ಸ್ಯಾಮ್ ಸಂಗ್ ಚಾಂಪ್ ಮೆಗಾಕ್ಯಾಮ್ ಮೋಡಿ!

Posted By: Staff

ಸ್ಯಾಮ್ ಸಂಗ್ ಚಾಂಪ್ ಮೆಗಾಕ್ಯಾಮ್ ಮೋಡಿ!
ಸ್ಯಾಮ್ ಸಂಗ್ ಮೊಬೈಲ್ ಕಂಪನಿ ಮೊಬೈಲ್ ಜಗತ್ತಿನ ಅಗ್ರಗಣ್ಯ ಕಂಪೆನಿ. ಈ ಕಂಪನಿಯಿಂದ ಹೊರಬರುವ ಮೊಬೈಲುಗಳ ಗುಣಮಟ್ಟ ಹಾಗೂ ಬೆಲೆ ಪ್ರಶ್ನಾತೀತ. ಈಗಾಗಲೇ ಬೇರೆ ಬೇರೆ ವಿನ್ಯಾಸದ, ದರದ ಸ್ಯಾಮ್ ಸಂಗ್ ಮೊಬೈಲುಗಳು ಮಾರುಕಟ್ಟೆಯಲ್ಲಿ ಸಾಕಷ್ಟಿವೆ. ಇದೀಗ ಹೊಸ ಮೊಬೈಲ್ ಬರಲು ರೆಡಿ ಆಗಿದೆ. ಈ ಹೊಸ ಮೊಬೈಲ್ ಹೆಸರು ಸ್ಯಾಮ್ ಸಂಗ್ ಚಾಂಪ್ ಮೆಗಾಕ್ಯಾಮ್ ಅಥವಾ ಸ್ಯಾಮ್ ಸಂಗ್ GT-C3303i.

ಈ ಹೊಸ ಫೊನಿನಲ್ಲಿ ಮಲ್ಟಿ ಟಚ್ ಸ್ಕ್ರೀನ್ ಡಿಸ್ ಪ್ಲೇ ಇದೆ. 2.4 ಇಂಚುಗಳ 320 x 240 ಪಿಕ್ಸೆಲ್ ರೆಸೊಲ್ಯೂಷನ್ ಹೊಂದಿರುವ ಇದು ಸಾಕಷ್ಟು ಆಕರ್ಷಕ ರೂಪ ಹೊಂದಿದೆ. ಆದರೆ ಉಳಿದ ಸ್ಯಾಮ್ ಸಂಗ್ ಕ್ಯಾಮೆರಾಗಳಂತೆ ಇದರಲ್ಲಿ ಹೆಚ್ಚು ಸಾಮರ್ಥ್ಯದ ಕ್ಯಾಮೆರಾ ಇಲ್ಲ. ಕೇವಲ 1.3 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಇದರಲ್ಲಿ ನೈಟ್ ಮೋಡ್, ಮಲ್ಟಿ ಶಾರ್ಟ್ ಸಪೋರ್ಟಿವ್ ಸೌಲಭ್ಯದ ಜೊತೆಗೆ ಮೊಸಾಯಿಕ್ ಶಾಟ್, ಟೈಮರ್ ಶಾಟ್, ಫ್ರೇಮ್ ಶಾಟ್ ಮುಂತಾದವುಗಳಿವೆ.

GSM ಹ್ಯಾಂಡ್ ಸೆಟ್ ಆಗಿರುವ ಇದು GPRS ಸಹಕಾರ ಪ್ರತಿನಿಧಿಸುತ್ತದೆ. WAP ಬ್ರೌಸರ್, 30 MB ಆಂತರಿಕ ಹಾಗೂ ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಲ್ಲ 8 GB ಮಮೊರಿ ಇದರಲ್ಲಿದೆ. ಮಲ್ಟಿ ಮೀಡಿಯಾದಲ್ಲಿ 3D ತಂತ್ರಜ್ಞಾನ ಇರುವುದು ವಿಶೇಷತೆ ಆಗಿದೆ. ಕೇವಲ 90 ಗ್ರಾಮ್ ತೂಕ ಹೊಂದಿರುವ ಈ ಫೋನ್ 1000 mAh Lithium ion ಬ್ಯಾಟರಿ ಹೊಂದಿದೆ. 12 ತಾಸುಗಳ ಟಾಕ್ ಟೈಮ್, 666 ತಾಸುಗಳ ಸ್ಯ್ಟಾಂಡ್ ಬೈ ಇದರಲ್ಲಿದೆ.

ಬೆಲೆ ಕೇವಲ ರು. 3,400. ಸ್ಯಾಮ್ ಸಂಗ್ ಬಳಕೆದಾರರಿಗೆ ಇದು ನಿಜವಾಗಿಯೂ ಸಿಹಿ ಸುದ್ದಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot