Subscribe to Gizbot

ಹೊಸ ಹ್ಯುವೈ ಆಂಡ್ರಾಯ್ಡ್ ಮೊಬೈಲ್ ಸ್ವಾಗತಿಸಿ

Posted By: Super

ಹೊಸ ಹ್ಯುವೈ ಆಂಡ್ರಾಯ್ಡ್ ಮೊಬೈಲ್ ಸ್ವಾಗತಿಸಿ
ಮೊಬೈಲ್ ಮಾರುಕಟ್ಟೆಯಲ್ಲಿ ಈಗ ಸಾಕಷ್ಟು ಸ್ಪರ್ಧೆ ಏರ್ಪಟ್ಟಿದೆ. ಬಹಳಷ್ಟು ವಿಧದ, ನಾನಾ ಬೆಲೆಗಳ ಮೊಬೈಲ್ ಗಳು ಹಲವಾರು ಕಂಪೆನಿಗಳಿಂದ ಹರಿದು ಬಂದಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಹೆಸರು ಸಂಪಾದಿಸಿರುವ ಚೀನಾದ ಕಂಪನಿ ಹ್ಯುವೈ ನಿಂದ ಇದೀಗ ಹೊಸ ಮೊಬೈಲ್ ಬಂದಿದೆ. ಇದು ಆಂಡ್ರಾಯ್ಡ್ ಸ್ಮಾರ್ಟ್ ಫೊನ್ ಆಗಿದೆ. ಇದರ ಬೆಲೆ ಸುಮಾರು ರು. 4,000 ದಿಂದ ಪ್ರಾರಂಭವಾಗಲಿದೆ. ಇದೊಂದು ಸಾಂಪ್ರದಾಯಿಕ ಆಂಡ್ರಾಯ್ಡ್ ಫೊನ್.

ಈ ಹೊಸ ಮೊಬೈಲಿನಲ್ಲಿ 3G ಇರುವುದಿಲ್ಲ ಎಂಬುದು ಬೇಸರದ ವಿಷಯವಾದರೂ ಅದರ ಅನುಪಸ್ಥಿತಿಯಲ್ಲಿ ಬೇರೆ ಸಾಕಷ್ಟು ಆಧುನಿಕ ವಿಶೇಷತೆಗಳನ್ನು ಅಳವಡಿಸುವ ಮೂಲಕ ಹ್ಯುವೈ ಕಂಪೆನಿ ಗ್ರಾಹಕ ಸ್ನೇಹಿ ಎನಿಸಿದೆ. ಇದರಲ್ಲಿ ವೈ-ಫೈ ಸಂಪರ್ಕ, GPS ಮತ್ತು ಬ್ಲೂಟೂಥ್ ಇದೆ.

ಈ ಕಡಿಮೆ ದರದ ಮೊಬೈಲುಗಳಲ್ಲಿ ಒಂದಾಗಿರಬಹುದಾದ ಹ್ಯುವೈ u8110, 2.8 ಇಂಚುಗಳ ಸ್ಕ್ರೀನ್ ಡಿಸ್ ಪ್ಲೇ ಹಾಗೂ ಆಂಡ್ರಾಯ್ಡ್ ಆವೃತ್ತಿ 2.1 ಹೊಂದಿರಬಹುದಾದ ಸಾಧ್ಯತೆ ಇದೆ. ಇದು ಭಾರತಕ್ಕೆ ಬರುವ ವೇಳೆಗೆ 2.2 ಆವೃತ್ತಿಗೆ ಬದಲಾದರೂ ಆಶ್ಚರ್ಯವಿಲ್ಲ. ಇದರ ಬೆಲೆ ಸುಮಾರು ರು. 4000 ದಿಂದ 6000 ದ ವರೆಗೆ ಆಗುವ ಸಾಧ್ಯತೆ ಇದೆ.

ಈ ಕಡಿಮೆ ದರದ ಫೊನ್ ಬಿಡುಗಡೆಯ ವಿಷಯವನ್ನು ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀ ಆನಂದ್ ನಾರಂಗ್ ಕೂಡ ದೃಢೀಕರಿಸಿದ್ದಾರೆ. ಹೀಗೆ ಕಂಪನಿ ಕಡೆಯಿಂದಲೂ ಬಿಡುಗಡೆಯ ವಿಷಯ ಖಾತ್ರಯಾಗಿರುವುದರಿಂದ ಇನ್ನು ಆಂಡ್ರಾಯ್ಡ್ ಸ್ಮಾರ್ಟ್ ಫೊನ್ ಕೇವಲ ರು. 4000 ರಿಂದ 6000 ದಲ್ಲಿ ಲಭ್ಯವಾಗಲಿರುವುದು ಗ್ರಾಹಕರಿಗೆ ಸಂತೋಷದ ವಿಷಯವಾಗಲಿರುವುದು ಖಂಡಿತ.

ಬಿಡುಗಡೆಯ ಸುದ್ದಿ ಮಾತ್ರ ಘೋಷಣೆಯಾಗಿದೆ, ಮಾರುಕಟ್ಟೆಗೆ ಇನ್ನೂ ಬಂದಿಲ್ಲ. ಬರುವ ಸುದ್ದಿ ಹಾಗೂ ದರದ ಬಗ್ಗೆ ಪಕ್ಕಾ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot