ಬಿಂದಾಸ್ ಆಗಿದೆ ಈ ನೋಕಿಯಾ-ವಿಂಡೋಸ್ ಏಸ್

By Super
|
ಬಿಂದಾಸ್ ಆಗಿದೆ ಈ ನೋಕಿಯಾ-ವಿಂಡೋಸ್ ಏಸ್
ನೋಕಿಯಾ ಮೊಬೈಲ್ ಕಂಪನಿ ಮೈಕ್ರೋಸಾಫ್ಟ್ ಜೊತೆಗೂಡಿ ಹೊಸ ಹ್ಯಾಂಡ್ ಸೆಟ್ ಬಿಡುಗಡೆಗೆ ಸಜ್ಜಾಗಿದೆ. ನೋಕಿಯಾ ಏಸ್ ವಿಂಡೋಸ್ ಎಂಬ ಹ್ಯಾಂಡ್ ಸೆಟ್ 2012 ರ ಪ್ರಾರಂಭದಲ್ಲಿ ಮೊಬೈಲ್ ಮಾರುಕಟ್ಟೆಯಲ್ಲಿ ತಲ್ಲಣವುಂಟುಮಾಡಲಿದೆ ಎಂದು ಕಂಪನಿ ತಿಳಿಸಿದೆ.

ನೋಕಿಯಾ ಮತ್ತು ವಿಂಡೋಸ್ ಸಹಭಾಗಿತ್ವದಲ್ಲಿ ಮೂಡಿಬರಲಿರುವ ಈ ಹ್ಯಾಂಡ್ ಸೆಟ್ ನಲ್ಲಿ ತುಂಬಾ ಆಧುನಿಕವೆನಿಸುವ ವಿಶೇಷತೆಗಳೆಲ್ಲವೂ ಇದ್ದು, ಗ್ರಾಹಕರ ನಿರೀಕ್ಷೆಯನ್ನು ತೃಪ್ತಿ ಪಡಿಸಲಿರುವುದಾಗಿ ಕಂಪನಿ ತಿಳಿಸಿದೆ. 4G ಕನೆಕ್ಟಿವಿಟಿ ಸಹ ಲಭ್ಯವಿದ್ದು, ಇನ್ನೂ ಅನೇಕ ವಿಶೇಷತೆಗಳೇನೇನಿವೆ ಎಂದು ಮುಂದೆ ತಿಳಿಯೋಣ.

ವಿಶೇಷತೆಗಳು ಹೀಗಿವೆ:
* 4.3 ಇಂಚಿನ ಸ್ಕ್ರೀನ್ ನೊಂದಿಗೆ ಬ್ಲಾಕ್ AMOLED ಟಚ್ ಸ್ಕ್ರೀನ್ ಡಿಸ್ಪ್ಲೇ
* 8 ಮೆಗಾ ಪಿಕ್ಸಲ್ ರೆಸೊಲ್ಯೂಶನ್ ಕ್ಯಾಮೆರಾ
* ಕಾರ್ಲ್ ಝೀಸ್ ಲೆನ್ಸ್ ಮತ್ತು ಆಟೊ ಫೋಕಸ್ ಆಯ್ಕೆ
* ಹ್ಯಾಂಡ್ ಸೆಟ್ HD ವಿಡಿಯೋ ರೆಕಾರ್ಡಿಂಗ್ ಮತ್ತು ಪ್ಲೇ ಬ್ಯಾಕ್
* ವಿಂಡೋಸ್ 7.5 ಆಪರೇಟಿಂಗ್ ಸಿಸ್ಟಮ್ ಬೆಂಬಲಿತ
* 1.4 GHz CPU ಪ್ರೊಸೆಸರ್
* ಇಂಟರ್ನಲ್ ಮೆಮೊರಿ 16 GB
* ಮೈಕ್ರೊ SD ಮೆಮೊರಿ ಕಾರ್ಡ್
* ಎಫ್ ಎಂ ಮತ್ತು ಮಲ್ಟಿ ಫಾರ್ಮಾಟ್ ವಿಡಿಯೋ ಮತ್ತು ಆಡಿಯೋ ಪ್ಲೇಯರ್
* 1800 mAh ಬ್ಯಾಟರಿ ಬೆಂಬಲಿತ, ಒಳ್ಳೆಯ ಟಾಕ್ ಟೈಮ್ ಮತ್ತು ಸ್ಟಾಂಡ್ ಬೈ ಟೈಮ್
* 4G ಕನೆಕ್ಟಿವಿಟಿ ಮತ್ತು HSPA

ನೋಕಿಯಾ-ವಿಂಡೋಸ್ ಸಹಭಾಗಿತ್ವದ ಮೂರನೇ ಹ್ಯಾಂಡ್ ಸೆಟ್ ಇದಾಗಿದ್ದು, ಈ ಹ್ಯಾಂಡ್ ಸೆಟ್ ಮೊದಲ ಆವೃತ್ತಿ AT & T ನೆಟ್ ವರ್ಕ್ ಗೆ ಲಭ್ಯವಾಗಲಿದೆ. ಮ್ಯಾಂಗೊ ಎಂಬ ವಿಂಡೋಸ್ ಫೋನ್ ನ ಪರಿಷ್ಕ್ರತ ಆವೃತ್ತಿ ಇದಾಗಿದ್ದು, ಈ ಮೊಬೈಲ್ ಬೆಲೆಯನ್ನೂ ಕಂಪನಿ ಇನ್ನೂ ತಿಳಿಸಿಲ್ಲ, ಲಭ್ಯವಿರುವ ಮಾಹಿತಿ ಪ್ರಕಾರ ಮೊಬೈಲ್ ದರ ಕೈಗೆಟುಕುವಂತಿದೆ ಎನ್ನಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X