ಹೊಸ ರಾಗ ಹೊಮ್ಮಲಿದೆ ಹ್ಯುವೈ ಗಾಗಾದಿಂದ

Posted By: Staff

ಹೊಸ ರಾಗ ಹೊಮ್ಮಲಿದೆ ಹ್ಯುವೈ ಗಾಗಾದಿಂದ
ಸಾಕಷ್ಟು ಸ್ಮಾರ್ಟ್ ಫೋನ್ ಗಳನ್ನು ಪರಿಚಯಿಸಿರುವ ಹ್ಯುವೈ ಮೊಬೈಲ್ ಕಂಪನಿ ಇದೀಗ ಹೊಸ ಮೊಬೈಲನ್ನು ಬಿಡುಗಡೆ ಮಾಡಿದೆ. ಆಧುನಿಕ ಫೀಚರ್ಸ್ ಒಳಗೊಂಡಿರುವ ಹುವೈ ಗಾಗಾ U8180 ನೂತನ ಮೊಬೈಲ್ ಈಗಾಗಲೇ ಭಾರತಕ್ಕೂ ಕಾಲಿಟ್ಟಾಗಿದೆ.

ಈ ಗಾಗಾ ಮೊಬೈಲ್ ನಲ್ಲಿ ನಿಮಗೆ ಅವಶ್ಯಕವಿರುವ ಎಲ್ಲಾ ಆಧುನಿಕ ಸೌಲಭ್ಯಗಳೂ ಲಭ್ಯವಿದೆ. ಗೂಗಲ್ ಆಂಡ್ರಾಯ್ಡ್ v2.2 ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಮೊಬೈಲ್ 2.8 ಇಂಚಿನ ಸ್ಕ್ರೀನ್ ಡಿಸ್ ಪ್ಲೇ, ಟಚ್ ಸ್ಕ್ರೀನ್ QVGA ಡಿಸ್ಪ್ಲೇ ಮತ್ತು 240 x 320 ರೆಸೆಲ್ಯೂಷನ್ ಸ್ಕ್ರೀನ್ ಹೊಂದಿದೆ.

ಮೊಬೈಲ್ ನಲ್ಲಿ ಏನೇನು ವಿಶೇಷತೆ ಇದೆ?

* ಕ್ವರ್ಟಿ ಕೀಪ್ಯಾಡ್
* 3.2 ಮೆಗಾ ಪಿಕ್ಸಲ್ ಕ್ಯಾಮೆರಾ
* ಮೈಕ್ರೋ USB port ಮತ್ತು 3.5 mm ಆಡಿಯೋ ಜಾಕ್
* 3G ಜೊತೆ 802.11 b/g/n ಹೈಸ್ಪೀಡ್ ವೈ-ಫೈ ಸಂಪರ್ಕ, GPRS ಮತ್ತು ಬ್ಲೂಟೂಥ್
* 256 MB RAM and 512 MB ಫ್ಲಾಶ್ ಸ್ಟೋರೇಜ್
* 16 GB ವರೆಗೆ ಮೆಮರಿ ವಿಸ್ತರಣೆ ಹೊಂದಬಹುದಾದ micro SD card
* ಎಫ್.ಎಂ
* ಡುಯಲ್ ಬ್ಯಾಂಡ್ UMTS ನೆಟ್ ವರ್ಕ್ ಮತ್ತು ಕ್ವಾಡ್ ಬ್ಯಾಂಡ್ GSM (3G ಗೆ).

ಈ ಎಲ್ಲಾ ಆಕರ್ಷಣೆ, ಸೌಲಭ್ಯವನ್ನು ಒಳಗೊಂಡಿರುವ ಈ ಗಾಗಾ U8180 ಮೊಬೈಲ್ ಕೇವಲ 9,000 ರೂಪಾಯಿ ಮಾತ್ರ. ಆದರೆ ಇದು ಸಾಮಾನ್ಯ v2.0 ಹೊಂದಿದೆಯೋ ಅಥವಾ v2.1 A2DP ಬ್ಲೂಟೂಥ್ ತಂತ್ರಜ್ಞಾನ ಹೊಂದಿದೆಯೋ ಎಂದು ನಿಖರವಾಗಿಲ್ಲ.

Please Wait while comments are loading...
Opinion Poll

Social Counting