ಹೊಸ ವಾಟರ್ ಪ್ರೂಫ್ ಮೊಬೈಲ್ ಸದ್ಯದಲ್ಲೇ ನಿಮ್ಮ ಕೈನಲ್ಲಿ!

Posted By: Staff

ಹೊಸ ವಾಟರ್ ಪ್ರೂಫ್ ಮೊಬೈಲ್ ಸದ್ಯದಲ್ಲೇ ನಿಮ್ಮ ಕೈನಲ್ಲಿ!
ಜಗತ್ತಿನೆಲ್ಲೆಡೆ ಮೊಬೈಲುಗಳ ಸದ್ದು ಜೋರಾಗಿದೆ. ಗ್ಯಾಜೆಟ್ಸ್ ಗಳ ಲೋಕದಲ್ಲಿ ಮೊಬೈಲ್ ಅತ್ಯುನ್ನತ ಸ್ಥಾನದಲ್ಲಿ ವಿರಾಜಮಾನವಾಗಿದೆ. ಹೊಸ ಹೊಸ ತಂತ್ರಜ್ಞಾನ ಆಧಾರಿತ ಮೊಬೈಲುಗಳು ಹೇರಳವಾಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಐಟಿ ಉತ್ಪನ್ನಗಳು ಮತ್ತು ಸೇವೆ ಆಧಾರಿತ ಕಂಪೆನಿ ಫ್ಯುಜಿತ್ಸು, ಹೊಸ ವಾಟರ್ ಪ್ರೂಫ್ ಮೊಬೈಲ್ ಫೊನ್ ಬಿಡುಗಡೆಗೆ ಸಜ್ಜಾಗಿದೆ. ಹೆಸರು ಆರೋಸ್ Z ISW11F.

ಈ ಹೊಸ ಮೊಬೈಲಿನ ಪ್ರಮಖ ಆಕರ್ಷಣೆ ಎಂದರೆ ಇದು ವಾಟರ್ ಪ್ರೂಫ್ ಆಗಿರುವುದು. ಅದಕ್ಕಿಂತಲೂ ಆಕರ್ಷಣೆ ಇರುವುದು ಇದು ಹೊಂದಿರುವ ಬಣ್ಣ. ಗ್ರೂವಿ ಮತ್ತು ಗ್ಲೋಸಿ ಪಿಂಕ್ ಬಣ್ಣದಲ್ಲಿ ಲಭ್ಯವಿರುವ ಇದು ನೋಡಿದವರ ಕಣ್ಣನ್ನು ತಕ್ಷಣವೇ ಸೆಳೆದುಬಿಡುವಂತಿದೆ. ಇದರ ಗುಲಾಬಿ ಬಣ್ಣದಿಂದ ಇದು ಮಹಿಳೆಯರು ಹೆಚ್ಚು ಇಷ್ಟಪಡುವ ಫೊನ್ ಆಗಿ ಬದಲಾದರೂ ಆಶ್ಚರ್ಯವಿಲ್ಲ.

ಇದರಲ್ಲಿ ಅಬ್ಬಾ! ಎನ್ನಬಹುದಾದ 13 MP CMOS ಕ್ಯಾಮೆರಾ ಇದ್ದು ಇದರಿಂದ 1080p ಫುಲ್ HD ವಿಡಿಯೋ ಕ್ಲಿಪ್ಸ್ ಗಳನ್ನು ಆಸ್ವಾದಿಸಬಹುದು. ಜೊತೆಗೆ ಇದರಲ್ಲಿರುವ 1.3 MP ಸೆಕೆಂಡರಿ ಕ್ಯಾಮೆರಾದಿಂದ ವಿಡಿಯೋ ಕಾನ್ಫರೆನ್ಸ್ ಕೂಡ ಮಾಡಬಹುದು.

ಟೆಕ್ಸಾಸ್ ಸಾಧನದ OMAP 4430 ಡ್ಯುಯಲ್ ಕೋರ್ ಪ್ರೊಸೆಸರ್ ಹಾಗೂ 1.2 GHz ವೇಗ ಸಾಮರ್ಥ್ಯ ಇದೆ. 1 GB RAM ಮತ್ತು 8 GB ROM ಇದರಲ್ಲಿ ಲಭ್ಯ. ಮೈಕ್ರೋ SDHC ಕಾರ್ಡ್ ಮೂಲಕ ವಿಸ್ತರಿಸಬಲ್ಲ 32 GB ಮೆಮೊರಿ ಕೂಡ ಇದೆ. HDMI ಇಂಟರ್ ಫೇಸ್, USB ಪೋರ್ಟ್, A2DP ಯ v2.1 ಬ್ಲೂಟೂಥ್, e-Wallet ಫೀಚರ್ ಇದರಲ್ಲಿದೆ.

ಆಧುನಿಕ GSM/CDMA ಸ್ಮಾರ್ಟ್ ಫೊನ್ ಆಗಿರುವ ಇದು 131 ಗ್ರಾಮ್ ತೂಕ ಹೊಂದಿದೆ. ನವೆಂಬರ್ ನಲ್ಲಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಇರುವ ಇದರ ಬೆಲೆ ಸದ್ಯಕ್ಕೆ ನಿಗದಿ ಆಗಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot