ಹೊಸ ಎಚ್ ಟಿ ಸಿ ಸ್ಮಾರ್ಟ್ ಫೋನ್ ಸದ್ಯದಲ್ಲೇ ಬರಲಿದೆ

By Super
|
ಹೊಸ ಎಚ್ ಟಿ ಸಿ ಸ್ಮಾರ್ಟ್ ಫೋನ್ ಸದ್ಯದಲ್ಲೇ ಬರಲಿದೆ
ಪ್ರಂಪಂಚದ ಮೊಬೈಲ್ ಮಾರುಕಟ್ಟೆಯಲ್ಲಿ ಎಚ್ ಟಿಸಿ ಹೆಸರು ಅತ್ಯಂತ ಜನಪ್ರಿಯ. ಈಗಾಗಲೇ ಸಾಕಷ್ಟು ಹೊಸ ಮೊಬೈಲಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಈ ಕಂಪನಿ ಇದೀಗ ಹೊಸ 4G ತಂತ್ರಜ್ಞಾನ ಆಧಾರಿತ ಮೊಬೈಲ್ ಬಿಡುಗಡೆಗೆ ಸಜ್ಜಾಗಿದೆ. ಇದಕ್ಕೂ ಮೊದಲು ಆಂಡ್ರಾಯ್ಡ್ ಫೊನ್ ಬಿಡುಗಡೆ ಘೋಷಿಸಿ ಜನರಿಂದ ಮನ್ನಣೆ ಪಡೆದುದನ್ನು ನಾವಿಲ್ಲಿ ಸ್ಮರಿಸಬಹುದು.

ಇದೀಗ ಬರಲಿರುವ 4G ಮೊಬೈಲ್ ಹೊಸ ಎಚ್ ಟಿಸಿ ಅಮೇಝ್ 4G ಖಂಡಿತವಾಗಿಯೂ ಕ್ಲಿಕ್ ಆಗೋದು ಗ್ಯಾರಂಟಿ ಎನ್ನುತ್ತವೆ, ಮೊಬೈಲ್ ಮಾರುಕಟ್ಟೆ ಮೂಲಗಳು.

ಈ ಹೊಸ ಫೊನಿನಲ್ಲಿರುವ ವಿಶೇಷತೆಗಳು:
* ಡ್ಯುಯಲ್ ಕೋರ್ ಸ್ಕಾರ್ಪಿಯನ್ ಪ್ರೊಸೆಸರ್/ 1.5 GHz ಕ್ಲಾಕ್ ಸ್ಪೀಡ್ ಕ್ಯುಲ್ಕಾಮ್ ಸ್ನಾಪ್ಡ್ರಗಾನ್ S3 ಚಿಪ್ ಸೆಟ್
* ಗೂಗಲ್ ಆಂಡ್ರಾಯ್ಡ್ v2.3.4 ಜಿಂಜರ್ ಬ್ರೆಡ್ OS
* 4.3 ಇಂಚುಗಳ S-LCD ಟಚ್ ಸ್ಕ್ರೀನ್ ಕೆಪಾಕ್ಟಿವ್ ಡಿಸ್ ಪ್ಲೇ/ 540 x 960 ರೆಸೊಲ್ಯೂಷನ್
* ಎಕ್ಸಿಲೆರೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸರ್
* 850 / 900 / 1800 / 1900 ಫ್ರೀಕ್ವೆನ್ಸೀಸ್/ 2G ನೆಟ್ ವರ್ಕ್ ಮತ್ತು HSDPA 1700 / 2100 3G ಫ್ರೀಕ್ವೆನ್ಸೀಸ್
* 173 ಗ್ರಾಮ್ಸ್, 130 x 65.6 x 11.8 mm ಡೈಮೆನ್ಷನ್
* 16 GB ಆಂತರಿಕ ವಿಸ್ತರಿಸಬಹುದಾದ 32 GB, ಮೈಕ್ರೋ SD ಕಾರ್ಡ್, 1 GB ಯ RAM, ಆಪ್ ಆಕ್ಸೆಸ್ ಇನ್ಪುಟ್ ಕಮಾಂಡ್ಸ್
* GPRS ಮತ್ತು EDGE ಕನೆಕ್ಟಿವಿಟಿ/ DLNA, 802.11 b/g/nವೈ-ಫೈ, v3.0 A2DP ಬ್ಲೂಟೂಥ್
* v2.0 micro USB port and gets it power from a 1730 mAh Li ion
* 8 ಮೆಗಾ ಪಿಕ್ಸೆಲೆ ರೇರ್ ಕ್ಯಾಮೆರಾ/ ಡ್ಯುಯಲ್ ಲೆಡ್ ಫ್ಲಾಶ್/ 3264 x 2448 ಪಿ. ರೆಸೊಲ್ಯೂಷನ್/
* 2 ಮೆಗಾ ಪಿಕಸ್ಎಲ್ ಸೆಕೆಂಡರಿ ಕ್ಯಾಮೆರಾ, ವಿಡಿಯೋ ಚಾಟ್
* v2.0 ಮೈಕ್ರೋ USB ಪೋರ್ಟ್/ 1730 mAh Li ion ಬ್ಯಾಟರಿ

ಹೀಗೆ ಸಾಕಷ್ಟು ವಿಶೇಷತೆಗಳನ್ನು ಹೊಂದಿರುವ ಈ ಹೊಸ GPS ಆಧಾರಿತ ಎಚ್ ಟಿಸಿ ಅಮೇಝ್ 4G ಅಂದಾಜು ಬೆಲೆ ರು. 34,000. ಇದರಲ್ಲಿರುವ ಅತ್ಯಾಧುನಿಕ ಫಿಚರ್ಸ್ ಗಳಿಗೆ ಹೋಲಿಸಿದರೆ ಬೆಲೆ ಹೆಚ್ಚು ಎನಿಸಲಾರದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X