ಮೊದಲ ಐಫೋನ್ ಮಾಡಿದ ಜಾದೂವನ್ನು ಮತ್ತೆ ಮಾಡಿದ್ದು 'ಐಫೋನ್ 10'!!

  2007 ರಲ್ಲಿ ಶುರುವಾಗಿ ಇಂದಿಗೆ 10 ವರ್ಷಗಳನ್ನು ಪೂರೈಸಿದ ಐಫೋನ್ ಪ್ರಪಂಚ 2017ನೇ ವರ್ಷವನ್ನು ಕೂಡ ಮೈಲಿಗಲ್ಲಿನ ವರ್ಷವನ್ನಾಗಿ ನಿರ್ಮಿಸಿದೆ.! ಸತತ ಹತ್ತು ವರ್ಷಗಳಿಂದ ಇಂದಿಗೂ ರಾಜಾಜಿಸುತ್ತಿರುವ ವಿಶ್ವದ ನಂಬರ್ ಒನ್ ಸ್ಮಾರ್ಟ್‌ಫೋನ್‌ಗಳಿಗೆ ವಿಶ್ವದ ಮೊಬೈಲ್ ಪ್ರಿಯರು ಈಗಲೂ ಮನಸೋತಿದ್ದಾರೆ.!!

  ಈ ವರ್ಷ ಬಿಡುಗಡೆಗೊಂಡ ಐಫೋನ್ 10 ಫೋನ್‌ ಹತ್ತು ವರ್ಷಗಳ ಹಿಂದೆ ಮೊದಲ ಐಫೋನ್ ಮಾಡಿದ ಜಾದೂವನ್ನು ಮಾಡಿದೆ.!! ಹಾಗಾಗಿಯೇ, ಐಫೋನ್ 10 ಫೋನ್ 2017ನೇ ವರ್ಷದ ಸ್ಮಾರ್ಟ್‌ಫೋನ್ ಎನ್ನುವ ಬಿರುದನ್ನು ಪಡೆದಿದೆ.! ಹಾಗಾದರೆ, ಐಫೋನ್ 10 ಮತ್ತೆ ಜನರ ಗಮನ ಸೆಳೆದಿದ್ದು ಹೇಗೆ ಎಂಬ ಕುತೋಹಲ ಅಂಶಗಳನ್ನು ಮುಂದೆ ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಎಡ್ಜ್ ಟು ಎಡ್ಜ್ ತಂತ್ರಜ್ಞಾನ!!

  ಐಫೋನ್ 10 ಸ್ಮಾರ್ಟ್‌ಫೋನ್ ವಿನ್ಯಾಸವೇ ವಿಶ್ವದಲ್ಲೆಡೆ ಮೊಬೈಲ್ ಗ್ರಾಹಕರ ಮನಸೂರೆಗೊಳಿಸಿತ್ತು.!! ಜೊತೆಗೆ ಓಎಲ್ಇಡಿ ತಂತ್ರಜ್ಞಾನದ ಡಿಸ್‌ಪ್ಲೇಯನ್ನು ಫೋನ್ ಹೊಂದಿದ್ದು, 5.8 ಇಂಚಿನ ಪರದೆಯಲ್ಲಿ 2 ಮಿಲಿಯನ್ ಪಿಕ್ಸೆಲ್‌ಗಳಿರುವುದು ಹಾಗೂ ಎಡ್ಜ್ ಟು ಎಡ್ಜ್ ತಂತ್ರಜ್ಞಾನ ಹೊಂದಿರುವುದು ಈ ಮೊಬೈಲ್‌ನಲ್ಲಿನ ಪ್ರಮುಖ ವಿಶೇಷತೆಗಳಲ್ಲಿ ಒಂದು.!!

  Facebook Messenger Tips and Tricks : ಫೇಸ್‌ಬುಕ್‌ನಲ್ಲೂ ಫುಟ್‌ಬಾಲ್ ಆಡಿ!!
  ಐಫೋನ್ 10 ಫೇಸ್‌ ಐಡಿ!!

  ಐಫೋನ್ 10 ಫೇಸ್‌ ಐಡಿ!!

  ಐಫೋನ್ 10 ನಲ್ಲಿ ಈ ಹಿಂದಿನ ಟೆಚ್ ಐಡಿಯನ್ನು ತೆಗೆದು ಹಾಕಿ ಹೊಸದಾಗಿ ಫೇಸ್‌ ಐಡಿ ಎಂಬ ಹೊಸ ಆಯ್ಕೆಯನ್ನು ನೀಡಲಾಗಿತ್ತು. ಒಮ್ಮೆ ನಿಮ್ಮ ಫೇಸ್ ರಿಡ್ ಆದ ನಂತರದಲ್ಲಿ ನೀವು ಹೆರ್ ಸ್ಟೈಲ್ ಬದಲಾಯಿಸಿದರೂ, ಗಡ್ಡ ಬಿಟ್ಟರು ನಿಮ್ಮನ್ನು ಗುರುತಿಸಲಿರುವ ಈ ಫೀಚರ್‌ಗಾಗಿ ಸೆನ್ಸಾರ್ ಮತ್ತು ಕ್ಯಾಮೆರಾವನ್ನು ಇಡಲಾಗಿದ್ದು ಕೂಡ ಐಫೋನ್ 10 ಬಗ್ಗೆ ಜನರು ನಿಬ್ಬರಗಾಗಲು ಕಾರಣವಾಗಿತ್ತು.!!

  ಆಪಲ್‌ನ ಮೊದಲ AR ಮತ್ತು ಅನ್‌ಮೋಜಿ!!

  ಐಫೋನ್ 10 ನಲ್ಲಿರುವ ಹಿಂಬದಿಯ ಕ್ಯಾಮೆರಾಗಳು AR ಸಫೋರ್ಟ್ ಮಾಡಲಿದ್ದು, ಮೊಷನ್ ಟ್ರಾಕಿಂಗ್ ಮಾಡಲಿದೆ. ಇದನ್ನು ಆಪಲ್ ಮೊದಲ ಬಾರಿಗೆ ತನ್ನ ಫೋನಿನಲ್ಲಿ ಅಳವಡಿಸಿತಗದೆ. ಎಮೋಜಿಗಳ ಬದಲಾಗಿ ನಿಮ್ಮದೇ ಅನ್‌ಮೋಜಿ ಕ್ರಿಯೆಟ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇದಕ್ಕಾಗಿ ಟ್ರೂ ಡೆಪ್ತ್ ಕ್ಯಾಮೆರಾ ಸಹಾಯ ಮಾಡಲಿದೆ. ನಿಮ್ಮ ಸ್ಟೀಕರ್ ಗಳನ್ನು ನೀವು ಕ್ರಿಯೇಟ್ ಮಾಡಿಕೊಳ್ಳಬಹುದಾಗಿದೆ. ಅದನ್ನು ಸ್ನೇಹಿತರಿಗೆ ಸೆಂಡ್ ಮಾಡಬಹುದಾಗಿದೆ. !!

  ಐಫೋನ್ 10 ಹಾರ್ಡ್‌ವೇರ್!!

  ಆಪಲ್ ಐಫೋನ್10 ಹೊಸ A11 ಬಯೋನಿಕ್ ಪ್ರೋಸೆಸರ್ ಹೊಂದಿದ್ದು, ಇದು ವಿಶ್ವ ಸ್ಮಾರ್ಟ್‌ಫೋನ್‌ಗಳಲ್ಲೇ ಬಳಕೆಯಾಗಿರುವ ಅತೀ ಹೆಚ್ಚಿನ ವೇಗದ ಪ್ರೋಸೆಸರ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಅಲ್ಲದೇ ಆಪಲ್ GPU ಗೇಮಿಂಗ್ ಅನುಭವನ್ನು ಅತ್ಯುತ್ತಮಗೊಳಿಸಿದೆ. ಈ ಪ್ರೋಸೆಸರ್ ಲೋ ಲೈಟ್ ನಲ್ಲಿಯೂ ಪಿಚ್ಚರ್ ಗಳನ್ನು ತೆಗೆಯಲು ಶಕ್ತವಾಗಿದ್ದು ಈ ಫೋನಿನ ಮತ್ತೊಂದು ವಿಶೇಷ.!!

  ಐಫೋನ್ 10 ಕ್ಯಾಮೆರಾ !!

  ಐಫೋನ್ 10 ನಲ್ಲಿ 12 MP ಡ್ಯುಯಲ್ ಕ್ಯಾಮೆರಾ ಇದ್ದು, ವೈಡ್ ಆಂಗಲ್ ಲೈನ್ಸ್ f/1.8 ಅಪರ್ಚರ್ ಟೆಲಿ ಲೈನ್ಸ್ f/2.4 ಅಪರ್ಚರ್ ನಲ್ಲಿ ಫೋಟೊವನ್ನು ಕ್ಲಿಕ್ ಮಾಡಲಿದೆ. ಡ್ಯುಯಲ್ ಟೊನ್ LED ಫ್ಲಾಷ್ ಸಹ ಫೋನ್‌ನಲ್ಲಿದ್ದು, ಕ್ಯಾಮೆರಾವನ್ನು ವರ್ಟಿಕರ್ ಆಗಿ ನೀಡಲಾಗಿದೆ.! ಇಷ್ಟೇ ಅಲ್ಲದೇ ಕ್ಯಾಮೆರಾದಲ್ಲಿ ಪೋಟ್ರೇಟ್ ಮೊಡ್ ಅನ್ನು ಸಹ ನೀಡಲಾಗಿದ್ದು, ಬಣ್ಣಗಳನ್ನು ಬದಲಾಯಿಸುವ ಅವಕಾಶದ ಈ ಫೀಚರ್ ಗ್ರಾಹಕರ ಮನಸ್ಸನ್ನು ಗೆದ್ದಿತ್ತು.!!

  ಓದಿರಿ:2017ನೇ ವರ್ಷದಲ್ಲಿನ ಟಾಪ್ ಗ್ಯಾಜೆಟ್‌ಗಳ ಲೀಸ್ಟ್!!..ವರ್ಷದ ಬೆಸ್ಟ್ ಮೊಬೈಲ್ ಇದು!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Apple and iPhone changed our world. Ten years ago today. to know more visit to kannada.gizbot.com
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more