Subscribe to Gizbot

ಹೊಸ ಫಿಲಿಪ್ಸ್ ಆಂಡ್ರಾಯ್ಡ್ ಫೋನ್ ಹೀಗಿದೆ ನೋಡಿ

Posted By: Super

ಹೊಸ ಫಿಲಿಪ್ಸ್ ಆಂಡ್ರಾಯ್ಡ್ ಫೋನ್ ಹೀಗಿದೆ ನೋಡಿ
ಫಿಲಿಪ್ಸ್ ಕಂಪೆನಿ ಎಲ್ಲರಿಗೂ ಗೊತ್ತು. ದಶಕಗಳ ಹಿಂದೆ ಗ್ಯಾಜೆಟ್ಸ್ ಲೋಕವನ್ನು ಅಧಿಪತಿಯಂತೆ ಆಳಿದ್ದ ಫಿಲಿಪ್ಸ್ ನಂತರ ತೆರೆಮೆರೆಗೆ ಸರಿದಿತ್ತಾದರೂ ಜನ ಈ ಹೆಸರನ್ನು ಮರೆತಿಲ್ಲ. ಇದೀಗ ಆಂಡ್ರಾಯ್ಡ್ ಮೊಬೈಲ್ ಮೂಲಕ ಮಾಲೀಕತ್ವ ಬದಲಾವಣೆಯೊಂದಿಗೆ ಮತ್ತೆ ಮಾರುಕಟ್ಟೆಗೆ ಕಾಲಿಡುತ್ತಿದೆ ಫಿಲಿಪ್ಸ್ ಕಂಪೆನಿ.

ಈಗ ಬಿಡುಗಡೆ ಆಗುತ್ತಿರುವ ಮೊಬೈಲುಗಳು ಫಿಲಿಪ್ಸ್ X726 ಮತ್ತು ಫಿಲಿಪ್ಸ್ X9320. ಇದರ ಮೊದಲ ವಿಶೇಷತೆ ಎಂದರೆ ಇದು 3G ಆಂಡ್ರಾಯ್ಡ್ OS ಹೊಂದಿರುವ ಸ್ಮಾರ್ಟ್ ಫೋನ್.

ಈಗಾಗಲೇ ಫಿಲಿಪ್ಸ್ ಕಂಪನಿಯ ಝೇನಿಯಮ್ ಮೊಬೈಲ್ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಕಾಣುತ್ತಿದೆ. ಅದೇ ರೀತಿಯ 5 ಹೊಸ ಆವೃತ್ತಿಗಳು ಪರಿಚಯಿಸಲ್ಲಪಟ್ಟಿವೆ. ಇದೀಗ ಇನ್ನೆರಡು ಹೊಸ ಫೊನುಗಳು ಬರಲಿರುವುದು ಫಿಲಿಪ್ಸ್ ಬಳಕೆದಾರರಿಗೆ ಸಂತೋಷ ತಂದಿರುವುದು ಗ್ಯಾರಂಟಿ.

ಫಿಲಿಪ್ಸ್ X726 ಫೊನಿನಲ್ಲಿರುವ ವಿಶೇಷತೆಗಳು:
* ಡ್ಯುಯಲ್ ಸಿಮ್
* ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಪ್ಲಾಟ್ ಫಾರ್ಮ
* Li ion ಬ್ಯಾಟರಿ, 15 ತಾಸುಗಳ ಟಾಕ್ ಟೈಮ್/ 40 ದಿನಗಳ ಸ್ಟ್ಯಾಂಡ್ ಬೈ
* FM ರೇಡಿಯೋ, ಬ್ಲೂಟೂಥ್ 2.1 ಆವೃತ್ತಿ/ A2DP ತಂತ್ರಜ್ಞಾನ

ಈ ಅವಳಿಯ ಇನ್ನೊಂದು ಫೊನ್ ಫಿಲಿಪ್ಸ್ X9320 ನಲ್ಲಿ ಕೂಡ ಡ್ಯುಯಲ್ ಸಿಮ್ ಇದೆ. 4.3 ಇಂಚುಗಳ ಕೆಪಾಕ್ಟಿವ್ ಟಚ್ ಸ್ಕ್ರೀನ್ ಇದು ಹೊಂದಿದೆ. ಫಿಲಿಪ್ಸ್ X726 ನಲ್ಲಿ ಇರದ ವಿಡಿಯೋ ಕಾಲಿಂಗ್ ಸೌಲಭ್ಯ ಇದರಲ್ಲಿದೆ. ಸದ್ಯಕ್ಕೆ ಇವುಗಳ ಬೆಲೆ ನಿಗದಿ ಆಗಿಲ್ಲ.

ಆದರೆ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿಯೇ ಇವು ಬರಲಿವೆ ಎಂಬುದು ಮೊಬೈಲ್ ಮಾರುಕಟ್ಟೆಯಂಗಳದ ಸುದ್ದಿ. ಏಕೆಂದರೆ ಈಗ ಮಾರುಕಟ್ಟೆಯಲ್ಲಿರುವ ಝೇನಿಯಮ್ ಬೆಲೆ ಪ್ರಾರಂಭವಾಗುವುದು ಕೇವಲ ರು. 1,800. ಹಾಗಾಗಿ ಈ ಫೋನಿಗೂ ಜನರು ಕಾಯುವಂತಾಗುವುದರಲ್ಲಿ ಅರ್ಥ ಇದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot