ಸ್ಲಿಮ್ ಅಂಡ್ ಸ್ಟೈಲಿಶ್ ಮೊಬೈಲ್ ಸದ್ಯದಲ್ಲಿಯೇ ನಿಮ್ಮಲ್ಲಿಗೆ

By Super
|
ಸ್ಲಿಮ್ ಅಂಡ್ ಸ್ಟೈಲಿಶ್ ಮೊಬೈಲ್ ಸದ್ಯದಲ್ಲಿಯೇ ನಿಮ್ಮಲ್ಲಿಗೆ
ಪ್ರತಿಷ್ಟಿತ ಬ್ಲಾಕ್ ಬೆರ್ರಿ ಮೊಬೈಲ್ ಕಂಪನಿ ಭಾರತದ ಗ್ರಾಹಕರಿಗೆಂದು ಎರಡು ಕರ್ವ್ ಸಿಡಿಎಂಎ ಮೊಬೈಲ್ ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಬ್ಲಾಕ್ ಬೆರ್ರಿ 9350 ಮತ್ತು 9370 ಸಿಡಿಎಂಎ ಮೊಬೈಲ್ ಗಳು ಭಾರತಕ್ಕೆ ಸದ್ಯದಲ್ಲಿಯೇ ಬರಲಿದೆ.

ಈ ವಿಚಾರವಾಗಿ ಭಾರತದ ಟಾಟಾ ಟೆಲಿಸರ್ವೀಸಸ್, ಎಂಟಿಎಸ್ ಮತ್ತು ರಿಲಾಯನ್ಸ್ ಕಮ್ಯುನಿಕೇಶನ್ ಮೊಬೈಲ್ ಆಪರೇಟರ್ ಗಳೊಂದಿಗೆ ಬ್ಲಾಕ್ ಬೆರ್ರಿ ಒಪ್ಪಂದ ಮಾಡಿಕೊಂಡಿದ್ದು, 2011ರ ವರ್ಷಾಂತ್ಯ ಅಥವಾ 2012 ರ ಆರಂಭದಲ್ಲಿ ಭಾರತದಲ್ಲಿ ಈ ಮೊಬೈಲ್ ಗಳು ತೆರೆಕಾಣಲಿದೆ.

ಬ್ಲಾಕ್ ಬೆರ್ರಿಯು ಈ ಬಾರಿ ಬ್ಲಾಕ್ ಬೆರ್ರಿ 9350 ಮತ್ತು 9370 ಸಿಡಿಎಂಎ ಮೊಬೈಲ್ ಗಳನ್ನು ಬಿಡುಗಡೆ ಮಾಡಲಿದ್ದು, ಈ ಎರಡೂ ಹ್ಯಾಂಡ್ ಸೆಟ್ 2.44 ಇಂಚು ಅಗಲದ ಸ್ಕ್ರೀನ್ ಹೊಂದಿದೆ. ತುಂಬಾ ಸ್ಲಿಮ್ ಮತ್ತು ಸ್ಟೈಲಿಶ್ ಲುಕ್ ಹೊಂದಿರುವುದು ಈ ಮೊಬೈಲ್ ಗಳ ಮೊದಲ ಪ್ಲಸ್ ಪಾಯಿಂಟ್.

ಟಚ್ ನೊಂದಿಗೆ ಕ್ವೆರ್ಟಿ ಕೀಪ್ಯಾಡ್ ಆಯ್ಕೆಯೂ ಇದ್ದು, ಬ್ಲಾಕ್ ಬೆರ್ರಿ 7 ಆಪರೇಟಿಂಗ್ ಸಿಸ್ಟಮ್ ಬೆಂಬಲಿತ ಮೊಬೈಲ್ ಇವಾಗಿದೆ. 5 ಮೆಗಾ ಪಿಕ್ಸಲ್ ಕ್ಯಾಮೆರಾ ಹೊಂದಿರುವ ಈ ಮೊಬೈಲ್ ಗಳ ಇನ್ನೊಂದು ವಿಶೇಷವೆಂದರೆ, ಮಾಹಿತಿ, ವಿಡಿಯೋ ಮುಂತಾದ ವಿಷಯಗಳ ಸುಲಭ ವಿನಿಮಯಕ್ಕೆ ನಿಯರ್ ಫೀಲ್ಡ್ ಕಮ್ಯುನಿಕೇಶನ್ ಚಿಪ್ಸ್ ಸೌಲಭ್ಯ ಕೂಡ ಇದೆ.

ವೈರ್ ಲೆಸ್ ಕನೆಕ್ಷನ್ ನೊಂದಿಗೆ ಆಡಿಯೋ, ವಿಡಿಯೋ ಪ್ಲೇಯರ್ ಹಾಗೂ ಸಂಪರ್ಕ ಸೌಲಭ್ಯಕ್ಕೆ ಬ್ಲೂಟೂಥ್ ಮತ್ತು ವೈಫೈ ಕನೆಕ್ಷನ್ ಎರಡರಲ್ಲೂ ಇದೆ.
ಇವೆರಡರಲ್ಲೂ ವಾಯ್ಸ್ ಆಕ್ಟಿವೇಟೆಡ್ ಯೂನಿವರ್ಸಲ್ ಸರ್ಚ್ ಆಯ್ಕೆಯೂ ಲಭ್ಯವಿದೆ.

ಬ್ಲಾಕ್ ಬೆರಿ ಮೊಬೈಲ್ ಗಳೆಂದರೆ ಬ್ಯಾಟರಿ ಬಗ್ಗೆ ಮಾತಾಡುವಂತೆಯೇ ಇಲ್ಲ. ಬ್ಲಾಕ್ ಬೆರ್ರಿ 9350 ಮತ್ತು 9370 ಸಿಡಿಎಂಎ ಮೊಬೈಲ್ ಗಳಲ್ಲಿ ಬ್ಯಾಟರಿ ಬ್ಯಾಕ್ ಅಪ್ ಚೆನ್ನಾಗಿದ್ದು, ಕಂಪನಿ ಈ ಮೊಬೈಲ್ ದರಗಳ ಕುರಿತು ಇನ್ನೂ ಮಾಹಿತಿ ನೀಡಿಲ್ಲ. ಆದರೆ ಭಾರತೀಯರಿಗೆ ಕೈಗೆಟುಕುವ ದರದಲ್ಲಿ ದೊರೆಯುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X