ಐಬಾಲ್ ಶಾನ್ ಮೊಬೈಲ್ ಶಾನೇ ಅಗ್ಗ

By Super
|
ಐಬಾಲ್ ಶಾನ್ ಮೊಬೈಲ್ ಶಾನೇ ಅಗ್ಗ
ಐ ಬಾಲ್ ಕಂಪನಿ ನೂತನ ಮೊಬೈಲನ್ನು ಬಿಡುಗಡೆ ಮಾಡಲು ಮುಂದಾಗಿದ್ದು, ಐ ಬಾಲ್ ಶಾನ್ S315 ಎಂಬ ಡ್ಯೂಯಲ್ ಸಿಮ್ ಮೊಬೈಲ್ ಇನ್ನೇನು ಭಾರತದ ಮಾರುಕಟ್ಟೆಗೆ ಬರಲು ಸಜ್ಜಾಗಿದೆ.

ಮಧ್ಯಮ ವರ್ಗದ ಜನರನ್ನು ಗುರಿಯಾಗಿಟ್ಟುಕೊಂಡು ತಯಾರು ಮಾಡಿರುವ ಈ ಮೊಬೈಲ್ ಭಾರತದಲ್ಲಿ ಹೆಚ್ಚು ಮಾರಾಟವಾಗುವುದೆಂದು ನಿರೀಕ್ಷಿಸಲಾಗಿದೆ.

ಇದರ ಸ್ಕ್ರೀನ್ ತುಂಬಾ ಪುಟ್ಟದಾಗಿದೆ, ಅಂದರೆ 2 ಇಂಚಿನದಾಗಿದ್ದು, ಮೊಬೈಲ್ ನಲ್ಲಿ ಒಳ್ಳೆ ಗುಣಮಟ್ಟದ ಫೋಟೋಗಳನ್ನು ತೆಗೆಯಬಹುದಾಗಿದೆ. 6 ಗಂಟೆಗಳ ಟಾಕ್ ಟೈಮ್ ಹೊಂದಿರುವ ಇದರ ಬ್ಯಾಟರಿ 500 ಗಂಟೆ ಸ್ಟಾಂಡ್ ಬೈ ಇರುವುದು ವಿಶೇಷವೆನಿಸಿದೆ.

ಮೊಬೈಲ್ ನಲ್ಲಿ 8GB ಮೆಮೊರಿ ಸ್ಟೋರೇಜ್ ಇದ್ದು, ಬ್ಲೂಟೂಥ್ ಮತ್ತು ಇಂಟರ್ ನೆಟ್ ಸಂಪರ್ಕದ ಸೌಲಭ್ಯವನ್ನೂ ಪಡೆಯಬಹುದು. ಮೊಬೈಲ್ ನಲ್ಲಿರಬೇಕಾದ ಅವಶ್ಯಕ ಸೌಲಭ್ಯವೆಲ್ಲವನ್ನೂ ಈ ಮೊಬೈಲ್ ಹೊಂದಿದ್ದು, 3G ಹೊರತಾಗಿದೆ. ಆದರೆ ಇದರ ಕಡಿಮೆ ಬೆಲೆ ಈ ಅಂಶವನ್ನು ನಗಣ್ಯಗೊಳಿಸಲಿದೆ.

ಮೊಬೈಲ್ ಬೆಲೆ 2000 ರೂ ಎಂದು ಅಂದಾಜಿಸಲಾಗಿದ್ದು, ಐ ಬಾಲ್ ಶಾನ್ S315 ಮೊಬೈಲ್ ನಲ್ಲಿ ಟಚ್ ಸ್ಸ್ರೀನ್, ವೈ ಫೈ, ಟಾರ್ಚ್, 3G ಇನ್ನಿತರ ಸೌಲಭ್ಯವನ್ನು ಅಳವಡಿಸುವ ಕುರಿತು ಯೋಜನೆ ನಡೆಸಲಾಗುತ್ತಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X