Home
ಮೊಬೈಲ್

ವಿಶ್ವದ ಟಾಪ್ 10 ದುಬಾರಿ ಮೊಬೈಲ್‌ಗಳು ಇವು!!

By Bhaskar N J

ಒಂದು ಸ್ಮಾರ್ಟ್‌ಫೋನ್ ಖರೀದಿಸುವ ಸಲುವಾಗಿ ಹತ್ತು ಸಾವಿರ ರೂಪಾಯಿಗಳನ್ನು ಖರ್ಚು ಮಾಡಲು ನಾವು ಹಿಂದೆ ಮುಂದೆ ನೋಡುತ್ತೇವೆ. ಆದರೆ, ಈ ಜಗತ್ತಿನಲ್ಲಿ ಎಂತೆಂತಹ ಜನರು, ಎಂತೆಂತಹ ಸ್ಮಾರ್ಟ್‌ಫೋನ್‌ಗಳನ್ನು, ಹೇಗೆಲ್ಲಾ ಖರೀದಿಸುತ್ತಾರೆ ಎಂದು ಗೊತ್ತಾದರೆ ಈ ಮೊಬೈಲ್ ಜಗತ್ತು ಎಂಬುದು ಇಷ್ಟು ವಿಚಿತ್ರವೇ ಎನಿಸುವುದರಲ್ಲಿ ಅನುಮಾನವೇ ಇಲ್ಲ.!?

ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್ ಬಳಕೆಯು ಅಗತ್ಯಕ್ಕೆ ಮಾತ್ರವೇ ಮೀಸಲಾಗಿರದೇ ವೈಭವದ ವಿಷಯವಾಗಿದೆ. ಕೆಲವು ಜನರಿಗೆ ಸ್ಮಾರ್ಟ್‌ಫೋನ್ ವ್ಯಾಮೋಹ ಎಷ್ಟಿದೆಯೆಂದರೆ ತಮ್ಮ ಅಂಗಾಂಗಳನ್ನು ಮಾರಿ ಕೂಡ ಐಫೋನ್‌ನಂತಹ ದುಬಾರಿ ಫೋನ್‌ಗಳನ್ನು ಖರೀದಿಸಿದವರಿದ್ದಾರೆ ಎನ್ನುವುದು ಸಾಮಾನ್ಯರಿಗೂ ಸಹ ಈಗೇನು ಆಶ್ಚರ್ಯಸೂಚಕವಾಗಿಯೂ ಇಲ್ಲ.!

ವಿಶ್ವದ ಟಾಪ್ 10 ದುಬಾರಿ ಮೊಬೈಲ್‌ಗಳು ಇವು!!

ಹಾಗೆಯೇ, ಐಶಾರಾಮಿ ಎಂಬ ಪದಕ್ಕೂ ಮಿತಿಯಿಲ್ಲ ಎನ್ನುವಂತಾಗಿದೆ. ಮೊಬೈಲ್ ಬಿಡಿಬಾಗಗಳನ್ನೇ ವಜ್ರ, ಚಿನ್ನ, ಪ್ಲಾಟಿನಮ್ ಸ್ಪರ್ಶಗಳನ್ನು ನೀಡಿ ಅತಿ ದುಬಾರಿ ಫೋನ್‌ಗಳನ್ನು ಕೆಲ ವಿನ್ಯಾಸಕಾರರು ತಯಾರಿಸಿದ್ದಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ವಿಶ್ವದ ಟಾಪ್ 10 ದುಬಾರಿ ಬೆಲೆಯ ಮೊಬೈಲ್ ಪೋನ್‌ಗಳು ಯಾವುವು ಎಂಬ ಕುತೋಹಲ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

10) ವರ್ಚ್ಯು ಸಿಗ್ನೇಚರ್ ಡೈಮೆಂಡ್($88,300)

10) ವರ್ಚ್ಯು ಸಿಗ್ನೇಚರ್ ಡೈಮೆಂಡ್($88,300)

ವರ್ಚ್ಯು ಬಿಡುಗಡೆ ಮಾಡಿರುವ ದುಬಾರಿ ಫೋನ್ ಇದಾಗಿದೆ. ವಿಶ್ವದ ಟಾಪ್ 10 ಮೊಬೈಲ್ ಫೋನ್‌ಗಳ ಪಟ್ಟಿಯಲ್ಲಿ ಈ ಫೋನ್ ಕೂಡ ಸೇರಿದೆ. ಪ್ಲಾಟಿನಮ್‌ನಿಂದ ತಯಾರಿಸಲಾದ ಈ ಫೋನ್ ಬರಿಯ ಕೈಗಳಿಂದಲೇ ನಿರ್ಮಿಸಲ್ಪಟ್ಟಿದೆ. ಈ ಸ್ಮಾರ್ಟ್‌ಫೋನಿನ ಬೆಲೆ ಭಾರತೀಯ ರೂಪಾಯಿಗಳ ಲೆಕ್ಕದಲ್ಲಿ 60 ಲಕ್ಞ ರೂಪಾಯಿಗಳಾಗುತ್ತವೆ.

9) ಐಫೋನ್ ಪ್ರಿನ್ಸಸ್ ಪ್ಲಸ್ ($176,400)

9) ಐಫೋನ್ ಪ್ರಿನ್ಸಸ್ ಪ್ಲಸ್ ($176,400)

ಐಫೋನ್ ಪ್ರಿನ್ಸಸ್ ಪ್ಲಸ್ ವಿಶ್ವದಲ್ಲೇ ಅತಿ ದುಬಾರಿ ಫೋನ್‌ಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಳ್ಳುವಂತೆ ಮಾಡಿದೆ. ಪೀಟರ್ ಅಲೊಯ್‌ಸನ್ ಎಂಬ ಖ್ಯಾತ ವಿನ್ಯಾಸಕಾರಈ ಐಫೋನ್ ಅನ್ನು ಸಿದ್ಧಪಡಿಸಿದ್ದು, 138 ಪ್ರಿನ್ಸಸ್ ಕಟ್ ಮತ್ತು 180 ಬ್ರಿಲಿಯಂಟ್ ಕಟ್ ಡೈಮೆಂಡ್ಸ್ ಹೊಂದಿರುವ ಈ ಮೊಬೈಲ್ ಬೆಲೆ 1.17 ಕೋಟಿ ರೂಪಾಯಿಗಳು.

8) ಸ್ಯಾವೆಲ್ಲಿ ಸ್ಮಾರ್ಟ್‌ಫೋನ್ ($ 2,50,000)

8) ಸ್ಯಾವೆಲ್ಲಿ ಸ್ಮಾರ್ಟ್‌ಫೋನ್ ($ 2,50,000)

ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಮಾರುಕಟ್ಟೆಗೆ ಬಂದ ಸ್ಯಾವೆಲ್ಲಿ ಸ್ಮಾರ್ಟ್‌ಫೋನ್ 11 ವಿವಿಧ ಮಾದರಿಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿತ್ತು. 18k ಚಿನ್ನದ ತುಣುಕುಗಳೊಂದಿಗೆ ತಯಾರಾಗಿದ್ದ ಈ ಸ್ಮಾರ್ಟ್‌ಪೋನ್ ಬೆಲೆ ಬಾರತೀಯ ರೂಪಾಯಿಗಳ ಲೆಕ್ಕದಲ್ಲಿ 1.6 ಕೋಟಿ ರೂಪಾಯಿಗಳು.

7) ಬ್ಲ್ಯಾಕ್ ಡೈಮೆಂಡ್ ವಿಐಪಿಎನ್ ಸ್ಮಾರ್ಟ್‌ಫೋನ್ ($300,000)

7) ಬ್ಲ್ಯಾಕ್ ಡೈಮೆಂಡ್ ವಿಐಪಿಎನ್ ಸ್ಮಾರ್ಟ್‌ಫೋನ್ ($300,000)

ವಿಶ್ವದ ಶ್ರೀಮಂತ ಫೋನ್‌ಗಳ ಪಟ್ಟಿಯಲ್ಲಿ ಸೋನಿ ಎರಿಕ್‌ಸನ್‌ನ ಬ್ಲ್ಯಾಕ್ ಡೈಮಂಡ್ ಕೂಡ ಸ್ಥಾನ ಪಡೆದುಕೊಂಡಿದೆ. ನ್ಯಾವಿಗೇಶನ್ ಬಟನ್ ಹೊಂದಿರುವ ಈ ಪೋನ್ ಅನ್ನು ಎರಡು ವಜ್ರಗಳನ್ನು ಬಳಸಿ ಇದನ್ನು ಅಲಂಕರಿಸಲಾಗಿದೆ. ಈ ಸ್ಮಾರ್ಟ್‌ಫೋನಿನ ಬೆಲೆ 2 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ.

6) ವರ್ಚ್ಯು ಸಿಗ್ನೇಚರ್ ಕೋಬ್ರಾ ($310,000)

6) ವರ್ಚ್ಯು ಸಿಗ್ನೇಚರ್ ಕೋಬ್ರಾ ($310,000)

ವಿಶ್ವದ ದುಬಾರಿ ಫೋನ್‌ಗಳ ಪಟ್ಟಿಯಲ್ಲಿ ವರ್ಚ್ಯು ಸಿಗ್ನೇಚರ್ ಕೋಬ್ರಾ ಪಡೆದುಕೊಂಡಿದೆ. ಫ್ರೆಂಚ್ ಜ್ಯುವೆಲ್ಲರ್ ಬೌಶೆರನ್ ಈ ಫೋನ್ ಅನ್ನು ಸಿದ್ಧಪಡಿಸಿದ್ದು, ಪಿಯರ್ ಕಟ್ ಡೈಮಂಡ್ ಅನ್ನು ಇದರಲ್ಲಿ ಬಳಸಲಾಗಿದೆ. ಈ ಸ್ಮಾರ್ಟ್‌ಫೋನಿನ ಬೆಲೆ 2 ಕೋಟಿ ರೂಪಾಯಿ ದಾಟುತ್ತದೆ.

5) ಗ್ರೇಸೊ ಲಕ್ಸರ್ ಲಾಸ್ ವೇಗಸ್ ಜಾಕ್‌ಪ್ಯಾಟ್ ($ 1 million)

5) ಗ್ರೇಸೊ ಲಕ್ಸರ್ ಲಾಸ್ ವೇಗಸ್ ಜಾಕ್‌ಪ್ಯಾಟ್ ($ 1 million)

ಗ್ರೆಸೊ ಹೆಸರಿನ ಫೋನ್ ಅನ್ನು ಕರೆಯುವುದು ಗ್ರೇಸೊ ಲಕ್ಸರ್ ಲಾಸ್ ವೇಗಸ್ ಜಾಕ್‌ಪ್ಯಾಟ್ ಎಂಬ ಹೆಸರಿನಿಂದಾಗಿದೆ. 2005 ರಲ್ಲಿ ಈ ಫೋನ್ ಅನ್ನು ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಸ್ಥಾಪಿಸಲಾಯಿತು. 180 ಗ್ರಾಮ್‌ಗಳ ಚಿನ್ನದಿಂದ ಈ ಫೋನ್ ಅನ್ನು ತಯಾರಾಗಿದ್ದು, ಈ ಸ್ಮಾರ್ಟ್‌ಫೋನಿನ ಬೆಲೆ 6.63 ಕೋಟಿ ರೂಪಾಯಿಗಳಾಗಿವೆ.

4) ಡೈಮೆಂಡ್ ಕ್ರಿಪ್ಟೊ ಸ್ಮಾರ್ಟ್‌ಫೋನ್ ($ 1.3 million)

4) ಡೈಮೆಂಡ್ ಕ್ರಿಪ್ಟೊ ಸ್ಮಾರ್ಟ್‌ಫೋನ್ ($ 1.3 million)

ವಿಂಡೋಸ್ ಸಿಇ ಆಧಾರಿತ ಈ ಸ್ಮಾರ್ಟ್ ಫೋನ್ ಪೀಟರ್ ಅಲಿಸನ್‌ನಿಂದ ವಿನ್ಯಾಸಗೊಳಿಸಲಾಗಿದೆ. 50 ವಜ್ರದ ಹರಳುಗಳನ್ನು ಈ ಫೋನ್‌ನಲ್ಲಿ ಬಳಸಲಾಗಿದೆ.ಭಾರತೀಯ ರೂಪಾಯಿಗಳ ಲೆಕ್ಕದಲ್ಲಿ ಈ ಪೋನಿನ ಬೆಲೆ 8.64 ಕೋಟಿಯಷ್ಟಾಗುತ್ತದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೆ.?

3) ಗೋಲ್ಡ್ ವಿಶ್ ಲಿ ಮಿಲಿಯನ್ ($ 1.3 million)

3) ಗೋಲ್ಡ್ ವಿಶ್ ಲಿ ಮಿಲಿಯನ್ ($ 1.3 million)

ಇಮ್ಯಾನುವಲ್ ಗುಯೆಟ್ ಎಂಬ ವಿನ್ಯಾಸಕಾರ ಈ ಸ್ಮಾರ್ಟ್‌ಫೋನ್ ಅನ್ನು ವಿನ್ಯಾಸಪಡಿಸಿದ್ದು, ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ನಿರ್ಮಾಣವಾದ ಈ ಪೋನ್ ವಿಶ್ವದ ಗಿನ್ನೇಸ್ ವರ್ಲ್ಡ್ ದಾಖಲೆಯನ್ನು ಪಡೆದುಕೊಂಡಿತ್ತು. ಈ ಸ್ಮಾರ್ಟ್‌ಪೋನಿನ ಬೆಲೆ ಕೂಡ 8.64 ಕೋಟಿ ರೂಪಾಯಿಗಳಿಗಿಂತ ಹೆಚ್ಚಿತ್ತು.

2) ಐಫೋನ್ 3 ಜಿ ಕಿಂಗ್ಸ್ ಬಟನ್ ($ 1.5 million)

2) ಐಫೋನ್ 3 ಜಿ ಕಿಂಗ್ಸ್ ಬಟನ್ ($ 1.5 million)

ವಿಶ್ವದ ಎರಡನೇ ದುಬಾರಿ ಫೋನ್ ಆಗಿ ಖ್ಯಾತಿವೆತ್ತಿರುವ ಐಫೋನ್ 3 ಜಿ ಕಿಂಗ್ಸ್ ಬಟನ್ ಸ್ಮಾರ್ಟ್‌ಫೋನ್ 6.6 ಕ್ಯಾರೆಟ್ ಗುಣಮಟ್ಟದ 138 ವಜ್ರಗಳಿಂದ ನಿರ್ಮಿತವಾಗಿದೆ. 138 ವಜ್ರಗಳಿಮದ ರೂಪಿತವಾಗಿರುವ ಈ ಸ್ಮಾರ್ಟ್‌ಫೋನಿನ ಬೆಲೆ 10 ಕೋಟಿ ರೂಪಾಯಿಗಳಾಗುತ್ತದೆ.

1) ಫಾಲ್ಕನ್ ಸೂಪರ್ನೋವಾ ಪಿಂಕ್ ಡೈಮಂಡ್ ಐಫೋನ್ 6($95.5 million)

1) ಫಾಲ್ಕನ್ ಸೂಪರ್ನೋವಾ ಪಿಂಕ್ ಡೈಮಂಡ್ ಐಫೋನ್ 6($95.5 million)

ಪ್ರಪಂಚದಲ್ಲಿಯೇ ದುಬಾರಿ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಯನ್ನು ಫಾಲ್ಕನ್ ಸೂಪರ್ನೋವಾ ಪಿಂಕ್ ಡೈಮಂಡ್ ಐಫೋನ್ 6 ಹೊಂದಿದೆ. ಗುಲಾಬಿ ಮತ್ತು ನೀಲಿ ಬಣ್ಣದಲ್ಲಿ ಬಿಡುಗಡೆಯಾಗಿದ್ದ ಈ ಸ್ಮಾರ್ಟ್‌ಫೋನ್ 18 ಕ್ಯಾರೆಟ್ ವಜ್ರದಲ್ಲಿ ರೂಪಿತವಾಗಿತ್ತು. ಈ ಸ್ಮಾರ್ಟ್‌ಫೋನಿನ ಬೆಲೆ 635 ಕೋಟಿ ರೂಪಾಯಿಗಳಾಗಿತ್ತು.

Best Mobiles in India

English summary
Below is the list of top 10 most expensive mobile phones in the world:to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+