿದ್ದು ಎಟಿಎಮ್ ಹಾಗೂ ಕ್ರೆಡಿಟ್ ಕಾರ್ಡ್ಸ್. ಆದರೆ ಕಾಲ ಅಲ್ಲಿಗೇ ನಿಂತಿಲ್ಲವಲ್ಲ, ನಿಲ್ಲಲು ಸಾಧ್ಯವೂ ಇಲ್ಲ. ಕಾಲನ ಓಟಕ್ಕೆ ಜೊತೆಯಾಗಲು ಇದೀಗ ಬರುತ್ತಿದೆ, ಸ್ಯಾಮ್ ಸಂಗ್ ಕಂಪೆನಿಯ ಹೊಸ ಹ್ಯಾಂಡ್ ಸೆಟ್ ವೇವ್ 578.

ಈ ಹೊಸ ಸ್ಯಾಮ್ ಸಂಗ ವೇವ್ ಮೂಲಕ ಶಾಪಿಂಗ್ ಪೇಮೆಂಟ್ ಮಾಡಬಹುದು. ಇದು ಬಹಳಷ್ಟು ಆಧುನಿಕ ಹಾಗೂ ಬೇರೆ ಮೊಬೈಲುಗಳಿಗಿಂತ ಭಿನ್ನವೂ ಆಗಿದೆ. ಈ ಹೊಸ ಮೊಬೈಲ್ ಮೂಲಕ ಬಳಕೆದಾರರು ರಿಟೆಲ್ ಶಾಪ್ ಅಥವಾ ಸ್ಟೋರ್ಸ್ ನಲ್ಲಿ ವ್ಯಾಪಾರ ಮಾಡಿದ ಮೇಲೆ ಕಾಂಟಾಕ್ಟ್ ಲೆಸ್ ರೀಡರ್ ಗೆ ವೇವಿಂಗ್ ಮಾಡಿದರಾಯಿತು.

ಸೆನ್ಸರ್ ಮೂಲಕ ಕಾರ್ಯವೆಸಗುವ ಈ ತಂತ್ರಜ್ಞಾನವನ್ನು ಸ್ಯಾಮ್ ಸಂಗ್ ಮೂಲಕ ಪರಿಚಯಿಸುತ್ತಿದೆ, ನಿಯರ್ ಫಿಲ್ಡ್ ಕಮ್ಯುನಿಕೇಶನ್ಸ್ (NFC). ಹೀಗೆ, ಈ ಹೊಸ ತಂತ್ರಜ್ಞಾನದಿಂದ ವ್ಯಾಪಾರದ ಹೊಸ ಅನುಭವದ ಜೊತೆ ಸಮಯದ ಉಳಿತಾಯವೂ ಆದಂತಾಯಿತು.

ಈ ವೇವ್ 578 ಮೊಬೈಲ್ ಬಾಡಾ ಪ್ಲಾಟ್ ಫಾರ್ಮ್ ಮೂಲಕ ಕಾರ್ಯ ನಿರ್ವಹಿಸುವ ಬೆಸ್ಟ್ ಹ್ಯಾಂಡ್ ಸೆಟ್. ಈ ಬಾಡಾ, ದೀರ್ಘ ಬಾಳಿಕೆಯ ಜೊತೆಗೆ ಉತ್ಕೃಷ್ಟ ಗುಣಮಟ್ಟಕ್ಕೆ ಹೆಸರುವಾಸಿ. ಇಷ್ಟೇ ಅಲ್ಲದೇ, ಈ ಹ್ಯಾಂಡ್ ಸೆಟ್ ನಲ್ಲಿ 3.2 ಇಂಚುಗಳ ವೈಡ್ ಟಚ್ ಡಿಸ್ ಪ್ಲೇ, ಮಲ್ಟಿ ಟಚ್ ಸೌಲಭ್ಯ, TFT ತಂತ್ರಜ್ಞಾನ ಇದೆ. ಜೊತೆಗೆ ವೈ-ಫೈ, ಬ್ಯೂಟೂಥ್, 3G, ಸಾಮಾಜಿಕ ತಾಣಗಳು ಇದರಲ್ಲಿ ಲಭ್ಯ.

ಈ ಸೌಲಭ್ಯ ಹೊಂದಲು ಸರಳ ವಿಧಾನವೆಂದರೆ ಬಾರ್ಕ್ ಲೇ ಕಾರ್ಡ್, ಬಾರ್ಕ್ ಲೇ ಡೆಬಿಟ್ ಕಾರ್ಡ್. ಇದನ್ನು ಹೊಂದಿದ ನಂತರ $100 ನಷ್ಟು ಹಣವನ್ನು ಸ್ಯಾಮ್ ಸಂಗ್ ವೇವ್ 578 ಹ್ಯಾಂಡ್ ಸೆಟ್ ನಲ್ಲಿರುವ ಅಪ್ಲಿಕೇಶನ್ನಿಗೆ ವರ್ಗಾಯಿಸಿದರಾಯಿತು. ನಂತರ ನೀವು ಮಾಡುವ ಶಾಪಿಂಗ್ ತೀರಾ ಸರಳ. ಏಕೆಂದರೆ, ನಂತರ ನೀವು ಮಾಡಬೇಕಾದ ಕೆಲಸವನ್ನೆಲ್ಲಾ ನೋಡಿಕೊಳ್ಳುತ್ತದೆ, ಈ ಹೊಸ ಸ್ಯಾಮ್ ಸಂಗ್ ವೇವ್ 578.

ಇದರಲ್ಲಿರುವ ಕ್ವಿಕ್ ಟಾಪ್ ಅಪ್ಲಿಕೇಶನ್ ನಲ್ಲಿ ಸೆಕ್ಯುರಿಟಿ ಅಪ್ಲಿಕೇಶನ್ ಕೂಡ ಇದೆ. ಹಾಗಾಗಿ ದುರುಪಯೋಗವನ್ನು ಕೂಡ ತಪ್ಪಿಸಬಹುದು. ಸದ್ಯಕ್ಕೆ ಈ ಸೌಲಭ್ಯ ಇಂಗ್ಲೆಂಡಿನಲ್ಲಿ ರು. 50,000 ಕ್ಕೆ ಲಭ್ಯ. ನೋಡಿ, ನಿಮಗೆ ಈ ಸೌಲಭ್ಯ ಲಭ್ಯವಾಗಲು ಸಾಧ್ಯವೇ ಎಂಬುದನ್ನು. ಸಾಧ್ಯವಾದರೆ ನೀವು ತುಂಬಾ ಲಕ್ಕಿ ಕಣ್ರೀ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot