ಐಎಸ್ಓ ಗಿಂತಲೂ ಆಂಡ್ರಾಯ್ಡ್ ಬೆಸ್ಟ್ ಯಾಕೆ ಗೊತ್ತಾ..?
ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರು ತಮ್ಮ ಆಪರೇಟಿಂಗ್ ಸಿಸ್ಟಮ್ ಗಳೇ ಸರಿ ಎನ್ನುವ ವಾದವನ್ನು ಮುಂದಿಡುತ್ತಾರೆ ಈ ಹಿನ್ನಲೆಯಲ್ಲಿ ಆಂಡ್ರಾಯ್ಡ್ ಬಳಕೆದಾರರ ವಾದನ್ನು ನಿಮಗೆ ತಿಳಿಸುವ ಪ್ರಯತ್ನ ಇದಾಗಿದೆ.
ಇಂದಿನ ದಿನದಲ್ಲಿ ಆಂಡ್ರಾಯ್ಡ್ ಹಾಗೂ ಐಓಎಸ್ ಎರಡು ಸಹ ಪ್ರಮುಖ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿದ್ದು, ಎರಡು ಸಹ ವಿಭಿನ್ನ ಮಾದರಿಯಲ್ಲಿ ಕಾರ್ಯಚರಣೆಯನ್ನು ನಡೆಸಲಿದೆ.

ಇದೇ ಹಿನ್ನಲೆಯಲ್ಲಿ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರು ತಮ್ಮ ಆಪರೇಟಿಂಗ್ ಸಿಸ್ಟಮ್ ಗಳೇ ಸರಿ ಎನ್ನುವ ವಾದವನ್ನು ಮುಂದಿಡುತ್ತಾರೆ ಈ ಹಿನ್ನಲೆಯಲ್ಲಿ ಆಂಡ್ರಾಯ್ಡ್ ಬಳಕೆದಾರರ ವಾದನ್ನು ನಿಮಗೆ ತಿಳಿಸುವ ಪ್ರಯತ್ನ ಇದಾಗಿದೆ.

ಆಂಡ್ರಾಯ್ಡ್ ಆಯ್ಕೆ ಜಾಸ್ತಿ:
ಆಂಡ್ರಾಯ್ಡ್ ಬಳಕೆದಾರರಿಗೆ ಸ್ಮಾರ್ಟ್ ಫೋನ್ ಆಯ್ಕೆಯಲ್ಲಿ ಹೆಚ್ಚಿನ ಸ್ವಾತಂತ್ರ್ಯವು ದೊರೆಯಲಿದೆ. ಸ್ಯಾಮ್ ಸಂಗ್, HTC, ಸೋನಿ, ಮೊಟೊರೊಲಾ ಸೇರಿದಂತೆ ಹಲವು ಕಂಪನಿಗಳು ಆಂಡ್ರಾಯ್ಡ್ ಗಾಗಿಯೇ ಫೋನ್ ಬಿಡುಗಡೆ ಮಾಡುತ್ತವೆ. ಇದಲ್ಲದೇ ಡ್ಯುಯಲ್ ಸಿಮ್ ಮತ್ತು ಉತ್ತಮ ಕ್ಯಾಮೆರಾಗಳನ್ನು ಕಾಣಬಹುದಾಗಿದೆ.

ಬೆಲೆಯೂ ಕಡಿಮೆ:
ನಿಮ್ಮ ಬಜೆಟ್ ಗೆ ಸರಿಯಾದಂತೆ ಬೇರೆ -ಬೇರೆ ವಿನ್ಯಾಸದಲ್ಲಿ ಸ್ಮಾರ್ಟ್ ಫೋನ್ ಗಳನ್ನು ಪಡೆದುಕೊಳ್ಳಬಹುದಾಗಿದೆ. ಬಜೆಟ್ ನಿಂದ ಹಿಡಿದು ಟಾಪ್ ಎಂಡ್ ವರೆಗೂ ಸ್ಮಾರ್ಟ್ ಪೋನ್ ಗಳು ದೊರೆಯಲಿದೆ.

ಕಸ್ಟಮೆಜ್ ಮಾಡಿಕೊಳ್ಳಬಹುದು:
ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ಡಿಸೈನ್ ಮಾಡಿಕೊಳ್ಳಬಹುದಾಗಿದೆ. ಕೀಬೋರ್ಡ್ ನಿಂದ ಹಿಡಿದು ಇಡೀ ಓಎಸ್ ಅನ್ನೆ ಬದಲಾಯಿಸಿಕೊಳ್ಳುವ ಅವಕಾಶವನ್ನು ಮಾಡಿಕೊಳ್ಳಲಾಗಿದೆ.

ಹಾರ್ಡ್ ವೇರ್:
ಇದೇ ಮಾದರಿಯಲ್ಲಿ ಆಂಡ್ರಾಯ್ಡ್ ಬಳಕೆದಾರರು ತಮ್ಮ ಬಜೆಟ್ ಅನ್ವಯ RAM, ಬ್ಯಾಟರಿ, ಪ್ರೋಸೆಸರ್ ಗಳನ್ನು ಇರುವ ಸ್ಮಾರ್ಟ್ ಫೋನ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಹೆಚ್ಚಿನ ಆಪ್ ಗಳು:
ಇದೇ ಮಾದರಿಯಲ್ಲಿ ಆಂಡ್ರಾಯ್ಡ್ ಪ್ಲೇ ಸ್ಟೋರಿನಲ್ಲಿ ಹೆಚ್ಚಿನ ಆಪ್ ಗಳು ದೊರೆಯಲಿದೆ. ಬಳಕೆದಾರಿಗೆ ಬೇಕಾದ ಮಾದರಿಯ ಆಪ್ ಗಳು ಲಭ್ಯವಿದ್ದು, ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲಿದ್ದಾರೆ.

ವೇಡ್ಜಸ್:
ಆಂಡ್ರಾಯ್ಡ್ ಬಳಕೆದಾರರು ಹೆಚ್ಚಿನ ವೇಡ್ಜಸ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಹೋಮ್ ಸ್ಕ್ರಿನ್ ನಲ್ಲೇ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವ ಅವಕಾಶವನ್ನು ಪಡೆದುಕೊಳ್ಳುತ್ತಿದ್ದಾರೆ.

ಮಲ್ಟಿ ಟಾಸ್ಕಿಂಗ್ :
ಮಲ್ಟಿ ಟಾಸ್ಕಿಂಗ್ ಗಳನ್ನು ಮಾಡುವುದರಲ್ಲಿ ಆಂಡ್ರಾಯ್ಡ್ ನಂ.1. ಒಂದೇ ವೇಳೆಯಲ್ಲಿ ಮೂರಕ್ಕೂ ಹೆಚ್ಚಿನ ಟಾಸ್ಕ್ ಗಳನ್ನು ಮಾಡ ಬಹುದಾಗಿದೆ. ಇದು ಬೇರೆ ಓಎಸ್ ಗಳಲ್ಲಿ ಸಾಧ್ಯವಿಲ್ಲ.

ಲಾಂಚರ್ ಗಳು:
ಆಂಡ್ರಾಯ್ಡ್ ನಲ್ಲಿ ಹಲವರು ಲಾಂಚ್ ಗಳು ಲಭ್ಯವಿದ್ದು, UI ಬದಲಾವಣೆ ಮಾಡಿಕೊಳ್ಳುವ ಅವಕಾಶವನ್ನು ಹೊಂದಿದ್ದಾರೆ. ಗೂಗಲ್ ಪ್ಲೇ ಸ್ಟೋರಿನಲ್ಲಿ ಹಲವಾರು ಲಾಂಚರ್ ಗಳು ಲಭ್ಯವಿದೆ.

ಕಾಸ್ಟಮ್ ROM:
ಇದೇ ಮಾದರಿಯಲ್ಲಿ ಆಂಡ್ರಾಯ್ಡ್ ಬಳಕೆದಾರರು ತಮಗೆ ಬೇಕಾದ ROMಗಳನ್ನು ಇಂಟರ್ನೆಟ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಮೊಬೈಲ್ ಗಳನ್ನು ರೂಟ್ ಮಾಡಿಕೊಳ್ಳಬಹುದಾಗಿದೆ.

ಗೂಗಲ್ ನೌ:
ಗೂಗಲ್ ನೌ ವಾಯ್ಸ್ ಆಸಿಸ್ಟೆಂಟ್ ಬಳಕೆ ಮಾಡಿಕೊಳ್ಳುವುದರೊಂದಿಗೆ ಬೇರೆ ಬೇರೆ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಇದು ಆಂಡ್ರಾಯ್ಡ್ ಬಳಕೆದಾರಿಗೆ ಇದು ದೊಡ್ಡ ಶಕ್ತಿಯಾಗಿದೆ.


Click it and Unblock the Notifications








