ಬೇಡವಾದ ಕರೆ, ಮೆಸೇಜ್ ಕಿರಿಕಿರಿಯಿಂದ ಇನ್ನು ಮುಕ್ತಿ!

By Super
|
ಬೇಡವಾದ ಕರೆ, ಮೆಸೇಜ್ ಕಿರಿಕಿರಿಯಿಂದ ಇನ್ನು ಮುಕ್ತಿ!
ಅನಪೇಕ್ಷಿತ ಕರೆಗಳು ಹಾಗೂ ಎಸ್ ಎಂ ಎಸ್ ಗಳ ಕಿರಕಿರಿಯಿಂದ ಇನ್ನು ಮುಂದೆ ಮೊಬೈಲ್ ಬಳಕೆದಾರರು ಮುಕ್ತಿ ಹೊಂದಲಿದ್ದಾರೆ. ಮಧ್ಯರಾತ್ರಿ ವೇಳಗೆ ಎಸ್ ಎಂ ಎಸ್ ಬಂದು ಎಚ್ಚರವಾಗಿ ಕಳುಹಿಸಿದ ಕಂಪೆನಿಯ ಜೊತೆ ನಮ್ಮ ಮೊಬೈಲಿಗೂ ಶಾಪ ಹಾಕುವ ಅನಿವಾರ್ಯತೆ ಇನ್ನಿಲ್ಲ.

ಈ ಸೌಲಭ್ಯ ದೊರೆತಿದ್ದೇ ತಡ, ಗ್ರಾಹಕರ ದಿಲ್ ಫುಲ್ ಖುಷ್ ಆಗಿದೆ. ಈಗಾಗಲೇ 130 ದಶಲಕ್ಷಗಳಿಗೂ ಮಿಗಿಲಾಗಿ ಗ್ರಾಹಕರು ಈಗಾಗಲೇ ಈ ಸೌಲಭ್ಯದಡಿ ನೊಂದಾಯಿಸಿಕೊಂಡಿದ್ದಾರೆ.

ಯಾವುದೀ ಹೊಸ ಸೌಲಭ್ಯ ಎಂದರೆ "1909" ಕ್ಕೆ ಡಯಲ್ ಮಾಡುವ ಅಥವಾ ಎಸ್ ಎಂ ಎಸ್ ಕಳುಹಿಸುವ ಮೂಲಕ ಮೊಬೈಲ್ ಬಳಕೆದಾರರು ಅನಪೇಕ್ಷಿತ ಕರೆ ಹಾಗೂ ಎಸ್ ಎಂ ಎಸ್ ಗಳಿಂದ ಮುಕ್ತಿ ಹೊಂದುವುದು. ಈ ಸೌಲಭ್ಯ ಇಂದಿನಿಂದಲೇ (ಸೆ. 27) ಜಾರಿಗೆ ಬರಲಿದೆ.

ಸೌಲಭ್ಯದ ವಿವರಣೆ:
* ನೋಂದಣಿ ಮಾಡಿಸಲು, ನೋಂದಣಿ ರದ್ದುಪಡಿಸಲು ಮತ್ತು ದೂರು ಸಲ್ಲಿಸಲು ಸಿಂಗಲ್ ಟೋಲ್ ಫ್ರೀ ಸಂಖ್ಯೆ
* ನಿಮ್ಮ ಆಯ್ಕೆಯ ಮೇರೆಗೆ ಬೇಕಾಗಿರುವ ಕರೆ ಹಾಗೂ ಮೆಸೇಜ್ ಗಳನ್ನು ಸ್ವೀಕರಿಸುವ ಆಯ್ಕೆ
* ನಿಮ್ಮ ಆಯ್ಕೆಯ ನೋಂದಣಿ, ಆಯ್ಕೆಯ ನಂತರದ ಬದಲಾವಣೆ, ಆಯ್ಕೆಯ ನಂತರ ರದ್ದುಗೊಳಿಸುವ ಕೋರಿಕೆ 7 ದಿನಗಳಲ್ಲಿ ಕಾರ್ಯಗತವಾಗುವುದು

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವರ್ಗೀಕರಿಸಿರುವ ಗುಂಪುಗಳ ಮಾಹಿತಿ. ಅದು ಹೀಗಿದೆ:
*** ಪೂರ್ಣವಾಗಿ ತಡೆಯಲ್ಪಟ್ಟ ವರ್ಗ- ಟೆಲಿಮಾರ್ಕೆಟಿಂಗ್ / ಎಸ್ ಎಂ ಎಸ್ ಬಾರದಂತೆ

*** ಭಾಗಶಃ ತಡೆಯಲ್ಪಟ್ಟ ವರ್ಗ-
1. ಬ್ಯಾಂಕಿಂಗ್/ ವಿಮೆ/ ಹಣಕಾಸಿನ ಯೋಜನೆ/ ಕ್ರೆಡಿಟ್ ಕಾರ್ಡ್ ಗಳು
2. ರಿಯಲ್ ಎಸ್ಟೇಟ್
3. ಶಿಕ್ಷಣ
4. ಆರೋಗ್ಯ
5. ಗ್ರಾಹಕರ ಬಳಕೆಯ ಸರಕುಗಳು ಮತ್ತು ಆಟೋಮೊಬೈಲ್ಸ್
6. ಸಂಪರ್ಕ ಮಾಧ್ಯಮ/ ಪ್ರಸಾರ/ ಮನರಂಜನೆ/ ಐಟಿ
7. ಪ್ರವಾಸೋದ್ಯಮ ಮತ್ತು ಬಿಡುವಿನ ಸಮಯ(ವಿರಾಮ)

ಸೌಲಭ್ಯವನ್ನು ಬಳಸಿಕೊಳ್ಳುವ ಬಗೆ ಹೀಗೆ:
1. ಕರೆ ಮಾಡುವುದರ ಮೂಲಕ
ಟೋಲ್ ಫ್ರೀ ಸಂಖ್ಯೆ "1909" ಕ್ಕೆ ನೇರವಾಗಿ ಡಯಲ್ ಮಾಡುವುದು

2. ಎಸ್ ಎಂ ಎಸ್ ಮೂಲಕ
* ನಿಮ್ಮ ಆಯ್ಕೆ ಕಾರ್ಯಗತಗೊಳಿಸಲು "START" ಎಂದು ಟೈಪ್ ಮಾಡಿ "1909" ಕ್ಕೆ ಎಸ್ ಎಂ ಎಸ್ ಕಳುಹಿಸಿ.
ಉದಾ: ಆಯ್ಕೆ 'ರಿಯಲ್ ಎಸ್ಟೇಟ್' ನಿಂದ ಎಸ್ ಎಂ ಎಸ್ ಗಳನ್ನು ಸ್ವೀಕರಿಸಲು "START 2" ಎಂದು ಟೈಪ್ ಮಾಡಿ "1909" ಕ್ಕೆ ಎಸ್ ಎಂ ಎಸ್ ಕಳುಹಿಸಬೇಕು
* ಆಯ್ಕೆಯ ಬದಲಾವಣೆಗಾಗಿ, ಈಗಿರುವ ಆಯ್ಕೆಯನ್ನು ತಡೆಹಿಡಿಯಲು "STOP" ಎಂದು ಟೈಪ್ ಮಾಡಿ "1909" ಕ್ಕೆ ಎಸ್ ಎಂ ಎಸ್ ಕಳುಹಿಸಬೇಕು
* ಆಯ್ಕೆಯ ರದ್ದತಿಗಾಗಿ "STOP" ಎಂದು ಟೈಪ್ ಮಾಡಿ "1909" ಕ್ಕೆ ಎಸ್ ಎಂ ಎಸ್ ಕಳುಹಿಸಬೇಕು
* ಮೊಬೈಲ್ ಬಳಕೆದಾರರು ವಿವಿಧ ಆಯ್ಕೆಗಳಿಂದ ಎಸ್ ಎಂ ಎಸ್ ಪಡೆಯಲು ಹೀಗೆ ಮಾಡಬೇಕು- "START" ಎಂದು ಟೈಪ್ ಮಾಡಿ, ಭಾಗಶಃ ವರ್ಗದಲ್ಲಿರುವ ಅಂಕೆಯನ್ನು ಮುಂದೆ ಸೇರಿಸಬೇಕು. ಉದಾ: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಂದ ಎಸ್ ಎಂ ಎಸ್ ಪಡೆಯಲು "START 3,4" ಸೇರಿಸಿ 1909 ಕ್ಕೆ ಕಳುಹಿಸಬೇಕು
* ಯಾವುದೇ ಆಯ್ಕೆಗಳ ಜೊತೆಗೆ ಮೊದಲು "0" (ಝೀರೊ)ವನ್ನು ಕಳುಹಿಸಿದರೆ ಅದನ್ನು ಪೂರ್ಣವಾಗಿ ತಡೆಹಿಡಿಯಲಾಗುವುದು. ಉದಾ: "START 0, 2,3" ಎಂದು 1909 ಗೆ ಎಸ್ ಎಂ ಎಸ್ ಕಳುಹಿಸಿದರೆ ಆ ಕ್ಷೇತ್ರದವುಗಳನ್ನು ತಡೆಹಿಡಿಯಲಾಗುವುದು
* ಎನ್ ಡಿ ಎನ್ ಸಿ ಯಲ್ಲಿ ಈಗಾಗಲೇ ರಜಿಸ್ಟರ್ ಮಾಡಿಕೊಂಡಿರುವವರು ಮತ್ತೆ ಮಾಡುವ ಅಗತ್ಯವಿಲ್ಲ.

ಹೀಗೆ, ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ಮೊಬೈಲ್ ಬಳಕೆದಾರರು ತಮ್ಮ ನೆಮ್ಮದಿ ಕಾಯ್ದುಕೊಳ್ಳಬಹುದು. ರಜಿಸ್ಟರ್ ಮಾಡಿದ ನಂತರ ಏಳು ದಿನಗಳಲ್ಲಿ ಈ ಸೌಲಭ್ಯ ಜಾರಿಯಾಗಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X