ಈ ನಿಂಬೆಹಣ್ಣಿನಂಥ ಮೊಬೈಲ್ ಸಖತ್ತಾಗಿದೆ ನೋಡಿ

ಲೆಮನ್ ಹ್ಯಾಂಡ್ ಸೆಟ್ ಉತ್ತಮ ದರ್ಜೆಯ, ಶ್ರೇಷ್ಠ ಗುಣಮಟ್ಟಕ್ಕೆ ಹೆಸರುವಾಸಿ. ಈ ಹೊಸ ಮೊಬೈಲಿನಲ್ಲಿ ಇರುವ ವಿಶೇಷತೆಗಳು ಹೀಗಿವೆ. ಇದು ಡ್ಯುಯಲ್ ಸಿಮಗ GSM ಹ್ಯಾಂಡ್ ಸೆಟ್. ಹಾಟ್ ಸ್ವಾಪ್ ಸಹಿತ ಡ್ಯುಯಲ್ ಮೆಮೊರಿ ಕಾರ್ಡ್ ಹೊಂದಿರುವ ಫೊನಾಗಿದೆ. 8 GB ಡಾಟಾ ಸ್ಟೋರೇಜ್, 2.4 ಇಂಚ್ TFT ಡಿಸ್ ಪ್ಲೇ, 320 X 240 ರೆಸೊಲ್ಯೂಷನ್ ಇದರಲ್ಲಿದೆ.
1.3 ಮೆಗಾ ಪಿಕ್ಸೆಲ್ ಕ್ಯಾಮೆರಾ, ಇಮೇಜ್ ಎಡಿಟಿಂಗ್ ಫೀಚರ್ಸ್, ಮೀಡಿಯಾ ಪ್ಲೇಯರ್, 8 GB ಮೆಮೊರಿ ಸ್ಟೋರೇಜ್, ಲೆಡ್ ಟಾರ್ಚ್ ಇದರಲ್ಲಿದೆ.
ಕನೆಕ್ಟಿವಿಟಿಯಲ್ಲಿ ಡಾಟಾ ಟ್ರಾನ್ಸ್ ಫರ್, ಬ್ಲೂ ಟೂಥ್, ವೈ-ಫೈ, GPRS/WAP, 3.5 mm ಆಡಿಯೋ ಜಾಕ್ ಈ ಹೊಸ ಮೊಬೈಲಿನಲ್ಲಿದೆ.
ಇವೆಲ್ಲವುಗಳ ಜೊತೆ ಸಾಕಷ್ಟು ದೀರ್ಘಾವಧಿಯ ಬ್ಯಾಟರಿ ಬ್ಯಾಕಪ್ ಇದೆ. ಇಷ್ಟೆಲ್ಲ ಫಿಚರ್ಸ್ ಇದೆ ಎಂಬುದು ಈಗಾಗಲೇ ಜಗಜ್ಜಾಹೀರಾಗಿದ್ದರೂ ಬೆಲೆ ಮಾತ್ರ ಸದ್ಯಕ್ಕೆ ನಿಗದಿಯಾಗಿಲ್ಲ. ತೆಳ್ಳಗೆ ಬೆಳ್ಳಗಿರುವ ಇದು ಮಾರುಕಟ್ಟೆಗೆ ಸದ್ಯದಲ್ಲಿಯೇ ಬರಲಿದೆ, ಕಾದುನೋಡಿ ಖರೀದಿಸಿ...


Click it and Unblock the Notifications








