ಹೊಸ ಜೀಫೈವ್ ಮೊಬೈಲ್ ಬರುತ್ತಿದೆ, ದಾರಿ ಬಿಡಿ

By Super
|
ಹೊಸ ಜೀಫೈವ್ ಮೊಬೈಲ್ ಬರುತ್ತಿದೆ, ದಾರಿ ಬಿಡಿ
ಮೊಬೈಲ್ ಮಾರುಕಟ್ಟೆಯಲ್ಲೀಗ ಹೊಸ ಫೋನುಗಳದ್ದೇ ಭರಾಟೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬರುತ್ತಿರುವ ಫೊನುಗಳು ದಿನಕ್ಕೊಂದು ರೂಪ, ಆಕಾರದಲ್ಲಿ ಕಂಗೊಳಿಸುತ್ತಿವೆ. ಇದೀಗ ಮೊಬೈಲ್ ಮಾರುಕಟ್ಟೆಗೆ ಹೊಸ 2 ಮೊಬೈಲ್ ಮೂಲಕ ಬರಲಿದೆ ಜೀಫೈವ್. ಬರಲಿರುವ ಮೊಬೈಲ್ ಗಳ ಹೆಸರು, ಜಿಫೈವ್ G99 ಮತ್ತು G66i.

ಜಿಫೈವ್ G99 ನಲ್ಲಿ ಸಾಕಷ್ಟು ಉತ್ತಮವಾದ ಡಿಸೈನ್ ಮತ್ತು ಟಚ್ & ಟೈಪ್ ಇನ್ ಪುಟ್ಸ್ ಇದೆ. ಹೈ ಎಂಡ್ ಫೋನಾಗಿರುವ ಇದು ಬ್ರೌನ್ ಬಣ್ಣದಲ್ಲಿ ಲಭ್ಯ. 2.6 ಇಂಚುಗಳ TFT ಸ್ಕ್ರೀನ್ ಡಿಸ್ ಪ್ಲೇ, ಫ್ಲಿಪ್ ಕವರ್ ಮತ್ತು ಹೆಚ್ಚಿ ಬ್ಯಾಟರಿ ಹೊಂದಿದೆ. ಇದು ಡ್ಯುಯಲ್ ಸಿಮ್ ಹಾಗೂ ಜಾವಾ ಪ್ಲಾಟ್ ಫಾರ್ಮ್ ಹೊಂದಿದೆ. 4 GB ಮೆಮೊರಿ, ಸ್ಟೀರಿಯೋ ಬ್ಲೂಟೂಥ್, FM ರೇಡಿಯೋ, ಮ್ಯೂಸಿಕ್ ಮತ್ತು ವೀಡಿಯೋ ಪ್ಲೇಯರ್ ಇದರಲ್ಲಿವೆ.

ಇನ್ನು ಜೀಫೈವ್ G66 ನಲ್ಲಿ 2.8 ಇಂಚುಗಳ QVGA ಟಚ್ ಸ್ಕ್ರೀನ್ ಇದ್ದು G99 ಗಿಂತ ಕೂಲ್ ಲುಕ್ ಹೊಂದಿದೆ. ವೈ-ಫಯ ಮತ್ತು ಆನ್ ಲಾಗ್ ಟಿವಿ ಇದರಲ್ಲಿದೆ. ಡ್ಯುಯಲ್ ಫೋನ್ ಹಾಗೂ ಡ್ಯುಯಲ್ ಸಿಮ್ ಆಯ್ಕೆ ಇದರಲ್ಲಿದೆ. ಇದರಲ್ಲಿ 1500 mAh Li ion ಬ್ಯಾಟರಿ ಹಾಗೂ 2 ಕ್ಯಾಮೆರಾ ಇದ್ದು ವೀಡಿಯೋ ಚಾಟ್, ಸ್ಟೀರಿಯೋ ಬ್ಲೂಟೂಥ್, FM ರೇಡಿಯೋ, 3.5 mm ಆಡಿಯೋ ಜ್ಯಾಕ್ ಇದೆ. 2 GB ಮೆಮೊರಿ ಕಾರ್ಡ್ ಜೊತೆ ವಿಸ್ತರಿಸಬಹುದಾದ 4 GB ಇದೆ.

ಈ ಎರಡು ಮೊಬೈಲುಗಳಲ್ಲಿ ಜಿಫೈವ್ G99 ಬೆಲೆ ರು. 2,800 ಹಾಗೂ G66i ಬೆಲೆ ರು. 4,000 ಇದೆ, ಆಯ್ಕೆ ನಿಮ್ಮದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X