ಆಪಲ್ ಐಪೋನ್ 4S ಮಾಡಲಿದೆ ಮೋಡಿ

By Super
|
ಆಪಲ್ ಐಪೋನ್ 4S ಮಾಡಲಿದೆ ಮೋಡಿ
ಆಪಲ್ ಐಪೋನ್ 2007ರಲ್ಲಿ ಮೊದಲ ಬಾರಿಗೆ ಬಾರಿಗೆ ಬಿಡುಗಡೆಯಾದಾಗ ಸಕತ್ ಜನಪ್ರಿಯತೆಯನ್ನು ಗಳಿಸಿತ್ತು.ಇದರ ಇತ್ತೀಚಿನ ಮಾಡಲ್ ಐಪೋನ್ 4S ಬಿಡುಗಡೆಯಾಗಿದೆ.

ಸ್ಟೀವ್ ಜಾಬ್ಸ್ ನಂತರದ ಆಪಲ್ ಕಂಪನಿ ಮುಖ್ಯಸ್ಥ ಟಿಮ್ ಕುಕ್ ಐಪೋನ್ 4S ಅನ್ನು ಆಪಲ್ ಕಂಪನಿಯ ಮುಖ್ಯ ಕೇಂದ್ರಗಳಾದ ಕ್ಯಾಲಿರ್ಪೋನಿಯದಲ್ಲಿ ಅಕ್ಟೋಬರ್ 4 ರಂದು ಅನಾವರಣಗೊಳಿಸಿದರು.

ಆಪಲ್ ಐಪೋನ್ 4S ಸಾಕಷ್ಟು ನಿರೀಕ್ಷೆಯನ್ನು ಉಂಟುಮಾಡಿದ್ದು ಈಗ ಅದು ನಿರೀಕ್ಷೆಗೆ ತಕ್ಕ ಹಾಗೆ ಗುಣ ಲಕ್ಷಣಗಳನ್ನು ಹೊಂದಿದೆ. ಇದರಲ್ಲಿ $2.99 ಕ್ಕೆ ಗ್ರೀಟಿಂಗ್ ಕಾರ್ಡ್ ಗಳನ್ನು ಕಳುಹಿಸಬಹುದಾಗಿದೆ. ಇದರಲ್ಲಿರುವ ಪರ್ಸನಲ್ ಅಸಿಸ್ಟೆಂಟ್ ವಾಯ್ಸ್ ಕೇಳಲು ಉತ್ಸಾಹವಾಗಿರುತ್ತದೆ.

ಹಿಂದಿನ ಆಪಲ್ ಐಪೋನ್ ಮಾಡಲ್ ಗಿಂತ ಇದರಲ್ಲಿ ಕ್ಯಾಮೆರಾ ಅಧಿಕ ರೆಸ್ಯುಲೇಶನ್ ಹೊಂದಿದೆ. ಸುಲಭವಾಗಿ ಮತ್ತು ವೇಗವಾಗಿ ಇದರಲ್ಲಿ ಆಪರೇಟ್ ಮಾಡಬಹುದಾಗಿದೆ. ಆಪಲ್ ಐಪೋನ್ 4Sನಲ್ಲಿರುವ ಪರ್ಸನಲ್ ಅಸಿಸ್ಟೆಂಟ್ ಲಕ್ಷಣಗಳನ್ನು 'ಸಿರಿ' ಎಂದು ಕರೆಯಲಾಗಿದೆ.

ಈ ಐಪೋನ್ ಅನ್ನು ವಿಂಡೋಸ್ ಅಥವಾ Mac ಕಂಪ್ಯೂಟರ್ ಗೆ ಜೋಡಿಸದೆ ಮಾಹಿತಿಗಳನ್ನು ರವಾನಿಸುವ ಕಾರ್ಯವನ್ನು ನಿರ್ವಹಿಸುತ್ತದೆ.ಆಪಲ್ ಐಪೋನ್ 4S ನಲ್ಲಿ ಆಪಲ್ ಹೊಸ ಮೊಬೈಲ್ ಸಾಫ್ಟ್ ವೇರ್ iOS 5 ಅಳವಡಿಸಲಾಗಿದೆ.

ಈ ಸಾಫ್ಟ್ ವೇರ್ ಐಪೋನ್ 3GS ಮತ್ತು 4 , ಹಾಗೂ ಐಪಾಡ್ ಟಚ್ ಮಾಡಲ್,ಎರಡು ಐಪ್ಯಾಡ್ ಆವೃತಿಯಲ್ಲಿ ಅಕ್ಟೋಬರ್ 12 ರಿಂದ ಲಭ್ಯವಿದೆ. ಅಲ್ಲದೆ ಅದೇ ದಿನದಿಂದ ಆಪಲ್ ಅದರ ಐಕ್ಲೌಡ್ ಸರ್ವೀಸ್ ಅನ್ನು ನೀಡುವ ಸಾಧ್ಯತೆ ಇದೆ.ಐಕ್ಲೌಡ್ ಬಳಕೆದಾರರಿಗೆ ಪೋಟೋ, ಮಾಹಿತಿ, ಸಂಗೀತ ಮತ್ತು ಅಪ್ಲಿಕೇಶನ್ ಅನ್ನು ಪಡೆಯಬಹುದಾಗಿದೆ.

ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಐಪೋನ್ ನ ಜೊತೆಗೆ ಇದೇ ತಿಂಗಳು 12 ಒಳಗೆ ಮತ್ತೊಂದು ಐಪೋನ್ ಬಿಡುಗಡೆಗೊಳಿಸಲಿದ್ದು ಅದರಲ್ಲಿರುವ AT&T ಆವೃತಿಯ ಚಿಪ್ ವೇಗವಾಗಿ ಕಾರ್ಯ ನಿರ್ವಹಿಸುವಂತೆ ರೂಪಿಸಲಾಗಿದೆ.

ಇದರ ಬೆಲೆ 10,000ದಿಂದ-15,000 ಆಗಿದ್ದು ಎರಡು ವರ್ಷಗಳ ಕಾಲದ ಸೇವೆಯನ್ನು ನೀಡಲಾಗುವುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X