ವಿಶ್ವದ ಟಾಪ್‌ 10 ಸ್ಮಾರ್ಟ್‌ಫೋನ್‌ ಆಪ್‌ಗಳು

By Ashwath
|

ಸ್ಮಾರ್ಟ್‌ಫೋನ್‌ ಬಂದ ಮೇಲೆ ಆಪ್‌ ತಯಾರಿಸುವ ಮಂದಿಗೆ ಸುಗ್ಗಿಯೋ ಸುಗ್ಗಿ. ಕಂಪೆನಿಗಳು ವಿವಿಧ ರೀತಿಯ ಸೌಲಭ್ಯಗಳಿರುವ ಆಪ್‌ಗಳನ್ನು ತಯಾರಿಸುತ್ತಲೇ ಇರುತ್ತಾರೆ. ಈ ಆಪ್‌ಗಳಲ್ಲಿ ಎಲ್ಲಾ ಆಪ್‌ಗಳನ್ನು ಡೌನ್‌ಲೋಡ್‌ ಮಾಡಬೇಕಿಲ್ಲ.ಆದರೆ ಕೆಲವು ಆಪ್‌ಗಳು ಹಾಗಲ್ಲ. ವಿಶ್ವದ ಬಹಳಷ್ಟು ಜನ ಡೌನ್‌ಲೋಡ್‌ ಮಾಡಿರುತ್ತಾರೆ. ಜೊತೆಗೆ ಈ ಆಪ್‌ ಮೂಲಕ ಸಂವಹನ ಸಾಧಿಸುತ್ತಿರುತ್ತಾರೆ.

ಈಗ ಯಾಕೆ ಈ ಸುದ್ದಿ ಅಂದರೆ, ಇಂಗ್ಲೆಂಡ್‌‌ನಲ್ಲಿರುವ ಗ್ಲೋಬಲ್‌ ವೆಬ್‌ ಇಂಡೆಕ್ಸ್‌ ಎನ್ನುವ ವೆಬ್‌ಸೈಟ್‌ ವಿಶ್ವದಲ್ಲಿರುವ 969.49 ದಶಲಕ್ಷ ಸ್ಮಾರ್ಟ್‌ಫೋನ್‌ ಬಳಕೆದಾರರು ಡೌನ್‌ಲೋಡ್‌ ಮಾಡಿಕೊಂಡಿರುವ ಆಪ್‌ಗಳನ್ನು ಆಧಾರಿಸಿ, ವಿಶ್ವದ ಟಾಪ್‌ 17 ಆಪ್‌ಗಳ ಪಟ್ಟಿಯನ್ನು ತಯಾರಿಸಿದೆ.

ಹೀಗಾಗಿ ಇಲ್ಲಿ ಈ ವೆಬ್‌ಸೈಟ್‌ ಪಟ್ಟಿ ಮಾಡಿರುವ ಟಾಪ್‌ 10 ಆಪ್‌ಗಳು ಮಾಹಿತಿ ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

Click Here For New Smartphones Gallery

ರ್‍ಯಾಂಕ್‌.1 ಗೂಗಲ್‌ ಮ್ಯಾಪ್‌

ರ್‍ಯಾಂಕ್‌.1 ಗೂಗಲ್‌ ಮ್ಯಾಪ್‌

ವಿಶ್ವದ ಶೇ.54 ರಷ್ಟು ಜನ ಈ ಆಪ್‌ನ್ನು ಸ್ಮಾರ್ಟ್‌ಫೋನ್‌ಲ್ಲಿ ಬಳಸುತ್ತಿದ್ದಾರೆ.

ರ್‍ಯಾಂಕ್‌.2 ಫೇಸ್‌‌ಬುಕ್‌ ಮೊಬೈಲ್‌ ಆಪ್‌

ರ್‍ಯಾಂಕ್‌.2 ಫೇಸ್‌‌ಬುಕ್‌ ಮೊಬೈಲ್‌ ಆಪ್‌


ವಿಶ್ವದ ಶೇ.44 ರಷ್ಟು ಬಳಕೆದಾರರು ಫೇಸ್‌ಬುಕ್‌ ಮೊಬೈಲ್‌ ಆಪ್‌ನ್ನು ಬಳಸುತ್ತಿದ್ದಾರೆ.

ರ್‍ಯಾಂಕ್‌.3 ಯೂ ಟ್ಯೂಬ್‌ ಆಪ್‌

ರ್‍ಯಾಂಕ್‌.3 ಯೂ ಟ್ಯೂಬ್‌ ಆಪ್‌


ಮೂರನೇ ಅತೀ ಹೆಚ್ಚು ಜನ ಡೌನ್‌ಲೋಡು ಮಾಡಿಕೊಂಡಿರುವ ಆಪ್‌. ಯೂ ಟ್ಯೂಬ್‌ ಆಪ್‌ನ್ನು ವಿಶ್ವದ ಶೇ.35 ರಷ್ಟು ಜನ ಬಳಸುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ರ್‍ಯಾಂಕ್‌.4 ಗೂಗಲ್‌ ಪ್ಲಸ್‌

ರ್‍ಯಾಂಕ್‌.4 ಗೂಗಲ್‌ ಪ್ಲಸ್‌

ನಾಲ್ಕನೇಯ ರ್‍ಯಾಂಕ್‌ ಗೂಗಲ್‌ ಪ್ಲಸ್‌ ಪಾಲಾಗಿದೆ. ವಿಶ್ವದ ಶೇ.30ರಷ್ಟು ಬಳಕೆದಾರರು ಈ ಆಪ್‌ ಬಳಸುತ್ತಿದ್ದಾರೆ.

ರ್‍ಯಾಂಕ್‌.5 ವಿ ಚಾಟ್‌

ರ್‍ಯಾಂಕ್‌.5 ವಿ ಚಾಟ್‌


ಚೀನಾ ಮೂಲದ ವಿಚಾಟ್‌ನ್ನು ವಿಶ್ವದ ಶೇ.27ರಷ್ಟು ಸ್ಮಾರ್ಟ್‌‌ಫೋನ್‌ ಬಳಕೆದಾರರು ಬಳಸುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

 ರ್‍ಯಾಂಕ್‌.6 ಟ್ವೀಟರ್‌

ರ್‍ಯಾಂಕ್‌.6 ಟ್ವೀಟರ್‌


ವಿಶ್ವದ ಶೇ.22 ರಷ್ಟು ಬಳಕೆದಾರರು ಟ್ವೀಟರ್‌ ಆಪ್‌‌ನ್ನು ಸ್ಮಾರ್ಟ್‌ಫೋನ್‌ನಲ್ಲಿ ಬಳಸುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

 ರ್‍ಯಾಂಕ್‌.7 ಸ್ಕೈಪ್‌

ರ್‍ಯಾಂಕ್‌.7 ಸ್ಕೈಪ್‌


ಸ್ಕೈಪ್‌ ಆಪ್‌ನ್ನು ವಿಶ್ವದ ಶೇ.22 ರಷ್ಟು ಸ್ಮಾರ್ಟ್‌ಫೋನ್‌ ಬಳಕೆದಾರರು ಬಳಸುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ರ್‍ಯಾಂಕ್‌.8 ಫೇಸ್‌ಬುಕ್‌ ಮೆಸೇಂಜರ್‌ ಆಪ್‌

ರ್‍ಯಾಂಕ್‌.8 ಫೇಸ್‌ಬುಕ್‌ ಮೆಸೇಂಜರ್‌ ಆಪ್‌


ಫೇಸ್‌ಬುಕ್‌ ಮೆಸೇಂಜರ್‌ ಆಪ್‌ ಟಾಪ್‌ 8ರಲ್ಲಿ ಸ್ಥಾನ ಪಡೆದಿದ್ದು, ವಿಶ್ವದ ಶೇ.22 ರಷ್ಟು ಮಂದಿ ಈ ಆಪ್‌ ಬಳಸುತ್ತಿದ್ದಾರೆ.

ರ್‍ಯಾಂಕ್‌.9 ವಾಟ್ಸ್‌ಆಪ್‌

ರ್‍ಯಾಂಕ್‌.9 ವಾಟ್ಸ್‌ಆಪ್‌


ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸ್‌ ಆಪ್‌ ಜನರು ಬಳಸುತ್ತಿದ್ದು, ಶೇ.17 ರಷ್ಟು ಸ್ಮಾರ್ಟ್‌ಫೋನ್‌ ಬಳಕೆದಾರರು ಈ ಆಪ್‌ನ್ನು ಬಳಸುತ್ತಿದ್ದಾರೆ.

ರ್‍ಯಾಂಕ್‌. 10 ಇನ್ಸ್‌ಟಾಗ್ರಾಮ್

ರ್‍ಯಾಂಕ್‌. 10 ಇನ್ಸ್‌ಟಾಗ್ರಾಮ್


ಫೇಸ್‌ಬುಕ್‌ ಮಾಲೀಕತ್ವದ ಇನ್ಸ್‌ಟಾಗ್ರಾಮ್‌ ಹತ್ತನೇ ಸ್ಥಾನಗಳಿಸಿದ್ದು, ವಿಶ್ವದ ಶೇ.11ರಷ್ಟು ಸ್ಮಾರ್ಟ್‌ಫೋನ್‌ ಬಳಕೆದಾರರು ಈ ಫೋಟೋ ಶೇರಿಂಗ್‌ ಆಪ್‌ನ್ನು ಬಳಸುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ಅತೀ ಹೆಚ್ಚು ಜನ ಬಳಸುವ ಸ್ಮಾರ್ಟ್‌ಫೋನ್‌ ಆಪ್‌ಗಳು

ಅತೀ ಹೆಚ್ಚು ಜನ ಬಳಸುವ ಸ್ಮಾರ್ಟ್‌ಫೋನ್‌ ಆಪ್‌ಗಳು


ಗ್ಲೋಬಲ್‌ ವೆಬ್‌ ಇಂಡೆಕ್ಸ್‌ ವರದಿ

ಅತೀ ಹೆಚ್ಚು ಜನ ಬಳಸುವ ಸ್ಮಾರ್ಟ್‌ಫೋನ್‌ ಆಪ್‌ಗಳು

ಅತೀ ಹೆಚ್ಚು ಜನ ಬಳಸುವ ಸ್ಮಾರ್ಟ್‌ಫೋನ್‌ ಆಪ್‌ಗಳು


ಗ್ಲೋಬಲ್‌ ವೆಬ್‌ ಇಂಡೆಕ್ಸ್‌ ವರದಿ

Click Here For List of New Smartphones And Tablets Price & Specs

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X