ದುಬಾರಿ ಫೋನ್ ಬಳಕೆದಾರರಿಗೆ ಅಪಾಯ ಕಟ್ಟಿಟ್ಟಬುತ್ತಿ ನಿಜವೇ?
ಇಂದಿನ ಯುಗದಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವವರ ಸಂಖ್ಯೆ ಅಪರಿಮಿತವಾಗಿ ಬೆಳೆಯುತ್ತಿದೆ. ಅದರಲ್ಲೂ ಹೆಚ್ಚು ಗುಣಮಟ್ಟದ ಫೋನ್‌ಗೆ ಬಳಕೆದಾರರು ಹೆಚ್ಚುವರಿ ಗಮನ ನೀಡುತ್ತಿದ್ದಾರೆ. ಕ್ಯಾಮೆರಾ ಸೂಪರ್ ಆಗಿರಬೇಕು, ಹೆಚ್ಚು ವೇಗದಲ್ಲಿ ಫೋನ್ ಕಾರ್ಯನಿರ್ವಹಿಸಬೇಕು, ಸೌಂಡ್ ಸಿಸ್ಟಮ್ ಅದ್ಭುತವಾಗಿರಬೇಕು ಹೀಗೆಲ್ಲಾ ಕನಸುಗಳು ಹಲವಿರುತ್ತದೆ. ಆದರೆ ಇಷ್ಟೆಲ್ಲಾ ಅಂಶಗಳಿದ್ದರೂ ಅವುಗಳನ್ನು ಜೋಪಾನವಾಗಿ ನೋಡಿಕೊಳ್ಳುವ ಕೆಲಸ ಮಾತ್ರ ತಲೆನೋವಿನದ್ದು ಎಂದರೆ ನೀವು ನಂಬುತ್ತೀರಾ?
ಓದಿರಿ: ಕಂಪ್ಯೂಟರ್ ಸ್ಲೋ ಆಗಿದೆಯೇ? ಚಿಂತೆ ಬೇಡ ಪರಿಹಾರ ಇಲ್ಲಿದೆ
ಇನ್ನು ಸಾಧಾರಣ ಫೋನ್ ಅನ್ನು ಹೊಂದಿರುವವರು ಅಲ್ಪತೃಪ್ತಿಯುಳ್ಳವರು. ತಮ್ಮ ಬಳಿ ಏನಿದೆಯೋ ಅದರಲ್ಲೇ ಹೆಚ್ಚಿನ ಸಂತೋಷವನ್ನು ಇವರು ಅನುಭವಿಸುತ್ತಾರೆ. ದುಬಾರಿ ಫೋನ್ ಖರೀದಿಸಿದರೆ ಸಾಲದು ಅದು ಉಂಟುಮಾಡುವ ತಲೆನೋವನ್ನೂ ಅನುಭವಿಸಬೇಕು ಎಂಬುದು ಇವರ ಅಂಬೋಣ. ಹಾಗಿದ್ದರೆ ಆ ತಲೆನೋವೇನು ಎಂಬುದನ್ನು ನೀವು ಅರಿತುಕೊಳ್ಳಬೇಕೇ. ನೀವು ಸಾಧಾರಣ ಫೋನ್ ಅನ್ನು ಹೊಂದಿದ್ದಲ್ಲಿ ಈ ಅಂಶಗಳನ್ನು ನೀವು ಓದಿದಿರಿ ಅಂತಿಟ್ಟುಕೊಳ್ಳಿ ನಿಜಕ್ಕೂ ನೀವು ಸಂತೋಷವಾಗಿರುತ್ತೀರಿ ಹೇಗೆ ಎಂಬುದನ್ನು ಅರಿತುಕೊಳ್ಳಲು ಕೆಳಗಿನ ಸ್ಲೈಡರ್ ಕ್ಲಿಕ್ಕಿಸಿ.

ಭಯ ಇರುವುದಿಲ್ಲ
ಫೋನ್ ಅಕಸ್ಮಾತ್ತಾಗಿ ಕೆಳಗೆ ಬಿದ್ದು ಏನಾದರೂ ಹಾನಿ ಸಂಭವಿಸಬಹುದು ಎಂಬ ಭಯವಿರುವುದಿಲ್ಲ.

ಅಪ್ಲಿಕೇಶನ್‌ಗಳು
ಕಳ್ಳರ ಭಯದಿಂದ ನಿಮ್ಮ ಫೋನ್‌ನ ಮಾಹಿತಿಯನ್ನು ರಕ್ಷಿಸುವುದಕ್ಕಾಗಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಅಗತ್ಯವಿರುವುದಿಲ್ಲ.

ಆನ್‌ಲೈನ್ ಅಗತ್ಯವಿಲ್ಲ
ದಿನದ 24 ಗಂಟೆ ಆನ್‌ಲೈನ್‌ನಲ್ಲಿ ಇರಲೇಬೇಕು ಎಂಬ ನಿಯಮವಿರುವುದಿಲ್ಲ.

ಹೆಚ್ಚಿನ ಸಂಪರ್ಕಗಳ ತಲೆನೋವಿಲ್ಲ
ನಿಮ್ಮಲ್ಲಿ ಇರುವುದು ಸಾಧಾರಣ ಫೋನ್ ಎಂದಾದಲ್ಲಿ ನೀವು ಹೆಚ್ಚು ಸಮಾಧಾನವುಳ್ಳವರು. ಹೆಚ್ಚಿನ ಸಂಪರ್ಕಗಳನ್ನು ನಿಮ್ಮ ಫೋನ್‌ನಲ್ಲಿ ನೀವು ಹೊಂದಿಲ್ಲ ಎಂದು ನಿಮ್ಮನ್ನು ಯಾರೂ ತಲೆತಿನ್ನಲಾರರು.

ಕರೆಮಾಡಲು ಸಂದೇಶ ಕಳುಹಿಸಲು
ನಿಮ್ಮ ಫೋನ್‌ನ ಅಗತ್ಯ ಕರೆಮಾಡಲು ಮತ್ತು ಸಂದೇಶ ಕಳುಹಿಸಲು ಎಂಬ ಸತ್ಯ ನಿಮ್ಮನ್ನು ಖುಷಿಯಾಗಿರಿಸುತ್ತದೆ.

ತರಾತುರಿ ಇರುವುದಿಲ್ಲ
ಯಾವುದಾದರೂ ಇಮೇಲ್ ಬಂದಿದೆಯೇ, ಸಂದೇಶ ಬಂದಿದೆಯೇ ಎಂಬುದನ್ನು ನೋಡಲು ತರಾತುರಿಯಾಗಿ ನೀವು ಫೋನ್ ಅನ್ನು ನೋಡಬೇಕಾಗಿರುವುದಿಲ್ಲ. ಸಾವಧಾನವಾಗಿ ನಿಮ್ಮ ಫೋನ್‌ಗೆ ಗಮನ ಹರಿಸಬಹುದು.

ಸೆಲ್ಫಿ ಹಂಗಿಲ್ಲ
ನೀವು ಹೇಗೆ ಕಂಡರೂ ನನಗೆ ನಾನು ಸುಂದರ/ಸುಂದರಿ ಎಂಬ ಭಾವನೆ ನಿಮ್ಮ ಮನದಲ್ಲಿ ಮೂಡುತ್ತದೆ. ಅದಕ್ಕಾಗಿ ಆಗಾಗ್ಗೆ ಸೆಲ್ಫಿ ತೆಗೆಯಬೇಕೆಂಬ ಗೀಳು ಮನದಲ್ಲಿ ಮೂಡುವುದಿಲ್ಲ.

ದುಬಾರಿ ವಸ್ತು ಎಂಬ ಚಿಂತೆ ಇಲ್ಲ
ನೀವು ದುಬಾರಿ ಫೋನ್ ಅನ್ನು ಖರೀದಿಸಿದ್ದೀರಿ ಎಂದಾದಲ್ಲಿ ಅದರ ಬಗ್ಗೆ ಹೆಚ್ಚು ಚಿಂತಿತರಾಗಿರಬೇಕು. ಆದರೆ ಸಾಮಾನ್ಯ ಫೋನ್ ನಿಮ್ಮ ಬಳಿ ಇರುವುದು ಎಂದಾದಲ್ಲಿ ಸಹಜ ಜೀವನವನ್ನೇ ನೀವು ಅನುಭವಿಸಬಹುದು.

ಬೇರೆಯದರಲ್ಲಿ ಹಣ ತೊಡಗಿಸಬಹುದು
ನೀವು ಫೋನ್‌ಗೆ ದುಡ್ಡು ವ್ಯಯಿಸಿಲ್ಲ ಎಂದಾದಲ್ಲಿ ನಿಮ್ಮ ಮನಸ್ಸಿಗೆ ಖುಷಿ ನೀಡುವ ಇತರ ವಸ್ತುಗಳನ್ನು ನಿಮಗೆ ಖರೀದಿಸಬಹುದು.

ಕಳೆದುಕೊಳ್ಳುವ ಭಯ ಇರುವುದಿಲ್ಲ
ಫೋನ್ ಕಳೆದುಕೊಂಡಲ್ಲಿ ಎಂಬ ಭಯ ನಿಮ್ಮನ್ನು ಎಂದಿಗೂ ಕಾಡುವುದೇ ಇಲ್ಲ.


Click it and Unblock the Notifications








