ಶಿಯೋಮಿ ಸ್ಮಾರ್ಟ್ ಫೋನ್ ಖರೀದಿಸುವ ಮುನ್ನ ಈ 10 ವಿಚಾರ ತಿಳಿದಿರಲೇಬೇಕು...!
ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಕಳೆದ ಕೆಲವು ಸಮಯಗಳಿಂದ ಶಿಯೋಮಿ ಸಂಸ್ಥೆ ತನ್ನದೇ ಆದ ಛಾಪನ್ನು ಮೂಡಿಸಿ ಗಮನ ಸೆಳೆಯುತ್ತಿದೆ. ಯುರೋಪಿಯನ್ ಜನರಲ್ ಡಾಟಾ ಪ್ರೊಟೆಕ್ಷನ್ ರೆಗ್ಯುಲೇಷನ್(GDPR) ಹೇಳಿರುವಂತೆ ಶಿಯೋಮಿ ಭಾರತೀಯ ಬಳಕೆದಾರರಿಗಾಗಿ ತನ್ನ ಭದ್ರತಾ ನಿಯಮ ಅಥವಾ ಗೌಪ್ಯತಾ ನೀತಿಗಳನ್ನು ಬದಲಿಸಿಕೊಂಡಿದೆ. ಮತ್ತು ಹೊಸ ಭದ್ರತಾ ಪಾಲಿಗಳು ಮೇ 25 ರಿಂದ ಭಾರತದಾದ್ಯಂತ ಜಾರಿಗೆ ಬಂದಿದೆಯಂತೆ. ಹಾಗಾದ್ರೆ ನೀವು ಶಿಯೋಮಿ ಫೋನ್ ಖರೀದಿಸುವ ಮುನ್ನ ತಿಳಿದುಕೊಳ್ಳಲೇಬೇಕಾದ ಆ 10 ಗೌಪ್ಯತಾ ನೀತಿಗಳು ಯಾವುವು?


1. ಶಿಯೋಮಿ ನಿಮ್ಮ ಮೂಲಭೂತವಾದ ವಯಕ್ತಿಕ ಮಾಹಿತಿಗಳನ್ನು ಕಲೆ ಹಾಕುತ್ತೆ
ಗೌಪ್ಯತೆ ನೀತಿಯ ಅನುಸಾರ, ಶಿಯೋಮಿ ನಿಮ್ಮ ಮೂಲಭೂತ ವಯಕ್ತಿಯ ಮಾಹಿತಿಗಳಾದ ಹೆಸರು, ಹುಟ್ಟಿದ ದಿನಾಂಕ, ಲಿಂಗ ಇಂತಹ ಮಾಹಿತಿಗಳನ್ನು ಕಲೆ ಹಾಕುತ್ತೆ. ಶಿಯೋಮಿ ಹೇಳುವಂತೆ ಇದರಲ್ಲಿ ವಯಕ್ತಿಕ ಮಾಹಿತಿಗಳಿರಬಹುದು ಆದರೆ ಅದಕ್ಕೆ ಯಾವುದೇ ಮಿತಿ ಇಲ್ಲ. ಅವರ ಸರ್ವರ್ ಗೆ ನೀವು ನೀಡುವ ಎಲ್ಲಾ ಮಾಹಿತಿಗಳು ಅಪ್ ಲೋಡ್ ಆಗುತ್ತಂತೆ.

2. ನಿಮ್ಮ ಸಂಪರ್ಕ ಸಂಖ್ಯೆಯ ಮಾಹಿತಿಯನ್ನು ಕಲೆ ಹಾಕಲಾಗುತ್ತೆ
ಶಿಯೋಮಿ ಸರ್ವೀಸ್ ಮುಖಾಂತರ ನೀವು ಯಾವುದೇ ಮೊಬೈಲ್ ನಂಬರ್ ಬಳಸಿದರೂ ಅದು ಅದರ ನಂಬರ್ ಮತ್ತು ಇ-ಮೇಲ್ ಅಡ್ರೆಸ್ ಮತ್ತು ಎಲ್ಲಾ ರೀತಿಯ ಸಂಪರ್ಕಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಕಲೆ ಹಾಕುತ್ತೆ.

3. ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಮತ್ತು ಕ್ರೆಡಿಟ್ ಕಾರ್ಡ್ ಡೀಟೇಲ್ಸ್ ಸೇವ್ ಆಗಿರಲಿದೆ
ಗೌಪ್ಯತೆ ನೀತಿಯ ಸ್ಪಷ್ಟವಾಗಿ ಹೇಳುತ್ತಿರುವುದೇನೆಂದರೆ ಶಿಯೋಮಿಯು ನಿಮ್ಮ ಹಣಕಾಸು ವ್ಯವಹಾರದ ಮಾಹಿಗಳನ್ನುಒಳಗೊಂಡಿರುತ್ತೆ. Mi.com ನಲ್ಲಿ ಮತ್ತು ಶಿಯೋಮಿ ಫ್ಲಾಟ್ ಫಾರ್ಮ್ ನಲ್ಲಿ ಖರೀದಿಸಿದ ವಸ್ತುಗಳ ಮಾಹಿತಿಯನ್ನು ಹೊಂದಿರುತ್ತದೆ. ಅಂದರೆ ಬ್ಯಾಂಕ್ ಅಕೌಂಟ್ ಡೀಟೇಲ್ಸ್, ಅಕೌಂಟ್ ಹೋಲ್ಡರ್ ಹೆಸರು, ಕ್ರೆಡಿಟ್ ಕಾರ್ಡ್ ಮಾಹಿತಿ ಇತ್ಯಾದಿಗಳು ಅದರಲ್ಲಿ ಇರುತ್ತೆ.

4. ನಿಮ್ಮ ಕೆಲಸದ ಮಾಹಿತಿ ಮತ್ತು ನೀವೆಲ್ಲ ಕೆಲಸ ಮಾಡುತ್ತಿದ್ದೀರಿ ಎಂಬ ವಿಚಾರ
ಶಿಯೋಮಿ ನಿಮ್ಮ ಸಾಮಾಜಿಕ ಮಾಹಿತಿಗಳನ್ನು ಕಲೆ ಹಾಕಿರುತ್ತೆ. ಸಾಮಾಜಿಕ ಆಕ್ಟಿವಿಟಿಗಳಾದ ನಿಮ್ಮ ಸದ್ಯದ ಎಂಪ್ಲಾಯ್ ಯಾರು, ನಿಮ್ಮ ಜಾಬ್ ಟೈಟಲ್, ವಿದ್ಯಾಭ್ಯಾಸದ ಹಿನ್ನೆಲೆ, ಪ್ರೊಫೆಷನಲ್ ತರಬೇತಿ ವಿಚಾರಗಳು ಇತ್ಯಾದಿ.

5. ನಿಮ್ಮ ಮನೆ ವಿಳಾಸ ಸ್ಟೋರ್ ಆಗಿರುತ್ತೆ
ಶಿಯೋಮಿ ನಿಮ್ಮ ಮನೆಯ ವಿಳಾಸವನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳುತ್ತೆ. Mi.com ನಲ್ಲಿ ನೀವು ಪರ್ಸೇಚ್ ಮಾಡಿದ ವಸ್ತುಗಳು ಎಲ್ಲಿಗೆ ಡೆಲಿವರಿಯಾಗಬೇಕು ಎಂಬುದು ಅವರಿಗೆ ತಿಳಿಯುತ್ತೆ.

6. ಸರ್ಕಾರಿ ಐಡಿ ಕಾರ್ಡ್ ಗಳು ಉದಾ ಪಾಸ್ ಪೋರ್ಟ್, ಡ್ರೈವಿಂಗ್ ಲೈಸನ್ಸ್ ಇತ್ಯಾದಿಗಳು ಸೇವ್ ಆಗುತ್ತದೆ
ಕುತೂಹಲಕಾರಿಯಾಗಿರುವ ವಿಚಾರ ಏನೆಂದರೆ, ಶಿಯೋಮಿಯ ಗೌಪ್ಯತೆ ನೀತಿಯ ಅನುಸಾರ, ನಿಮ್ಮ ಸರ್ಕಾರಿ ಮಾಹಿತಿಗಳು ಅರ್ಥಾತ್ ಐಡಿಗಳು ಉದಾಹರಣೆಗೆ ಪಾಸ್ ಪೋರ್ಟ್, ಡ್ರೈವಿಂಗ್ ಲೈಸನ್ಸ್ ಮತ್ತು ಇತ್ಯಾದಿಗಳನ್ನು ನೀವು ಒದಗಿಸಿದಾಗ ಅವುಗಳನ್ನೂ ಕೂಡ ಸೇವ್ ಮಾಡಿ ಇಟ್ಟುಕೊಂಡಿರುತ್ತದೆಯಂತೆ.


7. ಫೋಟೋಗಳು ಮತ್ತು ಎಂಐ ಕ್ಲೌಡ್ ಗಳನ್ನು ಕಲೆ ಹಾಕುತ್ತೆ
ಶಿಯೋಮಿ ಬಳಕೆದಾರರಿಂದ ಎಂಐ ಕ್ಲೌಡ್ ಅಥವಾ ಇತರೆ ಆಪ್ ಗಳಾದ ಫೋಟೋಸ್, ಕಾಂಟ್ಯಾಕ್ಟ್ ಲಿಸ್ಟ್ ಮತ್ತು ಇತರೆ ಮಾಹಿತಿ ಸಂಬಂಧಿತ ಆಕ್ಟಿವಿಟಿಸ್ ಗಳನ್ನು ನೀವು ಶಿಯೋಮಿ ಪ್ಲಾಟ್ ಫಾರ್ಮ್ ನಲ್ಲಿ ನಡೆಸಿದ್ದರೆ ಅವುಗಳನ್ನು ಪಡೆಯುತ್ತೆ.

8. ಡಿವೈಸ್ ಮತ್ತು ಸಿಮ್ ಗೆ ಸಂಬಂಧಿಸಿದ ಮಾಹಿತಿಗಳನ್ನು ಸ್ಟೋರ್ ಮಾಡುತ್ತೆ
ಶಿಯೋಮಿ ಮಾಹಿತಿ ನೀಡಿರುವಂತೆ ಬಳಕೆದಾರನ ಡಿವೈಸ್ ಗೆ ಸಂಬಂಧಿಸಿದ ಮಾಹಿತಿ ಮತ್ತು ಸಿಮ್ ಕಾರ್ಡ್ ಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯುತ್ತೆ. IMEI ನಂಬರ್ , IMSI ನಂಬರ್, MAC ಅಡ್ರೆಸ್, ಸೀರಿಯಲ್ ನಂಬರ್, MIUI ವರ್ಷನ್ ಇತ್ಯಾದಿಗಳನ್ನು ಸ್ಟೋರ್ ಮಾಡುತ್ತೆ.

9. ನಿಮ್ಮ ಜಾಗದ ಮಾಹಿತಿಯನ್ನು ಆಕ್ಸಿಸ್ ಮಾಡಿರುತ್ತೆ.
ಕೆಲವು ಸರ್ವೀಸ್ ಗಳನ್ನು ನೀಡುವ ಉದ್ದೇಶದಿಂದಾಗಿ ಶಿಯೋಮಿ ನಿಮ್ಮ ಲೋಕೇಷನ್ ಮಾಹಿತಿಯನ್ನು ಇಟ್ಟುಕೊಂಡಿರುತ್ತೆ. ಕಂಟ್ರೀ ಕೋಡ್, ಸಿಟಿ ಕೋಡ್, ಮೊಬೈಲ್ ನೆಟ್ ವರ್ಕ್ ಕೋಡ್, ಮೊಬೈಲ್ ಕಂಟ್ರಿ ಕೋಡ್, ಸೆಲ್ ನ ಐಡೆಂಟಿಟಿ, ಸಮಯದ ಮಾಹಿತಿ ಇತ್ಯಾದಿಗಳನ್ನು ಪಡೆಯುತ್ತೆ. ಭಾಷೆಯ ಸೆಟ್ಟಿಂಗ್ ನ ಮಾಹಿತಿಯನ್ನು ಪಡೆಯಲಾಗಿರುತ್ತೆ.

10. ನೀವು ನಿಮ್ಮ ಮಾಹಿತಿ ಶೇರ್ ಆಗುವುದನ್ನು ಶಿಯೋಮಿಯಲ್ಲಿ ತಡೆಯಬಹುದು ಆದರೆ ಅಲ್ಲಿ catche ಇದ್ದೇ ಇರುತ್ತೆ
ಈ ಡಾಟಾ ನೀತಿಯನ್ನು ಪಾರದರ್ಶಕವಾಗಿಡಲು ಶಿಯೋಮಿ ತನ್ನ ಬಳಕೆದಾರರಿಗೆ ಈ ರೀತಿ ಮಾಹಿತಿ ಕಲೆ ಹಾಕುವುದನ್ನು ನಿಯಂತ್ರಿಸುವ ಅಥವಾ ತಡೆಯುವ ಆಯ್ಕೆಯನ್ನೂ ನೀಡಿದೆ. ಆದರೆ ಹೀಗೆ ಮಾಡುವುದರ ಪರಿಣಾಮ ವಾಗಿ ಇದು ಶಿಯೋಮಿಯ ಪ್ರೊಡಕ್ಟ್ ಮತ್ತು ಸರ್ವೀಸ್ ಗಳನ್ನು ಬಳಕೆದಾರ ಎಂಜಾಯ್ ಮಾಡಲು ಸಾಧ್ಯವಿಲ್ಲ.


Click it and Unblock the Notifications