Subscribe to Gizbot

ಆಂಡ್ರಾಯ್ಡ್ ಫೋನ್ ಗಳಿಗಿನ್ನು ಸಂಗೀತದ ಸುಗ್ಗಿ

Posted By: Staff

ಆಂಡ್ರಾಯ್ಡ್ ಫೋನ್ ಗಳಿಗಿನ್ನು ಸಂಗೀತದ ಸುಗ್ಗಿ
ಸಂಗೀತ ಪ್ರಿಯರು ಈಗ ಆಂಡ್ರಾಯ್ಡ್ ಫೋನ್ ನಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಬಹುದಾಗಿದೆ. ಆಂಡ್ರಾಯ್ಡ್ ಫೋನ್ ಗಳಿಗೆಂದು ಕಾಮ್ಟೆಕ್ಸ್ ಸಾಫ್ಟ್ ವೇರ್ ಸೊಲ್ಯೂಷನ್ ಕಂಪನಿ ಜಾಮ್ಕಾಸ್ಟ್ ಎಂಬ ಮ್ಯೂಸಿಕ್ ಅಪ್ಲಿಕೇಶನನ್ನು ಬಿಡುಗಡೆಗೊಳಿಸಿದೆ.

ಆಂಡ್ರಾಯ್ಡ್ 2.1 + ಆವೃತ್ತಿಯ ಫೋನ್ ಗಳನ್ನು ಹೊಂದಿರುವವರು ಆಂಡ್ರಾಯ್ಡ್ ಸ್ಟೋರ್ ನಿಂದ ಈ ಅಪ್ಲಿಕೇಶನನ್ನು ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು.

ಈಗಿರುವ ನೆಟ್ ವರ್ಕ್ ಕೇಬಲ್ ಅಲ್ಲದೆ ಜಾಮ್ಕಾಸ್ಟ್ ಸರ್ವರ್ ನಿಂದಲೂ ಇದರ ಸುರಕ್ಷಿತ ಸಂಪರ್ಕ ಪಡೆಯಬಹುದಾಗಿದೆ. ಒಂದು ಬಾರಿ ಸಂಪರ್ಕವನ್ನು ಹೊಂದಿದ ನಂತರ ಜಾಮ್ಕಾಸ್ಟ್ ಪ್ಲೇಯರ್ ಮೂಲಕ ಎಲ್ಲಾ ಡಿಜಿಟಲ್ ಮ್ಯೂಸಿಕ್ ಅನ್ನು ಸಹ ಹಂಚಿಕೊಳ್ಳಲು ಸಾಧ್ಯವಿದೆ.

ಆಂಡ್ರಾಯ್ಡ್ ಸಾಧನದ 3G/4G ಅಥವಾ Wi-Fi ಮೂಲಕ ಜಾಮ್ಕಾಸ್ಟ್ ಪ್ಲೇಯರ್ ಸಂಪರ್ಕ ತೆಗೆದುಕೊಳ್ಳಬಹುದಾಗಿದ್ದು, ಬಳಕೆದಾರರು ವಿಶ್ವದೆಲ್ಲೆಡೆಯಿದ್ದರೂ ಮ್ಯೂಸಿಕ್ ಅಪ್ ಲೋಡ್ ಮಾಡಿಕೊಳ್ಳಲು ಸಹಾಯವಾಗುತ್ತದೆ. ಆಡಿಯೋ ಗುಣಮಟ್ಟದ ನಿಯಂತ್ರಣ ಇದರಲ್ಲಿದ್ದು, FLAC/ FLAC-HD, WMA. ACC/ACC+, MP3, ALAC, OGG ಮುಂತಾದ ಸೌಲಭ್ಯವೂ ಇದೆ.

ಇಂದಿನ ಯುವ ತಲೆಮಾರನ್ನು ಗಮನದಲ್ಲಿಟ್ಟುಕೊಂಡು ಈ ಮ್ಯೂಸಿಕ್ ಅಪ್ಲಿಕೇಶನನ್ನು ಹೊರತಂದಿರುವುದಾಗಿ ಸಾಫ್ಟ್ ವೇರ್ ಡೆವಲಪ್ ಮೆಂಟ್ ಸಲ್ಯುಷನ್ಸ್ ನ ಸಿಇಒ ಹೇಳಿದ್ದಾರೆ.

ಗ್ಯಾಪ್ ಲೆಸ್ ಪ್ಲೇಬ್ಯಾಕ್, ವಾಯ್ಸ್ ಸರ್ಚ್ ಮತ್ತು SD ಕಾರ್ಡ್ ಸೌಲಭ್ಯ ಕೂಡ ಹೊಂದಿದ್ದು, ಕಾರ್ ಡಾಕ್ ಸಿಸ್ಟಮ್ ಗೂ ಸರಿಹೊಂದುತ್ತೆ. ಆಂಡ್ರಾಯ್ಟ್ ಸ್ಟೋರ್ಸ್ ನಿಂದ ಈ ಅಪ್ಲಿಕೇಶನನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಟಾಬ್ಲೆಟ್ ಗಳಿಗೂ, ಗೂಗಲ್ ಟಿವಿಗೂ ಇದು ಬೆಂಬಲಿಸಲಿದ್ದು, ಮೈಕ್ರೋಸಾಫ್ಟ್ ವಿಂಡೋಸ್ XPಯಲ್ಲೂ ಕೂಡ ಹೊಂದಿಕೆಯಾಗುತ್ತದೆ. ಈ ಟ್ರಯಲ್ ಸಾಫ್ಟ್ ವೇರನ್ನು 14 ದಿನದ ಅವಧಿಗೆ 1,000 ರೂಗೆ ಪಡೆದುಕೊಳ್ಳಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot