ಎಚ್ ಟಿ ಸಿ ಮೊಬೈಲಿಗೂ ಬರಲಿದೆ ಮ್ಯಾಂಗೋ

Posted By: Staff

ಎಚ್ ಟಿ ಸಿ ಮೊಬೈಲಿಗೂ ಬರಲಿದೆ ಮ್ಯಾಂಗೋ
ಈಗಾಗಲೇ ಬಹಳಷ್ಟು ಕಂಪನಿಗಳಮೊಬೈಲುಗಳಿಗೆ ಮ್ಯಾಂಗೋ OS ಗಳನ್ನು ಅಳವಡಿಸಲಾಗಿದೆ. ಆದರೆ ತೀರಾ ಇತ್ತೀಚಿನವರೆಗೂ ಎಚ್ ಟಿಸಿ ಅದರಿಂದ ಹೊರತಾಗಿತ್ತು. ಆದರೆ ಈಗ ಎಚ್ ಟಿಸಿ ಕೂಡ ಮ್ಯಾಂಗೋ OS ಅಳವಡಿಸಲು ಸಜ್ಜಾಗಿದೆ. ಬರಲಿರುವ ಎಚ್ ಟಿ ಸಿ ಕಂಪೆನಿಯ ಟ್ರೋಫಿ ಮತ್ತು HD7 ಮೊಬೈಲುಗಳಿಗೆ ಈ ಸೌಲಭ್ಯದ ಸೌಭಾಗ್ಯ ದೊರಕಲಿದೆ.

ಈ ಮೂಲಕ ಈ ಮೊಬೈಲುಗಳಲ್ಲಿ ಅತ್ಯಾಧುನಿಕವಾದ ಸೋಷಿಯಲ್ ನೆಟ್ ವರ್ಕಿಂಗ್ ಸೌಲಭ್ಯ ಲಭ್ಯ. ಫೇಸ್ ಬುಕ್, ಟ್ವಿಟ್ಟರ್ ಹಾಗೂ ಇತರ ಆಧುನಿಕ ಸಾಮಾಜಿಕ ತಾಣಗಳು ಲಭ್ಯವಾಗಲಿರುವುದರಿಂದ ಈ ಮೊಬೈಲ್ ಹೊಸ ಜನರೇಶನ್ ಸ್ನೇಹಿ ಎನಿಸಿಕೊಳ್ಳಲಿದೆ. ಇದೀಗ ಜಗತ್ತಿನ ತುಂಬೆಲ್ಲಾ ಮ್ಯಾಂಗೋ ಫೊನ್ ಗಳನ್ನು ಹರಡಲು ಮೈಕ್ರೋಸಾಫ್ಟ್ ಕಂಪೆನಿ ನಿರ್ಧರಿಸಿದೆ.

ಈಗಾಗಲೇ ಮಾರುಕಟ್ಟೆಯನ್ನು ಸಾಕಷ್ಟು ವಿಸ್ತರಿಸಿರುವ ಮೈಕ್ರೋಸಾಫ್ಟ್ ಗೆ ಈ ಹೊಸ ವಿಂಡೋಸ್ ಹೆಚ್ಚಿನ ಬಲ ನೀಡಲಿದೆ. ಈ ಅಪ್ಲಿಕೇಶನ್ ಗಳನ್ನು ನೀವು ನೇರವಾಗಿ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಹೊಂದಬಹುದು. ನಂತರ ಈ ಮೊಬೈಲುಗಳನ್ನು ನಿಮ್ಮ ಕಂಪ್ಯೂಟರ್ ಗೆ ಕನೆಕ್ಟ್ ಮಾಡಿದರಾಯಿತು. ನೀವು ಉಲ್ಲಾಸದಿಂದ ಕೆಲಸ ಮಾಡಬಹುದು.

3.8 ಇಂಚುಗಳ ಸ್ಕ್ರೀನ್ ಮತ್ತು ಗೋರಿಲ್ಲಾ ಡಿಸ್ ಪ್ಲೇ ಹೊಂದಿರುವ ಟ್ರೋಫಿ ಸಾಕಷ್ಟು ಉತ್ತಮ ಕ್ವಾಲಿಟಿ ಹೊಂದಿದೆ. ಇದರಲ್ಲಿ 1GHz ಸ್ಕಾರ್ಪಿಯನ್ ಪ್ರೊಸೆಸರ್ ಇದೆ. ಇದು 3G ಫ್ಲಾಟ್ ಫಾರ್ಮ್ ಮತ್ತು ವೈ-ಫೈ ಹೊಂದಿರುವುದು ಅನುಕೂಲಕರವಾಗಿದೆ. 5 ಮೆಗಾ ಫಿಕ್ಸೆಲ್ ಕ್ಯಾಮೆರಾ ಹೊಂದಿರುವ ಇದರ ಬೆಲೆ ರು. 25,000.

ಇನ್ನು ಎಚ್ ಟಿ ಸಿ HD7 4.3 ಇಂಚುಗಳ ಅಗಲದ ಸ್ಕ್ರೀನ್ ಮತ್ತು ಮಲ್ಟಿ ಟಚ್ ಸ್ಕ್ರೀನ್ ಜೊತೆ ಎಕ್ಸೆಲೆರೋಮೀಟರ್ ಕಂಟ್ರೋಲ್ ಕೂಡ ಹೊಂದಿದೆ. ಮಿಕ್ಕ ಸೌಲಭ್ಯಗಳು ಟ್ರೋಫಿಯಲ್ಲಿದ್ದಂತೇ ಇವೆ. ಆದರೆ ಈ HD7 ಬೆಲೆ ಟ್ರೋಫಿಗಿಂತ ಹೆಚ್ಚಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot