Subscribe to Gizbot

ಈ ಹೊಸ ಹ್ಯುವೈ ಹಾನರ್ ಆಧುನಿಕ ಸ್ಮಾರ್ಟ್ ಫೋನ್

Posted By: Super

ಈ ಹೊಸ ಹ್ಯುವೈ ಹಾನರ್ ಆಧುನಿಕ ಸ್ಮಾರ್ಟ್ ಫೋನ್
ಮೊಬೈಲ್ ಮಾರುಕಟ್ಟೆಯೀಗ ಸಾಕಷ್ಟು ವಿಸ್ತರಿಸಿದೆ. ಹೊಸ ಹೊಸ ವಿನ್ಯಾಸದ ಹೆಚ್ಚು ಹೆಚ್ಚು ಆಧುನಿಕವಾದ ಮೊಬೈಲ್ ಗಳು ಮಾರುಕಟ್ಟೆ ಪ್ರವೇಶಿಸಿ ಮೊದಲೇ ಇದ್ದ ಸ್ಪರ್ಧೆಯನ್ನು ಇನ್ನಷ್ಟು ಕಾವೇರಿಸಿದೆ. ಇದೀಗ ಹೊಸ ಹ್ಯುವೈ ಹಾನರ್ ಮಾರುಕಟ್ಟೆಗೆ ಪ್ರವೇಶಿಸಲು ರೆಡಿಯಾಗಿದೆ.

ಈ ಹಾನರ್ ಅತ್ಯಾಧುನಿಕ ಸ್ಮಾರ್ಟ್ ಫೋನ್. ಇದರಲ್ಲಿ ಆಂಡ್ರಾಯ್ಡ್ 2.3 ಪ್ಲಾಟ್ ಫಾರ್ಮ್ OS ಇದೆ. ಇದು 1.4 GHz ಪ್ರೊಸೆಸರ್, 4 ಇಂಚು ಅಗಲದ ಮಲ್ಟಿ ಟಚ್ ಸ್ಕ್ರೀನ್, ಎಕ್ಸೆಲೋರೋಮೀಟರ್ ಸೆನ್ಸರ್ ಹಾಗೂ ಟಚ್ ಸೆನ್ಸೆಟಿವ್ ಕಂಟ್ರೋಲ್ ಇದೆ. ಇದು ಗೈರೋ ಮತ್ತು ಪ್ರಾಕ್ಸಿಮಿಟಿ ಸೆನ್ಸರ್ ಹೊಂದಿದೆ.

ಇದರಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ, ಜಿಯೋ ಟ್ಯಾಗಿಂಗ್ & ಆಟೋ ಫೋಕಸ್, ಫೇಸ್ ಡಿಟೆಕ್ಷನ್, HDR ಲಭ್ಯ. ಜೊತೆಗೆ 2 ಮೆಗಾ ಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ, ವೀಡಿಯೋ ಚಾಟಿಂಗ & ಕಾನ್ಫರೆನ್ಸ್, ಸೋಷಿಯಲ್ ನೆಟ್ ವರ್ಕ್ ಕೂಡ ಇದರಲ್ಲಿದೆ. ಇದರಲ್ಲಿರುವ ಬ್ಯಾಟರಿ Li-ion, 1900 mAh ಅತ್ಯಂತ ಶಕ್ತಿಶಾಲಿಯಾಗಿದ್ದು 3 ದಿನಗಳ ಸಾಮರ್ಥ್ಯ ಹೊಂದಿದೆ.

ಹೀಗೆ ಸಾಕಷ್ಟು ಆಧುನಿಕವಾಗಿರುವ ಸ್ಮಾರ್ಟ್ ಫೊನ್ ಹ್ಯುವೈ ಹಾನರ್, ಭಾರತೀಯ ಮಾರುಕಟ್ಟೆಗೆ ಡಿಸೆಂಬರ್ ಮೊದಲ ವಾರದಲ್ಲಿ ಅಥವಾ ಈ ವರ್ಷದ ಕೊನೆಗೆ ಬಿಡುಗಡೆ ಆಗಲಿದೆ. ನಿಗದಿಯಾಗಿರುವ ಬೆಲೆ ರು. 13,500. ಆಧುನಿಕ ವಿಶೇಷತೆ ಹಾಗೂ ಆಕರ್ಷಕ ಬೆಲೆಗಳ ಸಂಗಮ ಈ ಹೊಸ ಹ್ಯುವೂ ಮೊಬೈಲ್. ಇದು ಮುಂದಿನ ವರ್ಷದ ಪ್ರಾರಂಬದಲ್ಲಿ ನಿಮ್ಮ ಕೈನಲ್ಲಿರುವುದು ತಾನೇ!?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot