ಎಚ್ ಟಿಸಿ ಹಿಂದಿ ಮೊಬೈಲ್! ಕನ್ನಡ?

Posted By: Staff

ಎಚ್ ಟಿಸಿ ಹಿಂದಿ ಮೊಬೈಲ್! ಕನ್ನಡ?
ಎಲ್ಲರಿಗೂ ಅವರವರ ಭಾಷೆಯ ಮೇಲೆ ಮಮಕಾರ ಹೆಚ್ಚು, ಅದೇ ಭಾಷೆಯನ್ನು ಬಳಕೆ ಮಾಡಲು ಬಯಸುತ್ತಾರೆ. ಮೊಬೈಲ್ ಗಳು ಸಹ ಗ್ರಾಹಕನ ಈ ಭಾಷಾ ಪ್ರೇಮವನ್ನು ಅಲ್ಲಗೆಳಿದಿಲ್ಲ.ಮೊಬೈಲ್ ಆಪರೇಟಿಂಗ್ ನಲ್ಲಿ ಈಗ ಪ್ರಾದೇಶಿಕ ಭಾಷೆಗಳನ್ನು ಬಳಸುವ ಸೌಲಭ್ಯವಿದೆ ಎಂದು ಎಲ್ಲರಿಗೂ ಗೊತ್ತು.

ಅಂತರಾಷ್ಟ್ರೀಯ ಕಂಪನಿ HTC ಅದರ ಹೊಸ ಸ್ಮಾರ್ಟ್ ಪೋನಿನಲ್ಲಿ ಹಿಂದಿ ಭಾಷೆಯನ್ನು ಬಳಕೆ ಮಾಡುವಂತೆ ಅನಕೂಲಕರವಾಗಿ ರೂಪಿಸಿ ಭಾರತೀಯರ ಮನ ಪುಳಕಗೊಳಿಸಿದೆ.

ಈ ಮೊಬೈಲಲ್ಲಿ ಹಿಂದಿ ಭಾಷೆಯನ್ನು ಬಳಸಿ ಸಂದೇಶ ಕಳುಹಿಸ ಬಹುದಾಗಿದೆ. ಇತ್ತೀಚಿನ ಆಂಡ್ರೋಯ್ಡ್ 2.3ರಲ್ಲಿ ಈ ರೀತಿಯ ಹಿಂದಿ ಭಾಷೆಯ ಆಯ್ಕೆ ಇದ್ದರೂ ಅದು ಮೆನುವಿನಲ್ಲಿ ಹುಡುಕಲಷ್ಟೆ ಸೀಮಿತವಾಗಿತ್ತು.

ಆದರೆ ಈಗ ಫೈಲ್ ಡೌನ್ ಲೋಡ್ ಮಾಡಿದ ಮೇಲೆ ಅದನ್ನು ಸರ್ಫ್ ಮಾಡಲು ಹಾಗೂ ಸಂದೇಶ ಕಳುಹಿಸಲು ಉಪಯೋಗಿಸಬಹುದು.ಇದರಿಂದಾಗಿ ಇದಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ದೊರೆಯುವ ಸಾಧ್ಯತೆ ಇದೆ.

ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಕೇವಲ ಶೇ. 11 ರಷ್ಟು ಜನ ಮಾತ್ರ ಇಂಗ್ಲೀಷ್ ಭಾಷೆ ಮಾತನಾಡ ಬಲ್ಲರು. ಹಿಂದಿ ರಾಷ್ಟ್ರ ಭಾಷೆಯಾಗಿದ್ದು ಬಹುತೇಕ ಮಂದಿ ಮಾತನಾಡುತ್ತಾರೆ. ಅಲ್ಲದೆ ಪ್ರಪಂಚದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆಯಲ್ಲಿ ಹಿಂದಿ ನಾಲ್ಕನೆ ಸ್ಥಾನದಲ್ಲಿ ಇದೆ.

ಬೇರೆ ಮೊಬೈಲ್ ಗಳಲ್ಲಿ ಹಿಂದಿ ಭಾಷೆ ಬಳಕೆ ಮಾಡುವ ಸೌಲಭ್ಯವಿದ್ದರು ಕೀಪ್ಯಾಡ್ ಇಂಗ್ಲೀಷ್ ಆಗಿವೆ. ಆದರೆ HTC ಯಲ್ಲಿ ಕೀಪ್ಯಾಡ್ ಸಹ ಹಿಂದಿಯಲ್ಲಿ ಇರುವುದರಿಂದ ಇದು ಹಿಂದಿ ಬಲ್ಲವರನ್ನು ಅತಿ ಹೆಚ್ಚಾಗಿ ಆಕರ್ಷಿಸುವುದರಲ್ಲಿ ಸಂಶಯವಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot