Subscribe to Gizbot

ಹೊಸ ಎಲ್ ಜಿ ಎಸ್ಟೀಮ್ ಮೊಬೈಲ್ ಮಾರುಕಟ್ಟೆಗೆ

Posted By: Super

ಹೊಸ ಎಲ್ ಜಿ ಎಸ್ಟೀಮ್ ಮೊಬೈಲ್ ಮಾರುಕಟ್ಟೆಗೆ
ಎಲ್ ಜಿ ಹೊಸ ಮೊಬೈಲ್ ಫೊನ್ ಬಿಡುಗಡೆಯಾಗಲಿದೆ. ಹೆಸರು ಎಲ್ ಜಿ ಎಸ್ಟೀಮ್. ಈ ವಿಷಯ ಇದೀಗ ಜಗಜ್ಜಾಹೀರಾಗಿದೆ. ಆದರೆ ಈ ವಿಷಯ ಕಂಪೆನಿ ಕಡೆಯಿಂದ ಬಂದಿದ್ದಲ್ಲ, ಹೀಗೇ ಸಾಮಾಜಿಕ ತಾಣಗಳ ಮೂಲಕ ತಲುಪಿದ್ದು. ಈ ಹೊಸ ಮೊಬೈಲ್ ಹೇಗಿರಬಹುದು, ಏನೇನು ಆಧುನಿಕ ತಂತ್ರಜ್ಞಾನ ಇದರಲ್ಲಿರುಬಹುದು ಎಂಬ ನಿಮ್ಮ ಸಹಜ ಕುತೂಹಲಕ್ಕೆ ಇಲ್ಲಿದೆ ಉತ್ತರ...

ಮೊದಲನೆಯದಾಗಿ ಇದರಲ್ಲಿ ಆಕರ್ಷಕ ಸ್ಕ್ರೀನ್ ಡಿಸ್ ಪ್ಲೇ ಹಾಗೂ ಕಾಂಪಾಕ್ಟ್ ಡಿಸೈನ್ ಇದೆ. ಇದು CDMA, LTE ತಂತ್ರಜ್ಞಾನ ಹೊಂದಿದೆ. 1 GHz ಕ್ಯುಲ್ ಕಾಮ್ ಸ್ನಾಪ್ ಡ್ರಗಾನ್ ಪ್ರೊಸೆಸರ್, ಎಲ್ ಜಿ 2000 ಎಲ್ಟಿಇ ಕನೆಕ್ಟಿವಿಟಿ ಇದೆ.

ಕೆಪಾಕ್ಟಿವ್ ಟಚ್ ಸ್ಕ್ರೀನ್ TFT, 262 K, 800 X 480 ಪಿಕ್ಸೆಲ್ ರೆಸೊಲ್ಯೂಷನ್, 4.3 ಇಂಚ್ ಡಿಸ್ ಪ್ಲೇ, USB 2.0, 1,500 mAh ಬ್ಯಾಟರ, 3.5 ತಾಸುಗಳ ಟಾಕ್ ಟೈಮ್, 200 ತಾಸುಗಳ ಸ್ಟ್ಯಾಂಡ್ ಬೈ ಇದರಲ್ಲಿದೆ.

8 GB ಆಂತರಿಕ ಮೆಮೊರಿ, 512 MB RAM, ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಹುದಾದ 32 GB, 1.3 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ, ವೀಡಿಯೋ ಕಾಲ್ ಫೀಚರ್, ಆಡಿಯೋ & ವೀಡಿಯೋ ಕಾಪ್ಚರಿಂಗ್, 5 ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ, ಆಟೋ ಫೋಕಸ್ & ಲೆಡ್ ಫೀಚರ್ಸ್, 720p HD ವೀಡಿಯೋ ರೆಕಾರ್ಡಿಂಗ್, 3.2x ಝೂಮ್ ಸೌಲಭ್ಯ ಇದರಲ್ಲಿವೆ.

ಈ ಹೊಸ ಮೊಬೈಲ್ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು ರು. 18,000 ಆಗಲಿದೆ. ಬಿಡುಗಡೆಯ ದಿನಾಂಕ ಮತ್ತು ದರ ಕಂಪೆನಿ ಕಡೆಯಿಂದ ನಿಗದಿಯಾಗಿಲ್ಲ. ಹಾಗಾಗಿ ಎಲ್ ಜಿ ಅಭಿಮಾನಿಗಳಿಗೆ ಕಾಯುವುದು ಸದ್ಯಕ್ಕೆ ಅನಿವಾರ್ಯ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot