ಸ್ಯಾಮ್ ಸಂಗ್ ಗೆಲಾಕ್ಸಿ ಸ್ಕಿನ್ ಸುರುಳಿ ಮಾಡಬಹುದು!

Posted By: Staff

ಸ್ಯಾಮ್ ಸಂಗ್ ಗೆಲಾಕ್ಸಿ ಸ್ಕಿನ್ ಸುರುಳಿ ಮಾಡಬಹುದು!
ಸ್ಯಾಮ್ ಸಂಗ್ ಮೊಬೈಲ್ ಕಂಪೆನಿ ಸಾಕಷ್ಟು ಜಗದ್ವಿಖ್ಯಾತ. ಈಗಾಗಲೇ ಇದು ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿರುವ ಕಂಪನಿಗಳಲ್ಲಿ ಅತ್ಯಂತ ಪ್ರಮುಖವಾದುದು.

ಎಲ್ಲಾ ವರ್ಗದ ಜನರ ಕೈಗೆಟಕುವ ಬೆಲೆಗಳಲ್ಲಿ ಹಾಗೂ ಬಹಳಷ್ಟು ವಿನ್ಯಾಸಗಳಲ್ಲಿ ಇದು ಲಭ್ಯವಿರುವುದು ಇದರ ವಿಶೇಷತೆಯಾಗಿದೆ. ಇದೀಗ ಹೊಸ ಮೊಬೈಲ್ಲೊಂದು ಸ್ಯಾಮ್ ಸಂಗ್ ಕಂಪನಿಯಿಂದಲೇ ಪಾದಾರ್ಪಣೆ ಮಾಡಲಿದೆ. ಹೆಸರು ಸ್ಯಾಮ್ ಸಂಗ್ ಗೆಲಾಕ್ಸಿ ಸ್ಕಿನ್.

ಇದು 2012ರ ಅಂತ್ಯದಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಈ ಫೋನಿನ ವಿಶೇಷತೆ ಎಂದರೆ, ಸ್ಪೆಷಲ್ ದಪ್ಪ ಲೇಯರ್ ನಿಂದ ಮಾಡಲ್ಪಟ್ಟಿದ್ದು ಇದನ್ನು ಸುರುಳಿಯ ಹಾಗೆ ಸುತ್ತಿ ಹಿಡಿದುಕೊಳ್ಳಬಹುದು. ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎಂಬುದನ್ನು ತಿಳಿಯಲು ಸದ್ಯಕ್ಕೆ ಈ ಫೋನ್ ಸಾಕ್ಷಿ.

ಇದರಲ್ಲಿ ಕ್ರಿಸ್ಟಲ್ ಡಿಸ್ ಪ್ಲೇ ಸ್ಕ್ರೀನ್ ಇದ್ದು ಇದನ್ನೂ ಕೂಡ ಪೋಲ್ಡ್ ಮಾಡಬಹುದು. ಸುರುಳಿಯಾಕಾರದಲ್ಲಿ ಸುತ್ತಿ ಕೈನಲ್ಲಿ ಹಿಡಿದುಕೊಳ್ಳಬಲ್ಲ ಈ ಮೊಬೈಲ್ ಭವಿಷ್ಯದ ಮೊಬೈಲ್ ಎಂದೇ ಭಾವಿಸಲಾಗಿದೆ.


ಈ ಹೊಸ ಮೊಬೈಲಿನಲ್ಲಿ 800 X 400 ಪಿಕ್ಸೆಲ್ ರೆಸೊಲ್ಯೂಷನ್ ಹಾಗೂ ಅಮೋಲೆಡ್ ಫೀಚರ್ ಇವೆ. ಉತ್ತಮ ಗುಣಮಟ್ಟ ನೀಡಬಲ್ಲ HD ಚಿತ್ರಗಳು ಇದರಲ್ಲಿ ಲಭ್ಯ. 8 ಮೆಗಾ ಪಿಕ್ಸೆಲ್ ಕ್ಯಾಮೆರಾ, ಇಮೇಜ್ ಕ್ಯಾಪ್ಚರಿಂಗ್, ಅಧಿಕ ಸಾಮರ್ಥ್ಯದ 1.2 GHz ಪ್ರೊಸೆಸರ್, 1GB RAM ಇದರಲ್ಲಿದೆ. ಸದ್ಯಕ್ಕೆ ಇದರ ಇನ್ನುಳಿದ ವಿಶೇಷತೆಗಳು ಹಾಗೂ ದರ ಇವುಗಳ ಮಾಹಿತಿ ಲಭ್ಯವಿಲ್ಲ.

ಆದರೆ ಸಾಕಷ್ಟು ಕಡಿಮೆ ದರದ ಸಾಮಗ್ರಿಗಳನ್ನೇ ಉಪಯೋಗಿಸಿ ಮಾಡಲಾಗಿರುವ ಇದು ಉಳಿದ ಸ್ಮಾರ್ಟ್ ಫೊನುಗಳಷ್ಟೇ ಬೆಲೆ ಹೊಂದಲಿದೆ ಎಂದು ಹೇಳಲಾಗಿದೆ. ಆಕರ್ಷಕ ಬೆಲೆಗೆ ಈ ಹೊಸ ಸ್ಮಾರ್ಟ್ ಫೋನ್ ಲಭ್ಯವಾಗುವುದೆಂದರೆ ಮಾರುಕಟ್ಟೆಗೆ ಬಂದ ಮೇಲೆ ಇದೊಂದು ಫೋನ್ ಸಾಕು ಸ್ಯಾಮ್ ಸಂಗ್ ಕಂಪನಿಯನ್ನು ಆಕಾಶದೆತ್ತರಕ್ಕೆ ಕೊಂಡೊಯ್ಯಲು.

ಈ ಹೊಸ ಮೊಬೈಲ್ ಬರುವ ಸುದ್ದಿ ಮೊಬೈಲ್ ಬಳಕೆದಾರರಿಗೆ ನಿಜವಾಗಿಯೂ ಪುಳಕ ತರಲಿದೆ. ಹಾಗೇ ಸ್ಯಾಮ್ ಸಂಗ್ ಪ್ರತಿಸ್ಪರ್ಧಿ ಕಂಪೆನಿಗಳಿಗೆ ಜ್ವರ ಬಂದರೆ ಆಶ್ಚರ್ಯವೂ ಇಲ್ಲ. 2012 ಯಾವಾಗ ಬರಲಿದೆ ಎಂದು ಕಾಯುತ್ತಿರುವಿರಿ, ನಿಜ ತಾನೇ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot