ಆಪಲ್‌ ಎಲ್ಲಾ ಸಮಸ್ಯೆಗಳಿಗೆ ಈ ಹೊಸ ಐಫೋನ್ ಉತ್ತರವಾಗಬಲ್ಲದು!

|

ನಂಬರ್ ಗಳು ಸುಳ್ಳು ಹೇಳುವುದಿಲ್ಲ ಮತ್ತು ಕೆಲವೊಮ್ಮೆ ಸಂಖ್ಯೆಯ ಊಹೆಯೂ ಕೂಡ ಸರಿಯಾಗಿರುವುದಿಲ್ಲ. ಇತ್ತೀಚೆಗೆ ಆಪಲ್ ಗೆ ತನ್ನ ಹೊಸ ಐಫೋನ್ ನಿಂದಾಗಿ ತಾನು ಅಂದುಕೊಂಡ ಮಟ್ಟವನ್ನು ತಲುಪಲು ಸಾಧ್ಯವಾಗಿಲ್ಲ ಎಂದು ಮಾರ್ಕೆಟಿನ ಅಧ್ಯಯನಕಾರರು ತಿಳಿಸುತ್ತಾರೆ. ಆಪಲ್ ನ ನಂಬರ್ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಮತ್ತು ಚೈನಾ-ಯುಎಸ್ ಯುದ್ಧವೊಂದು ಮಾರುಕಟ್ಟೆಯಲ್ಲಿ ನಡೆಯುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಆಪಲ್‌ ಎಲ್ಲಾ ಸಮಸ್ಯೆಗಳಿಗೆ ಈ ಹೊಸ ಐಫೋನ್ ಉತ್ತರವಾಗಬಲ್ಲದು!

ಹಾಗಾಗಿ ಆಪಲ್ ಸಂಸ್ಥೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಶತಪ್ರಯತ್ನವನ್ನು ಮಾಡುತ್ತಿದೆ. ಐಫೋನ್ ಎಸ್ಇಯನ್ನು ತನ್ನ ವೆಬ್ ಸೈಟ್ ನಲ್ಲಿ ಚಾಲ್ತಿಗೊಳಿಸಿದ ಕೆಲವೇ ಘಂಟೆಗಳಲ್ಲಿ ಸಂಪೂರ್ಣ ಮಾರಾಟವಾಗಿದೆ.

ಮೊದಮೊದಲು ಎಷ್ಟೇ ಬೆಲೆ ಇದ್ದರೂ ಕೂಡ ಗ್ರಾಹಕರು ಐಫೋನ್ ಖರೀದಿಸಲು ಮುಂದಾಗುತ್ತಿದ್ದರು. ಆದರೆ ದಿನಗಳು ಉರುಳಿದಂತೆ ಐಫೋನ್ ಅಷ್ಟೇನು ಲಾಭದಾಯಕವಲ್ಲ ಎಂಬ ಭಾವನೆ ಗ್ರಾಹಕರನ್ನು ಕಾಡಿದೆ. ಹಾಗಾಗಿ ಅವರು ಬೇರೆ ಫೋನ್ ಗಳಿಗೆ ಮೊರೆ ಹೋಗಲು ಪ್ರಾರಂಭಿಸಿದರು. ಆದರೆ ಇದೀಗ ಐಫೋನ್ ಎಸ್ ಇ ತನ್ನ ಪವರ್ ಫುಲ್ ಆಗಿರುವ ವೈಶಿಷ್ಟ್ಯತೆಗಳು ಮತ್ತು ಉತ್ತಮವಾದ ಕಡಿಮೆ ಬೆಲೆಯ ಕಾರಣದಿಂದಾಗಿ ಪ್ರಸಿದ್ಧಿಯಾಗಿದೆ. ಅದು ಆಪಲ್ ಗೂ ಕೂಡ ಲಾಭವಾಗಿದೆ.

ಆಪಲ್ ನ ಹೆಚ್ಚಿನ ಸಮಸ್ಯೆಗಳಿಗೆ ಐಫೋನ್ ಎಸ್ ಇ ಪರಿಹಾರವಾಗಿದೆ. ನಾವಿಲ್ಲಿ 10 ಕಾರಣಗಳನ್ನು ನೀಡುತ್ತಿದ್ದೇವೆ.

ಘಂಟೆಗಳಲ್ಲಿ ಮಾರಾಟ:

ಘಂಟೆಗಳಲ್ಲಿ ಮಾರಾಟ:

ಈ ವಾರದ ಆರಂಭದಲ್ಲಿ ಐಫೋನ್ ಎಸ್ಇ ರಿಸೇಲ್ ಗೆ ಇಟ್ಟಾಗ ಕೆಲವೇ ಘಂಟೆಗಳಲಲಿ ಮಾರಾಟವಾಗಿದೆ. ಜನವರಿ 21 ರಂದು ಕೆಲವು ಘಂಟೆಗಳ ಅವಧಿಗೆ ಇದನ್ನು ಮಾರಾಟಕ್ಕೆ ಇಡಲಾಗಿತ್ತು. ಕೆಲವೇ ಘಂಟೆಗಳಲ್ಲಿ ಸೋಲ್ಡ್ ಔಟ್ ಬೋರ್ಡ್ ಹಾಕುವಂತಾಯಿತು.

ಮೊದಲ ಜನರೇಷನ್ನಿನ ಐಫೋನ್ ಎಸ್ಇ ಗ್ರೇಟ್ ಸಕ್ಸಸ್

ಮೊದಲ ಜನರೇಷನ್ನಿನ ಐಫೋನ್ ಎಸ್ಇ ಗ್ರೇಟ್ ಸಕ್ಸಸ್

ಎರಡು ವರ್ಷದ ನಂತರ ಐಫೋನ್ ಎಸ್ಇ ಮತ್ತೆ ಬಿಡುಗಡೆಗೊಂಡಾಗ ಪವರ್ ಫುಲ್ ಆಗಿರುವ ಪ್ರೊಸೆಸರ್ ಜೊತೆಗೆ ಕೆಲವು ಪ್ರಮುಖವಾದ ಬದಲಾವಣೆಯನ್ನು ಮಾಡಿ ಆಪಲ್ ಇದನ್ನು ಹೊರತಂದಿದೆ.

ಆಪಲ್ ನ ಮಹತ್ವಾಕಾಂಕ್ಷೆಯ ಮೌಲ್ಯ ಈಗಲೂ ಅಧಿಕವಿದೆ

ಆಪಲ್ ನ ಮಹತ್ವಾಕಾಂಕ್ಷೆಯ ಮೌಲ್ಯ ಈಗಲೂ ಅಧಿಕವಿದೆ

ಈಗಲೂ ಹೆಚ್ಚಿನ ಮಂದಿ ಆಪಲ್ ಐಫೋನ್ ನ್ನು ಪ್ರತಿಷ್ಟೆಯ ಪ್ರಶ್ನೆಯಾಗಿ ಕಾಣುತ್ತಾರೆ. ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಹಳೆಯ ಮಾಡೆಲ್ ಗಳೂ ಈಗಲೂ ಮಾರಾಟವಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಐಫೋನ್ ಎಸ್ ಇ ಮೂಲಕ ಈಗಲೂ ಜನ ಖರೀದಿಸುವಿಕೆಗೆ ಉತ್ಸುಕತೆ ತೋರಿಸುತ್ತಾರೆ.

ಕೆಲವು ದುಬಾರಿ ಆಂಡ್ರಾಯ್ಡ್ ಫೋನ್ ಗಳಿಗಿಂತ ಈ ಐಫೋನ್ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ.

ಐಫೋನ್ ಎಕ್ಸ್ ಆರ್ ಮೂಲಕ ಆಪಲ್ ಹೋಲಿಕೆಯಲ್ಲಿ ಕಡಿಮೆ ಬೆಲೆಯ ಅಂದರೆ ಆರಂಭಿಕ ಬೆಲೆ 76,900 ರುಪಾಯಿ ಬೆಲೆಯನ್ನು ಹೊಂದಿದೆ.ಐಫೋನ್ ಎಕ್ಸ್ಆರ್ ಅತೀ ಹೆಚ್ಚು ಮಾರಾಟ ಕಂಡ ವೇರಿಯಂಟ್ ಆಗಿದೆ.

ಐಫೋನ್ ಎಸ್ಇ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವ ಉತ್ಕೃಷ್ಟ ಫೋನ್ ಆಗಿದೆ.

ಐಫೋನ್ ಎಸ್ಇ ಮೂಲಕ ಆಪಲ್ ಹಲವು ಹೈ-ಎಂಡ್ ಫೀಚರ್ ಗಳನ್ನು ನೀಡುತ್ತದೆ ಮತ್ತು ಅದಕ್ಕಾಗಿ ಇತರೆ ಫೋನ್ ಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯಲ್ಲೇ ಲಭ್ಯವಾಗುತ್ತದೆ. ಉದಾಹರಣೆಗೆ ಐಫೋನ್ 6ಎಸ್ ಮತ್ತು ಐಫೋನ್ 6ಎಸ್ ಪ್ಲಸ್ ಗಿಂತ ಅತೀ ಹೆಚ್ಚು ಪವರ್ ಫುಲ್ ಆಗಿರುವ ಪ್ರೊಸೆಸರ್ ನ್ನು ಐಫೋನ್ ಎಸ್ಇ ಹೊಂದಿದೆ.

ಐಫೋನ್ ಎಸ್ಇ ವಿಶ್ವದ ಎರಡನೇ ಅತೀ ದೊಡ್ಡ ಮಾರುಕಟ್ಟೆ ಆಗಿರುವ ಭಾರತದಲ್ಲಿ ಆಪಲ್ ಸೇಲ್ ನ್ನು ಹೆಚ್ಚಿಸಬಹುದು.

ಭಾರತವು ಬೆಲೆಯ ವಿಚಾರದಲ್ಲಿ ಸೂಕ್ಷ್ಮವಾಗಿ ವರ್ತಿಸುವ ಮಾರುಕಟ್ಟೆ ಪ್ರದೇಶ. ಇಲ್ಲಿ ಬೆಲೆ ಭಾರೀ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹೊಸ ಐಫೋನ್ ಎಸ್ ಇ ದೇಶದಲ್ಲಿ ಹೊಸ ಸಂಚಲನ ಮಾಡುವ ನಿರೀಕ್ಷೆ ಇದೆ.

ಐಫೋನ್ ಎಕ್ಸ್ಆರ್ ಗಿಂತ ಬೆಲೆ ಇಳಿಕೆಯಲ್ಲಿ ಐಫೋನ್ ಎಸ್ಇ ಹೆಚ್ಚು ಸಮರ್ಥನೀಯವಾಗಿದೆ.

ಐಫೋನ್ ಎಕ್ಸ್ಆರ್ ಗಿಂತ ಬೆಲೆ ಇಳಿಕೆಯಲ್ಲಿ ಐಫೋನ್ ಎಸ್ಇ ಹೆಚ್ಚು ಸಮರ್ಥನೀಯವಾಗಿದೆ.

ಐಫೋನ್ ಎಕ್ಸ್ಆರ್ ನಲ್ಲಿ ಆಪಲ್ ಅತ್ಯಾಕರ್ಷಕ ಎಸ್ಇಡಿ ಹೊಂದಿದೆ. ಆದರೆ ಅದು ಎಲ್ ಸಿಡಿ ಡಿಸ್ಪ್ಲೇ. 76,900 ರುಪಾಯಿ ಜನರು ಅತ್ಯುತ್ತಮದಲ್ಲಿ ಅತ್ಯುತ್ತಮವನ್ನು ನಿರೀಕ್ಷಿಸುತ್ತಾರೆ. ಕಡಿಮೆ ಬೆಲೆಯ ಫೋನ್ ನಲ್ಲಿ ಅತೀ ಹೆಚ್ಚು ವೈಶಿಷ್ಟ್ಯತೆಗಳು ಯಾವುದರಲ್ಲಿ ಲಭ್ಯವಾಗುತ್ತದೆ ಎಂಬುದನ್ನು ಗಮನಿಸುತ್ತಾರೆ.

ಮೊದಲ ಬಾರಿಗೆ ಆಪಲ್ ಖರೀದಿದಾರರಿಗೆ ಅನುಕೂಲಕರವಾಗಿರುವ ಆಯ್ಕೆ

ರಿಯಾಯಿತಿ ಮಾಡಲು ಸಾಧ್ಯವಿಲ್ಲದ ಆಪಲ್ ಈಗಲೂ ಕೂಡ ಒಂದು ಪ್ರತಿಷ್ಟೆಯ ಬ್ರ್ಯಾಂಡ್ ಆಗಿ ಮಾರುಕಟ್ಟೆಯಲ್ಲಿದೆ. ಆದರೆ ಹೆಚ್ಚಿನ ಮಂದಿ ಇದರ ಅತ್ಯಧಿಕ ಬೆಲೆಯಿಂದಾಗಿ ಹಿಂದೇಟು ಹಾಕುತ್ತೆ. ಹೊಸ ಮಾಡೆಲ್ ಐಫೋನ್ ಎಸ್ಇ ಇದೀಗ ಮೊದಲ ಬಾರಿಗೆ ಅನುಕೂಲಕರವಾಗಿರುವ ಆಯ್ಕೆಯನ್ನು ನೀಡುತ್ತಿದೆ.

ಹೆಚ್ಚು ಪ್ರಸಿದ್ಧವಾಗಿರುವ ಆಂಡ್ರಾಯ್ಡ್ ಬ್ರ್ಯಾಂಡ್ ನ ಪ್ರೀಮಿಯಂ ಸೆಗ್ನೆಂಟ್ ಒನ್ ಪ್ಲಸ್ ಗೆ ಸ್ಪರ್ಧಾತ್ಮಕವಾಗಿದೆ.

ಒನ್ ಪ್ಲಸ್ ಪ್ರೀಮಿಯಂ ಸೆಗ್ಮೆಂಟ್ ನಲ್ಲೂ ಕೂಡ ತನ್ನ ಛಾಪು ಮೂಡಿಸಿರುವುದಕ್ಕೆ ಕಾರಣ ಅದರ ಬೆಲೆ. ಇದೀಗ ಆಪಲ್ ನ ಐಫೋನ್ ಎಸ್ಇ ಕೂಡ ಅದಕ್ಕೊಂದು ಪರ್ಯಾಯ ಉತ್ತರವಾಗಿ ಗ್ರಾಹಕರಿಗೆ ಕಾಣಿಸುತ್ತಿದೆ.

ಜನರು ಸಣ್ಣ ಸ್ಕ್ರೀನಿನ ಐಫೋನ್ ನ್ನು ಬಯಸುತ್ತಾರೆ

ಜನರು ಸಣ್ಣ ಸ್ಕ್ರೀನಿನ ಐಫೋನ್ ನ್ನು ಬಯಸುತ್ತಾರೆ

ಜನರು ಸಣ್ಣ ಸ್ಕ್ರೀನಿನ ಐಫೋನ್ ಬಳಸುತ್ತಾರೆ. ಈಗಲೂ ಕೂಡ ಸಣ್ಣ ಸ್ಕ್ರೀನಿನ ಫೋನ್ ಮಾರಾಟ ಮಾಡುತ್ತಿದೆ ಎಂದರೆ ಅದು ಆಪಲ್ ಬ್ರ್ಯಾಂಡ್ ಮಾತ್ರ. ಸಾಕ್ಷಿ: ಮಾರಾಟ ಆರಂಭವಾದ ನಾಲ್ಕೇ ಘಂಟೆಗಳಲ್ಲಿ ಸ್ಟಾಕ್ ಖಾಲಿ ಆಗಿದೆ.

Best Mobiles in India

Read more about:
English summary
10 reasons why this 'new' iPhone can be the answer to Apple's troubles

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X