Subscribe to Gizbot

ನೋಕಿಯಾ ಮೊಬೈಲ್ ಇನ್ನು ಕಾರ್ ಸ್ನೇಹಿಯಾಗಲಿದೆ

Posted By: Super

ನೋಕಿಯಾ ಮೊಬೈಲ್ ಇನ್ನು ಕಾರ್ ಸ್ನೇಹಿಯಾಗಲಿದೆ
ನೋಕಿಯಾ ಮೊಬೈಲ್ ಜಗತ್ತಿನಾದ್ಯಂತ ಪ್ರಸಿದ್ಧ. ಇದರ ಅಸಂಖ್ಯಾತ ಗ್ರಾಹಕರು ಜಗತ್ತಿನೆಲ್ಲೆಡೆ ಇದ್ದಾರೆ. ಈ ಮೊಬೈಲ್ ಎಲ್ಲಾ ವರ್ಗದವರಿಗೂ ಮತ್ತು ಸಾಮಾನ್ಯ ಜನರಿಗೂ ಅತ್ಯಂತ ಸರಳ ಹಾಗೂ ಉಪಯುಕ್ತ. ಆಗಾಗ ಹೊಸ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಬರುವ ಇದು ಸಂಪೂರ್ಣ ಗ್ರಾಹಕ ಸ್ನೇಹಿ ಎನಿಸಿದೆ. ಇದೀಗ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಬರುತ್ತಿದೆ ಮಾರುಕಟ್ಟೆಗೆ ನೋಕಿಯಾ.

ಅದು ಕಾರ್ ಮಾಲೀಕರಿಗೆ ಹಾಗೂ ಡ್ರೈವರ್ ಗಳಿಗೆ ಅನುಕೂಲವಾಗುವ ಡ್ರೈವಿಂಗ್ ಸ್ನೇಹಿ ಅಪ್ಲಿಕೇಶನ್. ಈ ಕಾರ್ ಆಡ್ ಫಿಚರ್ ನಲ್ಲಿ ಕಾರ್ ಡ್ರೈವಿಂಗ್ ಮಾಡುವವರಿಗೆ ಟ್ರಾಫಿಕ್ ಅಪ್ ಡೇಟ್ಸ್ ಮತ್ತು ಸಿಟಿಯ ನಕ್ಷೆ ಹಾಗೂ ರಸ್ತೆಗಳ ಸಂಪೂರ್ಣ ಮಾಹಿತಿ ಲಭ್ಯವಿದೆ. ಹಾಗೂ ಕಾರು ಚಾಲನೆ ಮಾಡುತ್ತಿರುವವರಿಗೆ ಬೋರಾಗದಂತೆ ಮನರಂಜನಾ ಸೌಲಭ್ಯ ಕೂಡ ಇದರಲ್ಲಿದೆ. ಏಕಾಗ್ರತೆ ಭಂಗವಾಗದಂತಹ ಸುಮಧುರ ಸಂಗೀತವನ್ನು ಇದು ಹೊಂದಿದೆ.

ಆದರೆ ಸದ್ಯಕ್ಕೆ ಇದು ಕೆಲವೇ ಮಾದರಿಯ ನೋಕಿಯಾ ಹ್ಯಾಂಡ್ ಸೆಟ್ ಗಳಲ್ಲಿ ಲಭ್ಯ. ಅವು, ನೋಕಿಯಾ 600, 700, 701 ಮತ್ತು ನೋಕಿಯಾ N9.

ಕಾರ್ ಹೊಂದಿರುವವರಲ್ಲಿ ಸ್ಮಾರ್ಟ್ ಫೊನ್ ಇರುವುದೂ ಅತೀ ಸಾಮಾನ್ಯ. ನೋಕಿಯಾ ಕಂಪೆನಿಗೆ ಇದರ ಅರಿವು ಚೆನ್ನಾಗಿಯೇ ಇರುವುದರಿಂದ ಅದು ತನ್ನ ಸ್ಮಾರ್ಟ್ ಫೋನುಗಳಲ್ಲೇ ಈ ಸೌಲಭ್ಯ ಒದಗಿಸಲು ಮುಂದಾಗಿದೆ. ಈ ಸೌಲಭ್ಯ ಹೊಂದಿರುವ ಮೊಬೈಲುಗಳು ಈಗ ಮೊದಲಿಗಿಂತ ಹೆಚ್ಚು ಮೆಮೊರಿ ಸಾಮರ್ಥ್ಯ ಹೊಂದಿರುವುದಲ್ಲದೇ 8 MP ಕ್ಯಾಮೆರಾ ಕೂಡ ಹೊಂದಿವೆ.

ಇವುಗಳ ಬೆಲೆ, ನೋಕಿಯಾ 600- ರು. 12,000, ನೋಕಿಯಾ 700- ರು. 18,000 ಹಾಗೂ ಉಳಿದವು ಸುಮಾರು ರು. 20,000 ಆಗಲಿವೆ. ಈ ಮೊಬೈಲಿನಲ್ಲಿರುವ ಉಪಯುಕ್ತತೆಗೆ ಹೋಲಿಸಿದರೆ ಬೆಲೆ ಕಡಿಮೆ ಎಂದೇ ಹೇಳಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot