ನಿಮ್ಮ ದಿನವನ್ನು ಸುಂದರಗೊಳಿಸಲು ಸಹಾಯಕ ಈ 10 ಅಪ್ಲಿಕೇಶನ್‌ಗಳು

By Shwetha
|

ನೀವು ಬೆಳಗ್ಗೆದ್ದು ಕಣ್ಣು ಬಿಟ್ಟು ನೋಡುವುದೇ ನಿಮ್ಮ ಸ್ಮಾರ್ಟ್‌ಫೋನ್ ಅನ್ನು. ಹೌದು ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್ ನಮಗೆ ಅತ್ಯವಶ್ಯಕವಾಗಿದೆ. ಇದರಿಂದ ನೀವು ಸಂಘಟಿತರಾಗಿ ಮತ್ತು ಚಟುವಟಿಕೆಯಿಂದ ಇರಬಹುದಾಗಿದೆ.

ಸ್ಮಾರ್ಟ್‌ಫೋನ್‌ನ ಕೆಲವೊಂದು ಅಪ್ಲಿಕೇಶನ್‌ಗಳು ನಿಮ್ಮನ್ನು ನಿತ್ಯವೂ ತಾಜಾ ಆಗಿ ಇರುವಂತೆ ಮಾಡುತ್ತದೆ. ಹಾಗಿದ್ದರೆ ನಿಮ್ಮನ್ನು ತಾಜಾಗೊಳಿಸುವ ಈ ಅಪ್ಲಿಕೇಶನ್‌ಗಳನ್ನು ನಿಮ್ಮದಾಗಿಸಿಕೊಳ್ಳುವ ಆಕಾಂಕ್ಷೆ ನಿಮ್ಮದೇ? ಹಾಗಿದ್ದರೆ ಇಲ್ಲಿ ನಾವು ನೀಡಿರುವ ಹತ್ತು ಅಪ್ಲಿಕೇಶನ್‌ಗಳು ನಿಮ್ಮ ದಿನವನ್ನು ತಾಜಾ ಮತ್ತು ಮಹತ್ವಪೂರ್ಣವಾಗಿಸುತ್ತದೆ.

#1

#1

ಅಲರಾಂ ಕ್ಲಿಕ್ ಪ್ಲಸ್

ನಿಮ್ಮ ಪ್ರತಿ ಮುಂಜಾನೆಯನ್ನು ಈ ಸೂಪರ್ ಅಲರಾಂ ಅಪ್ಲಿಕೇಶನ್‌ನೊಂದಿಗೆ ಪ್ರಾರಂಭಿಸಬಹುದು. ನಿಮಗೆ ಬೇಕಾದ ರಿಂಗ್‌ಟೋನ್‌ ಅನ್ನು ಇರಿಸಿ ಈ ಅಪ್ಲಿಕೇಶನ್‌ನಲ್ಲಿ ಅಲರಾಂ ಅನ್ನು ನಿಮಗೆ ಇರಿಸಬಹುದು.

#2

#2

ಕಾರ್ಡಿಯೋ ಟ್ರೈನರ್

ನಿಮ್ಮ ಆರೋಗ್ಯದ ಮೇಲೆ ಅದ್ಭುತ ಕಾಳಜಿಯನ್ನು ಇರಿಸುವಂತಹ ಅದ್ಭುತ ಅಪ್ಲಿಕೇಶನ್ ಇದಾಗಿದೆ.

#3

#3

ಗೂಗಲ್ ಮ್ಯೂಸಿಕ್

ಪ್ಲಾಟ್‌ಫಾರ್ಮ್‌ಗಳಾದ್ಯಂತ ನಿಮ್ಮ ಮೊಬೈಲ್ ಹಾಗೂ ಡೆಸ್ಕ್‌ಟಾಪ್ ಬ್ರೌಸರ್‌ನಿಂದ ನಿಮ್ಮ ಲೈಬ್ರರಿಯನ್ನು ಪ್ರವೇಶಿಸಲು ಗೂಗಲ್ ಮ್ಯೂಸಿಕ್ ಉತ್ತಮವಾಗಿದೆ. ಈ ಸೇವೆಯು ಉಚಿತವಾಗಿದ್ದು, ಡೌನ್‌ಲೋಡ್ ಮಾಡಲು ಗೂಗಲ್ ಉಚಿತ ಸಂಗೀತವನ್ನು ಒದಗಿಸುತ್ತದೆ.

#4

#4

ಹಾಪ್‌ಸ್ಟಾಪ್

ನೀವು ಹೊಸದಾಗಿ ಒಂದು ಸ್ಥಳಕ್ಕೆ ಹೋಗುತ್ತಿರುವಿರಿ ಎಂದಾದಲ್ಲಿ ಆ ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವಲ್ಲಿ ಈ ಅಪ್ಲಿಕೇಶನ್ ನಿಮಗೆ ಸಹಾಯ ಮಾಡುತ್ತದೆ.

#5

#5

ಡ್ರಾಪ್‌ಬಾಕ್ಸ್

ನೀವು ಇದರಲ್ಲಿ ಡಾಕ್ಯುಮೆಂಟ್‌ಗಳು, ಫೋಟೋಗಳು, ವೀಡಿಯೋಗಳನ್ನು ಸಂಗ್ರಹಿಸಿಡಬಹುದು. ಇದು ನಿಮ್ಮೆಲ್ಲಾ ಫೈಲ್‌ಗಳನ್ನು ಸುರಕ್ಷಿತವಾಗಿ ತೆಗೆದಿರಿಸುತ್ತದೆ.

#6

#6

ಯೆಲ್ಪ್

ಉತ್ತಮ ಪ್ರಯಾಣ ನೈಸ್ ರೆಸ್ಟೋರೆಂಟ್‌ನ ಅನ್ವೇಷಣೆಯಲ್ಲಿದ್ದೀರಾ ಹಾಗಿದ್ದರೆ ಯೆಲ್ಪ್ ನಿಮಗೆ ಉತ್ತಮ ಸಂಗಾತಿಯಾಗುತ್ತದೆ.

#7

#7

ಟ್ವೀಟ್‌ಡೆಕ್

ನಿಮ್ಮ ಸಾಮಾಜಿಕ ತಾಣಗಳಾದ ಟ್ವಿಟ್ಟರ್, ಫೇಸ್‌ಬುಕ್ ಮತ್ತು ಫೋರ್‌ಸ್ಕೇರ್ ಅನ್ನು ಪ್ರವೇಶಿಸಲು ಇದೊಂದು ಒಳ್ಳೆಯ ಅಪ್ಲಿಕೇಶನ್ ಆಗಿದೆ.

#8

#8

ಪಲ್ಸ್ ನ್ಯೂಸ್

ನಿಮ್ಮ ಮೆಚ್ಚಿನ ಸುದ್ದಿ ಮಾಧ್ಯಮಗಳು, ಬ್ಲಾಗ್‌ಗಳು ಹಾಗೂ ಸುದ್ದಿ ತಾಣಗಳನ್ನು ಪ್ರವೇಶಿಸಲು ಪಲ್ಸ್ ನ್ಯೂಸ್ ಒಳ್ಳೆಯ ಅಪ್ಲಿಕೇಶನ್ ಆಗಿದೆ.

#9

#9

ಎವರ್‌ನೋಟ್

ಮೀಟಿಂಗ್‌ನಲ್ಲಿ ಸೂಚನೆಗಳನ್ನು ಬರೆದುಕೊಳ್ಳಲು, ಮನೆ ಸಾಮಾನುಗಳ ಪಟ್ಟಿಯನ್ನು ಸಿದ್ಧಪಡಿಸಲು ಅಥವಾ ಏನಾದರೂ ಉತ್ಪನ್ನಗಳ ಪಟ್ಟಿಯನ್ನು ತಯಾರಿಸಲು ಎವರ್‌ನೋಟ್ ಒಂದು ಒಳ್ಳೆಯ ಅಪ್ಲಿಕೇಶನ್ ಆಗಿದೆ.

#10

#10

ನೆಟ್‌ಫ್ಲಿಕ್ಸ್

ಈ ಅಪ್ಲಿಕೇಶನ್ ಮೂಲಕ ನೀವು ಅರ್ಧಕ್ಕೆ ನಿಲ್ಲಿಸಿದ ಚಲನಚಿತ್ರ ಅಥವಾ ಶೋಗಳನ್ನು ನೋಡಬಹುದು. ಆದರೆ ಇದಕ್ಕೆ ನೀವು ಪಾವತಿ ಮಾಡಿರುವ ನೆಟ್‌ಫ್ಲಿಕ್ಸ್ ಚಂದಾದಾರಿಕೆಯ ಅಗತ್ಯವಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X