ಹೊಸ ನೋಕಿಯಾ 303 ಮೊಬೈಲಿಗೆ ಸುಸ್ವಾಗತ

Posted By: Staff

ಹೊಸ ನೋಕಿಯಾ 303 ಮೊಬೈಲಿಗೆ ಸುಸ್ವಾಗತ
ನೋಕಿಯಾ ಅಂದ್ರೆ ಭಾರತೀಯರಿಗೆ ಅಚ್ಚುಮೆಚ್ಚು. ನೋಕಿಯಾ ಉತ್ಪನ್ನಗಳ ಗುಣಮಟ್ಟ, ಕಾರ್ಯಕ್ಷಮತೆಯೇ ಇದಕ್ಕೆ ಕಾರಣ. ಇದೀಗ ಕಂಪನಿ ಹೊಸದೊಂದು ಮೊಬೈಲ್ ಹೊರತರಲಿದೆ. ಅದರ ಹೆಸರು ನೋಕಿಯಾ 303. ಇದು ಟಚ್ ಆಂಡ್ ಟೈಪ್ ಸಿಂಬಿಯನ್ ಸೀರಿಸ್ ಸ್ಮಾರ್ಟ್ ಫೋನ್. ಇದರ ದರವನ್ನು ಕಂಪನಿ ಪ್ರಕಟಿಸಿಲ್ಲ.

ಬರೀ ಟಚ್ ಸ್ಕ್ರೀನ್ ನೊಂದಿಗೆ 303 ಬಂದಿಲ್ಲ. ಇದರಲ್ಲಿ ಕ್ವೆರ್ಟಿ ಕೀಪ್ಯಾಡ್ ಕೂಡ ಇದೆ. ಇದರ ಇನ್ನೊಂದು ವಿಶೇಷತೆಯೆಂದರೆ 32 ಜಿಬಿ ವರೆಗೆ ವಿಸ್ತರಿಸಬಹುದಾದ ಸಂಗ್ರಹ ಸಾಮರ್ಥ್ಯ.

ಇಷ್ಟೇ ಅಲ್ಲ. ಇದರಲ್ಲಿ ಡೇಟಾ ಮ್ಯಾನೆಜ್ ಮೆಂಟ್ ಆಯ್ಕೆ ಕೂಡ ಇದೆ. ಅಂದರೆ ಬ್ಲೂಟೂಥ್ ಮತ್ತು ನಿಸ್ತಂತು ಸೌಲಭ್ಯಗಳಿವೆ. ಯುಎಸ್ ಬಿ ಪೊರ್ಟ್ ಮೂಲಕ ಮಾಹಿತಿ, ಫೈಲುಗಳನ್ನು ನಿಮ್ಮ ಲ್ಯಾಪ್ ಟಾಪ್, ಕಂಪ್ಯೂಟರ್ ಅಥವಾ ಸಂಗೀತ ಸಾಧನಗಳಿಗೆ ಟ್ರಾನ್ಸ್ ಫಾರ್ಮ್ ಮಾಡಬಹುದಾಗಿದೆ. ನೋಕಿಯಾ 303 ಕೆಲವು ವಿಶೇಷತೆಗಳು ಈ ಕೆಳಗಿನಂತಿವೆ.

ವಿಶೇಷತೆ:
* ಟಚ್ ಸ್ಕ್ರೀನ್ ನೊಂದಿಗೆ ಕ್ವೆರ್ಟಿ ಕೀಪ್ಯಾಡ್
* 3.2 ಮೆಗಾ ಪಿಕ್ಸಲ್ ಕ್ಯಾಮೆರಾ
* 32GB ವರೆಗೆ ಮೆಮೊರಿ ಸಪೋರ್ಟ್
* ಬ್ಲೂಟೂಥ್ ಮತ್ತು ವೈ-ಫೈ
* ಲ್ಯಾಪ್ ಟಾಪ್, ಕಂಪ್ಯೂಟರ್ ಗೆ ಸಹಕರಿಸಲು USB port
* ಫೇಸ್ ಬುಕ್, ಟ್ವಿಟರ್ ಸೌಲಭ್ಯ
* ವಿಡಿಯೋ, ಆಡಿಯೋ ಮತ್ತು ಎಫ್.ಎಂ
* 3.5 mm ಆಡಿಯೋ ಜಾಕ್

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot