ಬ್ಲಾಕ್ ಬೆರ್ರಿಯಲ್ಲಿನ್ನು ಫುಲ್ ಲೋಕಲ್ ಆಧಾರಿತ ಸೇವೆ!

Posted By: Staff

ಬ್ಲಾಕ್ ಬೆರ್ರಿಯಲ್ಲಿನ್ನು ಫುಲ್ ಲೋಕಲ್ ಆಧಾರಿತ ಸೇವೆ!
ಈಗ ಮಾರುಕಟ್ಟೆಗೆ ಬರುವ ಹೆಚ್ಚಿನ ಫೊನುಗಳು 3G ಗೆ ಬದಲಾಗಿ ವೈ-ಫೈ ಸಹಕಾರದ ಮೂಲಕ ಕಾರ್ಯ ನಿರ್ವಹಿಸುತ್ತವೆ. ಇದೀಗ ಬ್ಯಾಕ್ ಬೆರ್ರಿ ವೈ-ಫೈ ಮೂಲಕ ಸಾಧ್ಯವಾದಷ್ಟೂ ಹೆಚ್ಚು ಲಾಭಗಳಿಸಲು ತುದಿಗಾಲಲ್ಲಿ ನಿಂತಿದೆ. RIM ನ ಹೊಸ ಬೆಳವಣಿಗೆಗನುಗುಣವಾಗಿ ಬ್ಲಾಕ್ ಬೆರ್ರಿ ಇನ್ನು ಮುಂದೆ ಪ್ರಾದೇಶಿಕ ಆಧಾರಿತ ಸೇವೆ ನೀಡಲಿದೆ. ಈ ಸೇವೆ GPS ಸಹಕಾರದೊಂದಿಗೆ ಲಭ್ಯವಾಗಲಿದೆ.

ವೈ-ಫೈ ನೆಟ್ ವರ್ಕ್ ಮೂಲಕ ಕಾರ್ಯ ನಿರ್ವಹಿಸುವ ಬ್ಲಾಕ್ ಬೆರ್ರಿಯ ಹ್ಯಾಂಡ್ ಸೆಟ್ ಎಲ್ಲಿದ್ದರೂ ಸಮಸ್ಯೆ ಇಲ್ಲ. ಈ ವೈ-ಫೈ ಸೌಲಭ್ಯದ ಮೂಲಕ ನಿರ್ಧಿಷ್ಟ ಪ್ರದೇಶದ ಮಾಹಿತಿಯನ್ನು ಅಗತ್ಯಕ್ಕನುಗುಣವಾಗು ಹಂಚಿಕೊಳ್ಳಬಹುದು ಹಾಗೂ ಕಳುಹಿಸಬಹುದು.

ಈ ಜಿಯೋ ಲೊಕೇಶನ್ ವೈ-ಫೈ ನೆಟ್ ವರ್ಕ್ ಫೀಚರ್ ಅತ್ಯಂತ ವೇಗಿ, ಉತ್ಕೃಷ್ಟ ಹಾಗೂ ಸರಳ ಕೂಡ. ಇದು ಸುಮಾರು 60 ರಿಂದ 200 ಮೀಟರ್ ವ್ಯಾಪ್ತಿಯಲ್ಲಿ ತುಂಬಾ ಪರಿಣಾಮಕಾರಿಯಾಗಿದೆ.

ಈಗಾಗಲೇ ಬ್ಲಾಕ್ ಬೆರ್ರಿ ಆಪರೇಟಿಂಗ್ ಸಿಸ್ಟಮ್ ಅನ್ನು ಅಪ್ ಡೇಟೆಡ್ ಮಾಡಿರುವ RIM, ಆ ಮೂಲಕ OS ಗೇ ಸಾಕಷ್ಟು ಲಾಭವಾಗಲಿದೆ. ಈ ಹೊಸ ಆವೃತ್ತಿಯ ಹೆಸರು ಬ್ಯಾಕ್ ಬೆರ್ರಿ OS 6 ಎಂದಾಗಿದೆ. ಇದನ್ನು (API) Application Programming Interface ನ ಹೊಸ ಸೇರ್ಪಡೆ ಎಂದು ಹೇಳಲಾಗುತ್ತಿದೆ.

ಇವುಗಳಲ್ಲಿ ಕೆಲವೊಂದು ಪ್ರಾದೇಶಿಕ ಸೇವೆಗಳು ಸಾಮಾಜಿಕ ತಾಣಗಳಲ್ಲಿ ಉಪಯೋಗಿಸಲ್ಪಡುತ್ತಿವೆ. ಹಾಗಾಗಿ ಭವಿಷ್ಯದಲ್ಲಿ ಇದು ಸಾಕಷ್ಟು ಪ್ರಯೋಜನಕಾರಿ ಆಗಲಿದೆ. ಈಗ ಹೊಸ ಬ್ಲಾಕ್ ಬೆರ್ರಿ ಡಿವೈಸ್ ಗಳಲ್ಲಿ ಈ ಸೇವೆಯನ್ನು ನೀಡಲು RIM ಪ್ರಾರಂಭ ಮಾಡಿದೆ. ಇದೀಗ ಕಾರ್ಯರೂಪದ ಹಂತದಲ್ಲಿರುವ ಇದು ಸದ್ಯದಲ್ಲಿಯೇ ಪೂರ್ಣಗೊಂಡು ಸೇವೆಗೆ ಸಿದ್ಧವಾಗಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot