Subscribe to Gizbot

ಫೋನ್ ಸುರಕ್ಷತೆಗಾಗಿ ಸೂಪರ್ ಟಾಪ್ 10 ಸಲಹೆಗಳು

Written By:

ನಿಮ್ಮ ಆಂಡ್ರಾಯ್ಡ್ ಫೋನ್ ಹಲವಾರು ಕಾರ್ಯಗಳನ್ನು ಮಾಡುವುದರಲ್ಲಿ ನಿಪುಣತೆಯನ್ನು ಪಡೆದುಕೊಂಡಿದೆ. ನಿಮ್ಮ ಗೆಳೆಯನಾಗಿ ಉತ್ತಮ ಕಾವಲುಗಾರನಾಗಿ ಇದು ಕಾರ್ಯನಿರ್ವಹಿಸುತ್ತದೆ. ಆದರೆ ನಮ್ಮಲ್ಲಿ ಹಲವಾರು ಜನರು ಫೋನ್ ಅನ್ನು ಜಾಗರೂಕತೆಯಿಂದ ಕಾಪಾಡುವುದಿಲ್ಲ, ನಮ್ಮ ಡೇಟಾಗೆ ನಾವು ಗಂಭೀರವಾದ ಹಾನಿಯನ್ನು ಉಂಟುಮಾಡುತ್ತೇವೆ. ಹಾಗಿದ್ದರೆ ನಿಮ್ಮ ಫೋನ್‌ನೊಂದಿಗೆ ನೀವು ಮಾಡಬಾರದ ತಪ್ಪುಗಳನ್ನು ನಾವಿಲ್ಲಿ ಪಟ್ಟಿ ಮಾಡುತ್ತಿದ್ದೇವೆ.

ನಿಮ್ಮ ಫೋನ್‌ಗೆ ಸೂಕ್ತ ರಕ್ಷಣೆಯನ್ನು ನೀವು ನೀಡದೇ ಹೋದರೆ ಅದು ತಪ್ಪು ಬಳಕೆದಾರರ ಕೈ ಸೇರಬಹುದು ಎಂಬುದು ನೆನಪಿರಲಿ. ಆದ್ದರಿಂದ ಫೋನ್ ಭದ್ರತೆಗಾಗಿ ಇರುವ ಸಲಹೆಗಳನ್ನು ಪಾಲಿಸಿಕೊಂಡು ಅವುಗಳ ಬಳಕೆಯನ್ನು ಮಾಡಿ ಫೋನ್ ಅನ್ನು ಸಂರಕ್ಷಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಕ್ರೀನ್ ಲಾಕ್ ಮಾಡಲು ಮರೆಯದಿರಿ

#1

ನಿಮ್ಮ ಫೋನ್ ಅನ್ನು ಜಾಗರೂಕೆತಯಿಂದ ನೋಡಿಕೊಳ್ಳಲು ಇರುವ ಒಂದು ವಿಧಾನವೆಂದರೆ ಅದನ್ನು ಲಾಕ್ ಮಾಡುವುದಾಗಿದೆ. ಆಂಡ್ರಾಯ್ಡ್‌ನಲ್ಲಿ ನಿಮ್ಮ ಫೋನ್ ಅನ್ನು ಲಾಕ್ ಮಾಡುವ ಅಪ್ಲಿಕೇಶನ್‌ಗಳಿಗೆ ಏನೂ ಭರವಿಲ್ಲ, ಈ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ಗೆ ಉತ್ತಮ ಭದ್ರತೆಯನ್ನು ಒದಗಿಸುತ್ತದೆ.

ಆಗಾಗ್ಗೆ ಅಪ್‌ಡೇಟ್ ಮಾಡುತ್ತಿರಿ

#2

ಗೂಗಲ್ ಪ್ಲೇನಲ್ಲಿ ನಿಮಗೆ ಆಂಡ್ರಾಯ್ಡ್‌ನ ಹೊಸ ಹೊಸ ನವೀಕರಣಗಳು ದೊರೆಯುತ್ತಿರುತ್ತವೆ. ಆದ್ದರಿಂದ ನಿಮ್ಮ ಫೋನ್ ಅನ್ನು ಆಗಾಗ್ಗೆ ಅಪ್‌ಡೇಟ್ ಮಾಡುತ್ತಿರಿ.

ಯುಎಸ್‌ಬಿ ಮೂಲಕ ಚಾರ್ಜ್ ಮಾಡದಿರಿ

#3

ಕಂಪ್ಯೂಟರ್‌ನ ಯುಎಸ್‌ಬಿ ಪೋರ್ಟ್‌ಗೆ ನಿಮ್ಮ ಫೋನ್‌ನ ಚಾರ್ಜರ್ ಅನ್ನು ಅಳವಡಿಸುವುದು ಚಾರ್ಜಿಂಗ್‌ನ ಸರಿಯಾದ ವಿಧಾನವಲ್ಲ ಎಂಬುದನ್ನು ಅರಿತುಕೊಳ್ಳಿ.

ಬ್ಯಾಕಪ್ ಮಾಡಲು ಮರೆಯದಿರಿ

#4

ನಿಮ್ಮ ಜೀವನ ನಿಮ್ಮ ಫೋನ್‌ನಲ್ಲಿದೆ. ನಿಮ್ಮ ಅತ್ಯಮೂಲ್ಯ ಫೋಟೋಗಳು, ರಹಸ್ಯವಾದ ದಾಖಲೆಗಳುಳ್ಳ ಫೋನ್ ಅನ್ನು ನೀವು ಕಳೆದುಕೊಂಡಿರಿ ಎಂದಲ್ಲಿ ಅದು ನಿಮ್ಮ ಜೀವನದ ಪ್ರಮುಖ ಸೋಲಾಗುತ್ತದೆ. ಆದ್ದರಿಂದ ಫೋನ್‌ನಲ್ಲಿರುವ ದಾಖಲೆಗಳನ್ನು ಬ್ಯಾಕಪ್ ಮಾಡಲು ಮರೆಯದಿರಿ.

ಆನ್‌ಲೈನ್‌ನಲ್ಲಿ ಸಂಗ್ರಹಿಸದಿರಿ

#5

ಕ್ಲೌಡ್ ಪ್ರೊವೈಡರ್‌ಗೆ ಏನಾದರೂ ಸಂಭವಿಸಿದಲ್ಲಿ ನಿಮ್ಮ ಡೇಟಾದ ಗತಿ ಏನಾಗಬಹುದು ಎಂಬುದನ್ನು ಯೋಚಿಸಿದ್ದೀರಾ? ಆದ್ದರಿಂದ ಆನ್‌ಲೈನ್‌ನಲ್ಲಿ ಸಂಗ್ರಹಿಸುವಾಗ ಹೆಚ್ಚಿನ ಮುತುವರ್ಜಿಯನ್ನು ಕಾಪಾಡಿಕೊಳ್ಳಿ.

ಹೆಚ್ಚು ಬಿಸಿ ಮಾಡದಿರಿ

#6

ನಿಮ್ಮ ಫೋನ್‌ ಅನ್ನು ಹೆಚ್ಚು ಕಾಲ ಚಾರ್ಜ್ ಮಾಡುವುದು ಫೋನ್‌ನ ಬಿಸಿಯನ್ನು ಏರಿಸಬಹುದು. ಆದ್ದರಿಂದ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುವಾಗ ಅದನ್ನು ತಣ್ಣಗಿನ ಸ್ಥಳದಲ್ಲಿ ಇರಿಸುವುದು ಮುಖ್ಯವಾಗುತ್ತದೆ. ಸೊನ್ನೆ ತನಕ ಫೋನ್ ಬ್ಯಾಟರಿಯನ್ನು ಖಾಲಿಯಾಗಿಸುವುದು ಇಲ್ಲವೇ ಪೂರ್ಣ ಚಾರ್ಜ್ ಆದ ನಂತರ ಕೂಡ ಸಾಕೆಟ್‌ನಿಂದ ಫೋನ್ ಅನ್ನು ಬೇರ್ಪಡಿಸದೇ ಇರುವುದು ಫೋನ್‌ನ ಜೀವನವನ್ನು ನಾಶಪಡಿಸಬಹುದು.

ಪರದೆಗೆ ಸುರಕ್ಷತೆ ಇರಲಿ

#7

ಗೋರಿಲ್ಲಾ ಗ್ಲಾಸ್ ಅತ್ಯುತ್ತಮ ಆದರೆ ಇದಕ್ಕೆ ಸರಿಯಾದ ರಕ್ಷಣೆಯನ್ನು ನೀವು ಮಾಡಿಲ್ಲ ಎಂದಾದಲ್ಲಿ ನಿಮ್ಮ ಫೋನ್‌ನ ಪರದೆಯನ್ನು ಆಗಾಗ್ಗೆ ರಿಪೇರಿ ಮಾಡಿಸುವುದೇ ಕೆಲಸವಾಗಿಬಿಡುತ್ತದೆ.

ಮಳೆಯಿಂದ ರಕ್ಷಿಸಿ

#8

ನಿಮ್ಮ ಫೋನ್ ಜಲಪ್ರತಿರೋಧಕ ಶಕ್ತಿಯನ್ನು ಹೊಂದಿಲ್ಲ ಎಂದಾದಲ್ಲಿ ಫೋನ್ ಹಾಳಾಗುವುದ ಖಚಿತವಾಗಿದೆ.

ಇಎಮ್‌ಐ ಆಯ್ಕೆ ಕಡಿಮೆ ಮಾಡಿ

#9

ಫೋನ್ ಅನ್ನು ಇಎಮ್‌ಐ ಆಯ್ಕೆಯನ್ನು ಬಳಸಿ ಖರೀದಿಸುವುದನ್ನು ನಿಲ್ಲಿಸಿ. ಫೋನ್‌ಗಳು ಲಾಂಚ್ ಆಗಿ ಕೆಲವು ತಿಂಗಳುಗಳ ನಂತರ ಕಡಿಮೆ ಬೆಲೆಗೆ ಇಳಿಯುತ್ತವೆ. ಈ ಸಂದರ್ಭವನ್ನು ಬಳಸಿಕೊಂಡು ಫೋನ್ ಖರೀದಿಸಿ.

ವಿಪರೀತ ಅಪ್ಲಿಕೇಶನ್ ಇನ್‌ಸ್ಟಾಲ್ ಬೇಡ

#10

ನಿಮ್ಮ ಫೋನ್‌ಗೆ ಪರವಾನಗಿ ಇಲ್ಲದ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳದಿರಿ. ಇಂತಹ ಕಾರ್ಯಗಳನ್ನು ಮಾಡುವಾಗ ಆದಷ್ಟು ಜಾಗರೂಕರಾಗಿರಿ. ಅಪ್ಲಿಕೇಶನ್‌ಗಳ ಸುರಿಮಳೆ ನಿಮ್ಮ ಫೋನ್‌ನ ಜೀವಿತವನ್ನು ಹಾಳುಗೆಡವಬಹುದು.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಐಫೋನ್‌ನಲ್ಲಿ 'ಫೈಲ್‌ ಮ್ಯಾನೇಜರ್‌' ಪಡೆಯುವುದು ಹೇಗೆ?
ತಂದೆಯ ಕಿಡ್ನಿ ಕಸಿಗಾಗಿ ಇಂಟರ್ನೆಟ್ ಬಳಸಿಕೊಂಡ ಜಾಣ ಬಾಲಕ
ಫೇಸ್‌ಬುಕ್‌ನಲ್ಲಿ ಸಮಸ್ಯೆ ಉಂಟುಮಾಡುವ ಚಟುವಟಿಕೆ ಏನು ಗೊತ್ತೇ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
IN this article we are giving you simple tips on how to take care of your android phone. Your phone security is more important so just go through these tips to protect your device as well as important documents also.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot