Home
ಮೊಬೈಲ್

ಸ್ಯಾಮ್ ಸಂಗ್-ಎಚ್ ಟಿ ಸಿ ಮೊಬೈಲುಗಳ ಹೋಲಿಕೆ

By Super
ಸ್ಯಾಮ್ ಸಂಗ್-ಎಚ್ ಟಿ ಸಿ ಮೊಬೈಲುಗಳ ಹೋಲಿಕೆ
ಎಚ್ ಟಿ ಸಿ ಮತ್ತು ಸ್ಯಾಮ್ ಸಂಗ್ ಎರಡೂ ಕಂಪೆನಿಗಳೂ ಸಾಕಷ್ಟು ಜಗತ್ಪ್ರಸಿದ್ಧ. ಈಗಾಗಲೇ ಸಾಕಷ್ಟು ಮೊಬೈಲುಗಳನ್ನು, ಸ್ಮಾರ್ಟ್ ಫೋನುಗಳನ್ನು ಮಾರುಕಟ್ಟೆಗೆ ತಂದಿರುವ ಈ ಕಂಪೆನಿಗಳ ಫೋನುಗಳು ಸಾಕಷ್ಟು ಜನಮನ್ನಣೆ ಗಳಿಸಿವೆ. ಇದೀಗ ಮಾರುಕಟ್ಟೆಗೆ ಬರಲಿವೆ ಎಂದು ಜಗಜ್ಜಾಹೀರಾಗಿರುವ ಈ ಎರಡು ಕಂಪೆನಿಗಳ ಫೋನುಗಳು, ಸ್ಯಾಮ್ ಸಂಗ್ ಹೆರಾಕ್ಯುಲಸ್ ಮತ್ತು ಎಚ್ ಟಿ ಸಿ ರೂಬಿ.

ಇವುಗಳಲ್ಲಿರುವ ವಿಶೇಷತೆಗಳು ಹೀಗಿವೆ. ಹೆರಾಕ್ಯುಲಸ್ ಸ್ಮಾರ್ಟ್ ಫೋನ್, ಸ್ಯಾಮ್ ಸಂಗ್ ಗೆಲಾಕ್ಸಿ S II ಮೊಬೈಲಿನ T - ಮೊಬೈಲ್ ಆವೃತ್ತಿಯಾಗಿದೆ. ಅದೇ ಮಾದರಿಯ ಚಿಪ್ ಸೆಟ್, ಕ್ಯಾಮೆರಾ ಇದು ಹೊಂದಿದೆ. ಆದರೆ ಅದಕ್ಕಿಂತ ದೊಡ್ಡದಾದ 4.5 ಇಂಚುಗಳ ಸ್ಕ್ರೀನ್ ಡಿಸ್ ಪ್ಲೇ ಇದೆ. ಜೊತೆಗೆ ಅಮೋಲೆಡ್ ಪ್ಲಸ್ ಸ್ಕ್ರೀನ್, NFC ಸಾಮರ್ಥ್ಯ, 42Mbps HSPA+ ಇದೆ.

ಆದರೆ ರೂಬಿಯಲ್ಲಿ 4.3 ಇಂಚುಗಳ ಸ್ಕ್ರೀನ್ ಡಿಸ್ ಪ್ಲೇ, qHD ರೆಸೊಲ್ಯೂಷನ್ ಇದೆ. 8 ಮೆಗಾ ಪಿಕ್ಸೆಲ್ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ, 1GB RAM, 1.5GHz ಡ್ಯುಯಲ್ ಕೋರ್ ಕ್ಯುಲ್ಕಾಮ್ ಪ್ರೊಸೆಸರ್, 3.0 ಆವೃತ್ತಿಯ ಬ್ಲೂಟೂಥ್ ಇದರಲ್ಲಿದೆ. ಎರಡೂ ಮೊಬೈಲ್ ಗಳೂ ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆವೃತ್ತಿಯ OS ಹೊಂದಿವೆ.

ಎರಡೂ ಹ್ಯಾಂಡ್ ಸೆಟ್ ಗಳ ಬೆಲೆ ನಿಗದಿಯಾಗಿಲ್ಲ. ಆದರೆ ದೊರೆತಿರುವ ಮಾಹಿತಿಯ ಪ್ರಕಾರ ಎಚ್ ಟಿ ಸಿ ರೂಬಿ ಬಲೆ ಸುಮಾರು 14,646 ಎನ್ನಲಾಗಿದೆ. ಬರುವ ತಿಂಗಳು ಅಕ್ಟೋಬರ್ ನಲ್ಲಿ ಮಾರುಕಟ್ಟೆಗೆ ಎರಡೂ ಬರಲಿವೆ ಎಂದು ಸುದ್ದಿಯಾಗಿದೆ, ಕಾದು ನೋಡಲೇಬೇಕು!

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+