ಹೊಸ ಹ್ಯುವೈ ಡಿಸ್ಕವರಿ ಮೊಬೈಲ್ ಫೋನ್

Posted By: Staff

ಹೊಸ ಹ್ಯುವೈ ಡಿಸ್ಕವರಿ ಮೊಬೈಲ್ ಫೋನ್
ಮಾರುಕಟ್ಟೆಯಲ್ಲಿ ಮೊಬೈಲ್ ಫೋನುಗಳ ಕಾರ್ಬಾರು ಜೋರಾಗಿದೆ. ಸಾಕಷ್ಟು ಹೊಸ ಮೊಬೈಲುಗಳು ಮಾರುಕಟ್ಟೆಯಲ್ಲಿ ಈಗಾಗಲೇ ಇದ್ದರೂ ದಿನದಿನವೂ ಹೊಸ ಮೊಬೈಲುಗಳು ಬಿಡುಗಡೆ ಕಾಣುತ್ತಿರುವುದು ಆಶ್ಚರ್ಯವಾದರೂ ಸತ್ಯ. ಇದೀಗ ಹೊಸ ಮೊಬೈಲ್ ಬಿಡುಗಡೆ ಹ್ಯುವೈ ಮೊಬೈಲ್ ಕಂಪೆನಿಯಿಂದ ಆಗಲಿದೆ. ಹೆಸರು ಹ್ಯುವೈ ಡಿಸ್ಕವರಿ ಎಕ್ಸ್ ಪೆಡಿಶನ್ ಫೊನ್.

ಈ ಹೊಸ ಮೊಬೈಲ್ ಸಾಕಷ್ಟು ಆಧುನಿಕ ಜೊತೆಗೆ ಡೀಸೆಂಟ್ ಲುಕ್ ಹೊಂದಿದೆ. ಈಗಾಗಲೇ ಜಾಗತಿಕ ಕಂಪೆನಿ ಎಂದು ಹೆಸರು ಪಡೆದಿರುವ ಹ್ಯುವೈ ಕಂಪನಿ ಅಮೇರಿಕಾ, ಐರೋಪ್ಯ ದೇಶಗಳು, ಆಸ್ಟ್ರೇಲಿಯಾ, ಚೀನಾ ಹಾಗೂ ಇನ್ನಿತರ ದೇಶಗಳಲ್ಲಿ ಸಾಕಷ್ಟು ಜನಮನ್ನಣೆ ಗಳಿಸಿದೆ. ಇದು ಆಫೀಸಿಯಲ್ ಲೈಫ್ ಸ್ಟೈಲ್ ಬ್ರಾಂಡ್ ಮೊಬೈಲ್ ಡಿವೈಸ್.

ಹ್ಯುವೈ ಕಂಪೆನಿ ಇದೀಗ ಡಿಸ್ಕವರಿ ಕಮ್ಯನಿಕೇಶನ್ ಜೊತೆ ಪಾರ್ಟನರ್ ಶಿಪ್ ಪ್ರಾರಂಭಿಸಿ ವರ್ಡ್ ಪ್ರೂಫ್ ಮೊಬೈಲ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಿದೆ. ಇದರಿಂದ ಸಂಪರ್ಕದ ಜೊತೆ ವೈಯಕ್ತಿಕ ಅವಶ್ಯಕತೆಗಳಿಗೂ ಕೂಡ ಪ್ರಯೋಜನಕಾರಿ. ಇದೀಗ ಆನ್ ಲೈನ್ ಹಾಗೂ ಆಫ್ ಲೈನ್ ಗಳ ಜಾಹೀರಾತುಗಳಲ್ಲಿ ಈ ಹೊಸ ಫೊನು ಬಹಳ ಕಾಣಿಸಿಕೊಳ್ಳತೊಡಗಿದೆ. ಇದರ ವಿಶೇಷತೆಗಳು, ದರಗಳು ಹಾಗೂ ಬಿಡುಗಡೆಯ ದಿನಾಂಕದ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot