ಹೊಸ ಸ್ಪೈಸ್ ಮೊಬೈಲ್ ಸಖತ್ ಕಡಿಮೆ ಬೆಲೆ

Posted By: Staff

ಹೊಸ ಸ್ಪೈಸ್ ಮೊಬೈಲ್ ಸಖತ್ ಕಡಿಮೆ ಬೆಲೆ
ಸ್ವದೇಶಿ ಕಂಪೆನಿ ಸ್ಪೈಸ್ ಈಗಾಗಲೇ ಸಾಕಷ್ಟು ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ ಮೊಟ್ಟಮೊದಲ ಡ್ಯುಯಲ್ ಸಿಮ್ GSM ಆಂಡ್ರಾಯ್ಡ್ ಹ್ಯಾಂಡ್ ಸೆಟ್ ಹೊಸ ಸ್ಪೈಸ್ Mi350 ಮೊಬೈಲ್ ಫೋನ್ ಅನ್ನು ಮಾರುಕಟ್ಟೆಗೆ ಸದ್ಯದಲ್ಲಿಯೇ ಬಿಡಲಿದೆ ಸ್ಪೈಸ್.

ಈ ಹೊಸ ಮೊಬೈಲಿನಲ್ಲಿ ಆಂಡ್ರಾಯ್ಡ್ 2.3 ಆವೃತ್ತಿಯ ಜಿಂಜರ್ ಬ್ರೆಡ್ OS ಇರಲಿದೆ. ಇದು 3.5 ಇಂಚುಗಳ ಸ್ಕ್ರೀನ್ ಡಿಸ್ ಪ್ಲೇ ಹೊಂದಿದ್ದು 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಈಗ ಮಾರುಕಟ್ಟೆಯಲ್ಲಿರುವ ಇತರ ಆಂಡ್ರಾಯ್ಡ್ ಸ್ಮಾರ್ಟ್ ಫೊನುಗಳಂತೆಯೇ ಇದೆ. ಆದರೆ ಬೆಲೆ ಕಡಿಮೆ ಎನ್ನಬಹುದಾದ ರು. 9,000.

ಕೆಪಾಕ್ಟಿವ್ ಟಚ್ ಸ್ಕ್ರೀನ್ ಹೊಂದಿರುವ ಇದು ಸ್ಪೈಸ್ Mi350 ಎಂಬ ಹೆಸರಿನಲ್ಲಿಯೇ ಈಗಾಗಲೇ ಮಾರುಕಟ್ಟೆಯಲ್ಲಿದೆ. ಆದರೆ ಸದ್ಯಕ್ಕೆ ಇದರಲ್ಲಿ ಆಂಡ್ರಾಯ್ಡ್ 2.2 ಫ್ರೋಯೋ ಆವೃತ್ತಿಯ OS ಇದೆ. 600 MHz ಹೊಂದಿರುವ ಇದು GPS, 3G ಕೂಡ ಹೊಂದಿದೆ. ವೈ-ಫೈ, ಬ್ಲೂಟೂಥ್ ಹೊಂದಿರುವ ಈ ಹೊಸ ಮೊಬೈಲ್ ಡಾಟಾ ಶೇರಿಂಗ ಮತ್ತು ಮ್ಯಾನೇಜ್ ಮೆಂಟ್ ಅನ್ನು ಇನ್ನೂ ಸರಳಗೊಳಿಸಿದೆ.

480 X 320 ಪಿಕ್ಸೆಲ್ ರೆಸೊಲ್ಯೂಷನ್ ಡಿಸ್ ಪ್ಲೇ(HVGA ಗುಣಮಟ್ಟ), ಕ್ಯುಲ್ಕಾಮ್ 600 MHz ಪ್ರೊಸೆಸರ್, 512 MB RAM ಮತ್ತು 512 MB ROM ಇದರಲ್ಲಿದೆ. ಈ ಫೋನ್ ಪ್ರತಿಸ್ಪರ್ಧಿ ಮೋಟೋರೊಲಾ XT800 ಬೆಲೆ ರು. 19,000 ಇರುವುದು ಮಾರುಕಟ್ಟೆಯಲ್ಲಿ ಸ್ಪೈಸ್ ಗೆಲುವಿಗೆ ಹೆಚ್ಚು ಅವಕಾಶ ನೀಡಿದಂತಾಗಿದೆ. ಹಾಗಾಗಿ ಈ ಹೊಸ ಸ್ಪೈಸ್ Mi350 ಕ್ಲಿಕ್ ಆಗೋದು ಗ್ಯಾರಂಟಿ ಎಂದು ಮೊಬೈಲ್ ಮಾರುಕಟ್ಟೆಯಂಗಳ ಮಾತನಾಡಿಕೊಳ್ಳುತ್ತಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot