ಈ ಹೊಸ ಮ್ಯಾಂಗೋ ಫೊನ್ ತಾನಿಯಾ ಸ್ಮಾರ್ಟ್ ಆಗಿದೆ

By Super
|
ಈ ಹೊಸ ಮ್ಯಾಂಗೋ ಫೊನ್ ತಾನಿಯಾ ಸ್ಮಾರ್ಟ್ ಆಗಿದೆ
ಚೀನಾ ದೇಶದ ಕಂಪನಿ ZTE, ಇದೀಗ ಮೊಬೈಲ್ ಹಾಗೂ ಸಂಗೀತ ಸಾಧನಗಳನ್ನು ಉತ್ಪಾದಿಸಿ ಮಾರಾಟ ಮಾಡುವ ಮೂಲಕ ಗ್ಯಾಜೆಟ್ಸ್ ಲೋಕದಲ್ಲಿ ಮಿಂಚಲು ರೆಡಿಯಾಗಿದೆ. ಗ್ಯಾಜೆಟ್ಸ್ ಲೋಕದ ಒಳ-ಹೊರಗನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಈ ಕಂಪನಿ ಇದೀಗ ಸ್ಮಾರ್ಟ್ ಫೋನ್ ಬಿಡುಗಡೆಗೆ ಸಜ್ಜಾಗಿದೆ. ಬರಲಿರುವ ಫೊನ್ ಹೆಸರು ZTE ತಾನಿಯಾ.

ಈ ಹೊಸ ಫೋನ್ ಅತ್ಯಾಧುನಿಕ OS ವಿಂಡೋಸ್ ಮ್ಯಾಂಗೋ 7.5 ನಿಂದ ಕಾರ್ಯನಿರ್ವಹಿಸಲಿರುವುದು ಅತ್ಯಂತ ವಿಶೇಷ. ಏಕೆಂದರೆ, ಮಾರುಕಟ್ಟೆಯಲ್ಲಿರುವ ಸಾಮಾನ್ಯ ಎಲ್ಲಾ ಮೊಬೈಲುಗಳೂ ಆಂಡ್ರಾಯ್ಡ್ ನಿಂದ ಕಾರ್ಯನಿರ್ವಹಿಸುತ್ತಿವೆ. ಈ ಹೊಸ ಮ್ಯಾಂಗೋ ಈಗ ಹೊಸ ಸಾಹಸವಾಗಿರುವುದರಿಂದ ಸಹಜವಾಗಿಯೇ ಮೊಬೈಲ್ ಮಾರುಕಟ್ಟೆ ಹಾಗೂ ಗ್ರಾಹಕರಲ್ಲಿ ಕುತೂಹಲ ಜಾಸ್ತಿ ಇರಲಿದೆ. ಹಾಗಾಗಿ ಈ ಹೊಸ ಫೊನ್ ಬೆಲೆ ಕಡಿಮೆ ಇದ್ದರೆ ಕ್ಲಿಕ್ ಆಗೋದು ಗ್ಯಾರಂಟಿ ಎನ್ನಲಾಗಿದೆ.

ಈ ಹೊಸ ಫೋನಿನಲ್ಲಿರುವ ವಿಶೇಷತೆಗಳು:
* ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಮ್ಯಾಂಗೋ 7.5
* ಡಯಾಗ್ನಲ್ ಡಿಸ್ ಪ್ಲೇ, ಸ್ಕ್ರೀನ್ ಸೈಜ್ 4.3 ಇಂಚುಗಳು/ 480 X 80 ಪಿ. ರೆಸೊಲ್ಯೂಷನ್
* 5 ಮೆಗಾ ಪಿಕ್ಸೆಲ್ ಕ್ಯಾಮೆರಾ, ಸ್ಟ್ಯಾಂಡರ್ಡ್ ರೆಸೊಲ್ಯೂಷನ್
* 1X ಆಪ್ಟಿಕಲ್ ಝೂಮ್ ಮತ್ತು ಲೆಡ್ ಫ್ಲಾಶ್, ಬೆಸ್ಟ್ ಇಮೇಜ್ ಕ್ಯಾಪ್ಚರಿಂಗ್
* ವೈ-ಫೈ 802.11 b/g/n, ಬ್ಲೂಟೂಥ್ 3.0 ಅಥವಾ 2.1 ಆವೃತ್ತಿ
* 3G ಕಾಂಪಿಟೆಬಿಲಿಟಿ, 1GHz ಪ್ರೊಸೆಸರ್

ಈ ಅತ್ಯಾಧುನಿಕವಾದ ಮೊಬೈಲ್ ಬೆಲೆ ಹಾಗೂ ಬಿಡುಗಡೆಯ ದಿನಾಂಕ ಸದ್ಯಕ್ಕೆ ನಿಗದಿಯಾಗಿಲ್ಲ. ಮಾಹಿತಿ ಸಿಕ್ಕ ತಕ್ಷಣ ನಮ್ಮಲ್ಲಿ ಮೂಡಿಬರಲಿದೆ, ವೀಕ್ಷಿಸಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X