ಮೊಬೈಲ್‌ ಬಗೆಗಿನ ಈ 10 ಆಘಾತಕಾರಿ ವಿಷಯಗಳು ನಿಮಗೆ ಖಂಡಿತ ತಿಳಿದಿಲ್ಲ!!

|

ಮೊಟ್ಟಮೊದಲ ಬಾರಿಗೆ ಮೊಬೈಲ್ ಅನ್ನು ಅಭಿವೃದ್ದಿಗೊಳಿಸಿದ್ದು ಮೊಟೊರೊಲಾ ಕಂಪನಿ. ಮೊಬೈಲ್ ಅನ್ನು ಕೈಯಲ್ಲಿ ಹಿಡಿದು ಮೊದಲ ಕರೆಲ್ ಮಾಡಿದ್ದು ಮೊಟೊರೊಲಾ ಸಂಶೋಧಕ ಮತ್ತು ಕಾರ್ಯನಿರ್ವಾಹಕರಾದ 'ಮಾರ್ಟಿನ್ ಕೂಪರ್' ಎಂಬ ಮಾಹಿತಿಗಳು ನಿಮಗೆ ಸಿಗುವುದು ಕಷ್ಟವೇನಲ್ಲ. ಆದರೆ, ನಾವಿಂದು ಹೇಳುವ ಮಾಹಿತಿ ಮಾತ್ರ ಬಹುಬೇಗ ಸಿಗುವುದಿಲ್ಲ.

ಹೌದು, ಭಾರತದಲ್ಲಿ ಜಲನಿರೋಧಕ ಸ್ಮಾರ್ಟ್‌ಪೋನ್ ಯಾವುವು ಎಂದ ಹುಡುಕುತ್ತಿದ್ದರೆ, ಒಂದು ದೇಶದಲ್ಲಿನ ಶೇ 90% ಪ್ರತಿಶತ ಮೊಬೈಲ್ ಫೋನ್ಗಳು ಜಲನಿರೋಧಕವಾಗಿವೇ ಇವೆ.! ಮತ್ತೊಂದು ದೇಶದಲ್ಲಿ ಪ್ರತಿವರ್ಷಕ್ಕೆ 100,000 ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಶೌಚಾಲಯದಲ್ಲಿ ಬೀಳಿಸಿಕೊಳ್ಳುತ್ತಾರೆ ಎಂಬ ಕುತೋಹಲಕಾರಿ ಮಾಹಿತಿಗಳು ಅಷ್ಟು ಬೇಗ ಸಿಗುವುದಿಲ್ಲ.

ಮೊಬೈಲ್‌ ಬಗೆಗಿನ ಈ 10 ಆಘಾತಕಾರಿ ವಿಷಯಗಳು ನಿಮಗೆ ಖಂಡಿತ ತಿಳಿದಿಲ್ಲ!!

ಈ ರೀತಿಯ ಕುತೋಹಲಕಾರಿ ಮಾಹಿತಿಗಳು ಮೊಬೈಲ್ ಬಳಕೆದಾರರಿಗೆ ಖಂಡಿತವಾಗಿಯೂ ಆಶ್ಚರ್ಯ ಮೂಡಿಸದೇ ಇರಲು ಸಾಧ್ಯವಿಲ್ಲ ಎಂದು ನನ್ನ ಅಭಿಪ್ರಾಯ. ಹಾಗಾಗಿ, ಇಂದಿನ ಲೇಖನದಲ್ಲಿ ನಮ್ಮ ಜೀವನದಲ್ಲಿ ಅನಿವಾರ್ಯ ಭಾಗವಾಗಿರುವ ಈ ಮೊಬೈಲ್‌ಗಳು ಮೊಬೈಲ್ ಇತಿಹಾಸಕ್ಕೆ ಸೇರಿಸಿರುವ ಸ್ವಲ್ಪ ವಿಚಿತ್ರ ಅಂಶಗಳನ್ನು ಯಾವುವು ಎಂಬುದನ್ನು ತಿಳಿಯೋಣ.

1

1

ಜಪಾನ್‌ನಲ್ಲಿ ಶೇ 90% ಪ್ರತಿಶತ ಮೊಬೈಲ್ ಫೋನ್‌ಗಳು ಜಲನಿರೋಧಕವಾಗಿವೆ (Waterproof). ಹಾಗಾಗಿ, ಅಲ್ಲಿನ ಯುವಕರು ಸ್ನಾನ ಮಾಡುವಾಗಲೂ ಸಹ ಮೊಬೈಲ್ ಬಳಸುತ್ತಾರೆ.

2

2

ಇದು ತಮಾಷೆ ಅನಿಸಬಹುದಾದರೂ ಸಹ ನಿಜ. ಪ್ರತಿ ವರ್ಷ ಸುಮಾರು 100,000 ಮೊಬೈಲ್ ಫೋನ್‌ಗಳನ್ನು ಬ್ರಿಟನ್‌ನಲ್ಲಿ ಶೌಚಾಲಯದಲ್ಲಿ ಬೀಳಿಸಿಕೊಳ್ಳುತ್ತಾರಂತೆ.

3

3

ಮಾನವನ ಮೂತ್ರವನ್ನು ಬಳಸುವುದರ ಮೂಲಕ ಮೊಬೈಲ್ ಫೋನನ್ನು ಚಾರ್ಜ್ ಮಾಡಬಹುದೆಂದು ನಂಬಬಹುದೇ? ಹೌದು, ವಿಜ್ಞಾನಿಗಳು ಇದನ್ನು ಪತ್ತೆ ಹಚ್ಚಿದ್ದಾರೆ.

4

4

1983 ರಲ್ಲಿ ಮೊದಲ ಮೊಬೈಲ್ ಫೋನ್‌ಗಳು ಸುಮಾರು US $ 4000 ಗಳಲ್ಲಿ ಮಾರಾಟವಾದವು ಅಂದ್ರೆ ನಮ್ಮಲ್ಲಿ ಇಂದು 2.5 ಲಕ್ಷ ರೂ.ಗಳು.

5

5

ಮೊಟೊರೊಲಾದ ಸಂಶೋಧಕರಾದ ಮಾರ್ಟಿನ್ ಕೂಪರ್ 4ನೇ ಎಪ್ರಿಲ್ 1973 ರಂದು ಮೊದಲ ಡೈನಾಟ್ಯಾಕ್ ಮಾದರಿಯ ಮೊದಲ ಹ್ಯಾಂಡ್ಹೆಲ್ಡ್ ಮೊಬೈಲ್ ಫೋನ್ ಕರೆ ಮಾಡಿದರು.

6

6

ನೀವು ಮೊಬೈಲ್ ಫೋನ್ ಇಲ್ಲದೆ ಇರುವ ಭಯದಿಂದ ಬಳಲುತ್ತಿದ್ದರೆ ಅದನ್ನು ನಾಮೋಫೋಬಿಯಾ (Nomophobia) ಕಾಯಿಲೆ ಎಂದು ನಿರ್ಧರಿಸಬಹುದು.

7

7

2003ರಲ್ಲಿ ಪ್ರಾರಂಭವಾದಾಗಿನಿಂದ ಈವರೆಗೆ ಪ್ರಪಂಚದ ಅತ್ಯುತ್ತಮ ಮಾರಾಟವಾದ ಫೋನ್ ಹ್ಯಾಂಡ್ಸೆಟ್ ಎಂಬ ಹೆಗ್ಗಳಿಕೆಯನ್ನು 250 ಮಿಲಿಯನ್‌ಗಿಂತ ಹೆಚ್ಚು ಮಾರಾಟವಾದ ನೋಕಿಯಾ 1100 ಮೊಬೈಲ್ ಹೊಂದಿದೆ.

8

8

ಇಂದಿನ ಮೊಬೈಲ್ ಫೋನ್‌ ಕಂಪ್ಯೂಟಿಂಗ್ ಪವರ್ ಅನ್ನು ನೀವು ಊಹಿಸಬಹುದೇ? ಇದು ಚಂದ್ರನ ಮೇಲೆ ಅಪೊಲೊ 11 ಕ್ಕೆ ಬಳಸಿದ ಕಂಪ್ಯೂಟರ್ಗಳಿಗಿಂತ ಹೆಚ್ಚು ಅಂತೆ.

ಮೊಬೈಲ್ ಇತಿಹಾಸದ ಈ 5 ವಿಶೇಷ ಮಾಹಿತಿ ಆಶ್ಚರ್ಯ ಮೂಡಿಸದೇ ಇರವು!!

ನೋಕಿಯಾ ಕಂಪನಿಯ ಬಗ್ಗೆ ನಿಮಗೆ ಗೊತ್ತಿಲ್ಲ ಈ ಕುತೂಹಲಕಾರಿ ಅಂಶಗಳು..!

ನೋಕಿಯಾ ಕಂಪನಿಯ ಬಗ್ಗೆ ನಿಮಗೆ ಗೊತ್ತಿಲ್ಲ ಈ ಕುತೂಹಲಕಾರಿ ಅಂಶಗಳು..!

ವಿಶ್ವ ಮೊಬೈಲ್ ಕ್ಷೇತ್ರದಲ್ಲಿ ಎಂದಿಗೂ ಅಳಿಯದ ಒಂದು ಹೆಸರಿದೆ. ಭಾರತದಂತಹ ಬಹು ವೈವಿಧ್ಯ ರಾಷ್ಟ್ರದಲ್ಲಿ ಗ್ರಾಮೀಣ ಭಾಗಕ್ಕೂ ತನ್ನ ಬ್ರಾಂಡ್‌ ಹೆಸರನ್ನೂ ಪಸರಿಸಿದ ಒಂದು ಕಂಪನಿಯಿದೆ. ಜನರನ್ನು ಬೆಸೆಯುತ್ತಾ ಜನರ ನಾಡಿಮಿಡಿತದಲ್ಲಿ ಬೆರೆತಿದ್ದ ಬ್ರಾಂಡ್‌ ಒಂದಿದೆ. ಏನಪ್ಪ ಇಷ್ಟು ಹೊಗಳುತ್ತಿದ್ದಿವಿ ಎಂದು ಕೊಂಡ್ರಾ, ಇದು ಹೊಗಳಿಕೆಯಲ್ಲ ನಿಜ ಕೂಡ. ಜಾಗತಿಕ ಮೊಬೈಲ್ ಲೋಕದಲ್ಲಿ ಹಲವು ಮೊದಲುಗಳಿಗೆ ಸಾಕ್ಷಿಯಾದ ನೋಕಿಯಾ ಸಂಸ್ಥೆ ಮೇಲಿನ ಹೊಗಳಿಕೆಗೆ ಅರ್ಹವಾಗಿಯೇ ಭಾಜನವಾಗುತ್ತದೆ.

1865ರಿಂದ ಇಲ್ಲಿಯವರೆಗೂ ನೋಕಿಯಾದ ಹಾದಿ ಯಾರು ತುಳಿಯದ ಹಾದಿಯೇ. ಸುಮಾರು 150 ವರ್ಷಗಳ ಬಹುದೊಡ್ಡ ಅವಧಿಯಲ್ಲಿ ಜನರಲ್ಲಿನ ನಂಬಿಕೆಯನ್ನು ಹಾಗೇ ಉಳಿಸಿಕೊಳ್ಳುವುದು ಎಂದರೆ ಬಹುದೊಡ್ಡ ಕಾರ್ಯವೇ ಸರಿ. ಹಲವು ಜನರಿಗೆ ನೋಕಿಯಾ ಹೆಸರು ಗೊತ್ತಿರುವುದು ಕೇವಲ ಮೊಬೈಲ್ ಸಂಬಂಧಿ ಕ್ಷೇತ್ರದಲ್ಲಿ ಮಾತ್ರ. ಆದರೆ, ನೋಕಿಯಾ ಮೊಬೈಲ್ ಹೊರತಾಗಿ ಅನೇಕ ಕೈಗಾರಿಕೆಗಳಲ್ಲಿ ತನ್ನ ಕಾರ್ಯವನ್ನು ವಿಸ್ತರಿಸಿರುವುದು ಬಹಳಷ್ಟು ಜನಕ್ಕೆ ಗೊತ್ತೆ ಇಲ್ಲ. ಇದಷ್ಟೇ ಅಲ್ಲದೇ ಅನೇಕ ವೈಶಿಷ್ಟ್ಯಗಳನ್ನು ನೋಕಿಯಾ ಹೊಂದಿದೆ.

1865ರಲ್ಲಿಯೇ ಹುಟ್ಟಿದ ಕಂಪನಿ

1865ರಲ್ಲಿಯೇ ಹುಟ್ಟಿದ ಕಂಪನಿ

ನೋಕಿಯಾ ಕಂಪನಿ 1865ರಲ್ಲಿ ದಕ್ಷಿಣ ಫಿನ್‌ಲ್ಯಾಂಡ್‌ನಲ್ಲಿ ಪೇಪರ್ ಉತ್ಪನ್ನ ಕಂಪನಿಯಾಗಿ ಆರಂಭವಾಯಿತು. ಗಣಿಗಾರಿಕೆ ಇಂಜಿನಯರ್ ಫ್ರೇಡರಿಕ್ ಈಡೇಸ್ಟ್ಯಾಮ್ ಪ್ರಾರಂಭಿಸಿದನು. 1868ರಲ್ಲಿ ನೋಕಿಯಾ ನಗರದ ಸಮೀಪ ಮತ್ತೊಂದು ಮಿಲ್‌ನ್ನು ಈಡೇಸ್ಟ್ಯಾಮ್ ಪ್ರಾರಂಭಿಸುತ್ತಾನೆ. 1871ರಲ್ಲಿ ಈಡೇಸ್ಟ್ಯಾಮ್ ತನ್ನ ಸ್ನೇಹಿತ ಲಿಯೋ ಮಸ್ಲೀನ್‌ ಜತೆ ಈ ಮಿಲ್‌ನ್ನು ಸಹಭಾಗಿತ್ವ ಕಂಪನಿಯನ್ನಾಗಿ ಪರಿವರ್ತನೆ ಮಾಡುತ್ತಾನೆ. ನಂತರ ಈ ಸಂಸ್ಥೆಗೆ ನೋಕಿಯಾ ಕಂಪನಿ ಎಂದು ಹೆಸರಿಡಲಾಗುತ್ತದೆ.

ನದಿ ಹೆಸರು ಕಂಪನಿಗೆ

ನದಿ ಹೆಸರು ಕಂಪನಿಗೆ

ನೋಕಿಯಾ ಕಂಪನಿಯ ಹೆಸರಿನ ಹಿಂದೆಯೂ ಒಂದು ಕಥೆ ಇದೆ. ನೋಕಿಯಾನ್‌ವಿರ್ಟಾ ಎಂಬ ನದಿ ದಂಡೆಯ ಮೇಲೆ ಕಂಪನಿ ಪ್ರಾರಂಭವಾಗಿದ್ದರಿಂದ ನೋಕಿಯಾ ಎಂಬ ಹೆಸರನ್ನು ಸಂಸ್ಥೆಗೆ ಇಟ್ಟಿದ್ದಾರಂತೆ. ನೋಕಿಯಾನ್‌ವಿರ್ಟಾ ಎಂಬ ಪದ ಪುರಾತನ್ ಫಿನ್ನಿಸ್ ಪದವಾಗಿದೆ. ಇದರ ಮೂಲ ಅರ್ಥ ಸೇಬಲ್ (ಸಾಬೂನು).

ದೊಡ್ಡ ಕಾರ್ಯವ್ಯಾಪ್ತಿ

ದೊಡ್ಡ ಕಾರ್ಯವ್ಯಾಪ್ತಿ

ನೋಕಿಯಾ ಕಂಪನಿ 1960ರಲ್ಲಿ ಎಲೆಕ್ರಾನಿಕ್ಸ್‌ ಉದ್ಯಮಕ್ಕೆ ಬರುವ ಮುಂಚೆ ರಬ್ಬರ್, ಎಲೆಕ್ಟ್ರಿಸಿಟಿ ಮತ್ತು ಕೇಬಲ್ ಉದ್ಯಮಗಳಲ್ಲಿ ಪ್ರಭಲವಾಗಿತ್ತು. ನೋಕಿಯಾದ ರಬ್ಬರ್ ಬೂಟ್‌ಗಳು ಕ್ಲಾಸಿಕ್ ಬೋನಾ ಫೈಡ್‌ ವಿನ್ಯಾಸ ಹೊಂದಿದ್ದು, ಇಂದಿಗೂ ಸಹ ಮಾರಾಟವಾಗುತ್ತಿವೆ.

ನೋಕಿಯಾ ಟ್ಯೂನ್

ನೋಕಿಯಾ ಟ್ಯೂನ್

ನೋಕಿಯಾ ಟ್ಯೂನ್ ಯಾರಿಗ್ ತಾನೇ ಗೊತ್ತಿಲ್ಲ ಹೇಳಿ, ಕೇಳದವರೂ ಸಹ ಇಲ್ಲ ಎನ್ನಬಹುದು. ಈ ನೋಕಿಯಾ ಟ್ಯೂನ್ ಮೂಲತಃ ಗ್ರಾನ್‌ ವಾಲ್ಸ್‌ ಟ್ಯೂನ್ ಹೊಂದಿದೆ. ಇದನ್ನು 19ನೇ ಶತಮಾನದಲ್ಲಿ ಸ್ಪಾನಿಷ್ ಸಂಗೀತಕಾರ ಫ್ರಾನ್ಸಿಸ್ಕೊ ಟರ್ರೆಗಾ ಗೀಟಾರ್ ಮೂಲಕ ಸೃಷ್ಟಿಸಿದ್ದರು. ಈ ಟ್ಯೂನ್ ಹೆಸರನ್ನು ಜನ ನೆನಪಲ್ಲಿಟ್ಟುಕೊಳ್ಳುವುದಕ್ಕೆ ಕಷ್ಟವಾಗುತ್ತದೆ ಎಂದು ಅರಿತ ನೋಕಿಯಾ 1998ರಲ್ಲಿ ಈ ಟ್ಯೂನ್‌ಗೆ ನೋಕಿಯಾ ಟ್ಯೂನ್ ಎಂದು ಹೆಸರಿಟ್ಟಿತು.

ನೋಕಿಯಾ ಮತ್ತು 4

ನೋಕಿಯಾ ಮತ್ತು 4

ನೋಕಿಯಾ ಮತ್ತು 4ರ ಮಧ್ಯೆ ರೋಚಕ ಕಥೆ ಇದೆ. ನೋಕಿಯಾ ಏಷ್ಯಾದಲ್ಲಿ ಬಿಡುಗಡೆ ಮಾಡಿದ ಯಾವ ಫೋನ್‌ ಮಾಡೆಲ್ ಸಂಖ್ಯೆಗಳಲ್ಲಿ 4ನ್ನು ಅಳವಡಿಸಿಲ್ಲ ಎಂಬುದು ಯಾರಿಗಾದರೂ ಗೊತ್ತೆ? ಏಷ್ಯಾದ ರಾಷ್ಟ್ರಗಳಲ್ಲಿ ಈ ಸಂಖ್ಯೆ ನತದೃಷ್ಟ್ ಎಂದು ಗುರುತಿಸಿಕೊಂಡಿರುವುದು ಇದಕ್ಕೆ ಕಾರಣ ಅಂತೆ.

ಪ್ರಶಂಸನೀಯ ಕಂಪನಿ

ಪ್ರಶಂಸನೀಯ ಕಂಪನಿ

ನೋಕಿಯಾ ಕಂಪನಿ 2006ರ ಫಾರ್ಚೂನ್ ಲಿಸ್ಟ್‌ನಲ್ಲಿ ವಿಶ್ವದ ಅತಿ ಪ್ರಶಂಸನೀಯ ಕಂಪನಿಗಳಲ್ಲಿ 20ನೇ ಸ್ಥಾನವನ್ನು ಪಡೆದಿತ್ತು. ನೆಟ್‌ವರ್ಕ್‌ ಕಮ್ಯುನಿಕೇಷನ್‌ನಲ್ಲಿ ಮೊದಲ ಸ್ಥಾನ, ಹಾಗೂ ಯುನೈಟೆಡ್ ಸ್ಟೇಟ್ ಅಲ್ಲದ ಕಂಪನಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿತ್ತು.

ಕ್ಯಾಮೆರಾ ಗುಣಮಟ್ಟ

ಕ್ಯಾಮೆರಾ ಗುಣಮಟ್ಟ

ನೋಕಿಯಾ ಸ್ಮಾರ್ಟ್‌ಫೋನ್‌ಗಳು ಗುಣಮಟ್ಟದ ಕ್ಯಾಮೆರಾ ಹೊಂದಿರುವುದರಿಂದ ಮೊಬೈಲ್ ಲೋಕದಲ್ಲಿ ತನ್ನದೇ ಆದ ಗೌರವವನ್ನು ಕಾಪಾಡಿಕೊಂಡಿವೆ. ಇನ್ನೊಂದು ಬಹಳ ಆಸಕ್ತಿದಾಯಕ ಅಂಶವೇನೆಂದರೆ ಪ್ರಸ್ತುತ ವಿಶ್ವದ ಅತಿ ದೊಡ್ಡ ಡಿಜಿಟಲ್ ಕ್ಯಾಮೆರಾ ಉತ್ಪಾದಕರು ನೋಕಿಯಾ ಎಂಬುದನ್ನು ನಂಬಲೇಬೇಕು. ನೋಕಿಯಾ ಕಂಪನಿಯ ಕ್ಯಾಮೆರಾ ಒಳಗೊಂಡಿರುವ ಫೋನ್‌ಗಳು ಸಾಂಪ್ರದಾಯಿಕ ಕ್ಯಾಮೆರಾ ಉತ್ಪಾದಕರನ್ನು ಮೀರಿಸಿದೆ.

ಮೊದಲ ವಾಣಿಜ್ಯ ಜಿಎಸ್‌ಎಮ್ ಕರೆ

ಮೊದಲ ವಾಣಿಜ್ಯ ಜಿಎಸ್‌ಎಮ್ ಕರೆ

1991ರಲ್ಲಿ ವಿಶ್ವದ ಮೊದಲ ಕಮರ್ಷಿಯಲ್ ಜಿಎಸ್‌ಎಮ್ ಕರೆ ಮಾಡಲಾಯಿತು. ಈ ಕರೆಯನ್ನು ನೋಕಿಯಾದ ಸರಬರಾಜು ನೆಟ್‌ವರ್ಕ್ ಹೆಲ್ಸಿಂಕಿಯಿಂದ ಫಿನ್‌ಲ್ಯಾಂಡ್‌ ಪ್ರಧಾನ ಮಂತ್ರಿ ಹ್ಯಾರಿ ಹೋಳ್ಕೆರಿ ನೋಕಿಯಾ ಫೋನ್ ಬಳಸಿ ಮಾಡಿದರು.

ಮೋರ್ಸ್‌ ಕೋಡ್‌

ಮೋರ್ಸ್‌ ಕೋಡ್‌

ನೋಕಿಯಾ ಫೋನ್‌ನಲ್ಲಿ ವಿಶೇಷ ಟೋನ್‌ಗಳಿರುತ್ತವೆ ಎಂಬುದನ್ನು ಜನ ನಂಬಿದ್ದರು. ಎಸ್‌ಎಂಎಸ್‌ ಟೋನ್‌ ಎಸ್‌ಎಂಎಸ್‌ನ ಮೋರ್ಸ್‌ ಕೋಡ್ ಹೊಂದಿತ್ತು. ಅದೇ ರೀತಿ ಅಸೆಂಡಿಂಗ್ ಟೋನ್ ನೋಕಿಯಾದ ಟ್ಯಾಗ್‌ಲೈನ್ ಕನೆಕ್ಟಿಂಗ್ ಪೀಪಲ್ ಎಂಬುದರ ಮೋರ್ಸ್‌ ಕೋಡ್ ಆಗಿದೆ.

ಸ್ಯಾಟಲೈಟ್‌ ಕರೆ

ಸ್ಯಾಟಲೈಟ್‌ ಕರೆ

ವಿಶ್ವದ ಮೊದಲ ಸ್ಯಾಟಲೈಟ್‌ ಕರೆಯನ್ನು 1994ರಲ್ಲಿ ನೋಕಿಯಾ ಜಿಎಸ್‌ಎಮ್‌ ಹ್ಯಾಂಡ್‌ಸೆಟ್‌ನಿಂದ ಮಾಡಲಾಯಿತು.

ಲುಮೀಯಾ ಸ್ಮಾರ್ಟ್‌ಫೋನ್‌

ಲುಮೀಯಾ ಸ್ಮಾರ್ಟ್‌ಫೋನ್‌

ನೋಕಿಯಾ ಕಂಪನಿ 2013ರ ಎರಡನೇ ತ್ರೈಮಾಸಿಕದಲದಲ್ಲಿ 7.4 ಮಿಲಿಯನ್ ನೋಕಿಯಾ ಲೂಮೀಯಾ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿತ್ತು.

ಫೋನ್ ಮಾರಾಟದಲ್ಲಿ ದಾಖಲೆ

ಫೋನ್ ಮಾರಾಟದಲ್ಲಿ ದಾಖಲೆ

ನೋಕಿಯಾದ ನೋಕಿಯಾ 1100 (2003) ಹ್ಯಾಂಡ್‌ಸೆಟ್ 25 ಕೋಟಿ ಮಾರಾಟವನ್ನು ಕಂಡಿದ್ದು, ಇಂದಿಗೂ ದಾಖಲೆಯಾಗಿಯೇ ಉಳಿದಿದೆ.

ಮೊದಲ ಫೋನ್

ಮೊದಲ ಫೋನ್

1982ರಲ್ಲಿ ನೋಕಿಯಾ ಮೊಬೈಲ್ ಸೆನೆಟರ್ ಎಂಬ ಮೊದಲ ಫೋನ್ ಬಿಡುಗಡೆ ಮಾಡಿತ್ತು. ಅದರ ತೂಕ ಸುಮಾರು 10 ಕೆಜಿ ಇತ್ತು ಎಂದರೆ ನಂಬಲೇಬೇಕು.

Most Read Articles
Best Mobiles in India

English summary
Facts about mobile phones: Have you ever used Nokia 1100, be proud. In Britain more than 100,000 mobile phones are dropped down in the toilet. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more