ಅರೌಸ್ ಡ್ಯೂಯಲ್ ಸಿಮ್ ಫೋನ್ ಆಯ್ಕೆ ನಿಮ್ಮದಾ?

Posted By: Staff

ಅರೌಸ್ ಡ್ಯೂಯಲ್ ಸಿಮ್ ಫೋನ್ ಆಯ್ಕೆ ನಿಮ್ಮದಾ?
ಅಗ್ಗದ ಬೆಲೆಗೆ ಆಧುನಿಕ ತಂತ್ರಜ್ಞಾನವನ್ನೊಳಗೊಂಡ ಮೊಬೈಲ್ ಮತ್ತು ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಮಾಡುವಲ್ಲಿ ಹೆಸರುವಾಸಿಯಾದ ಚೈನಾವೇಶನ್ ಇದೀಗ ಅರೌಸ್ ಹೆಸರಿನ ಡ್ಯೂಯಲ್ ಸಿಮ್ ಸ್ಮಾರ್ಟ್ ಫೋನ್ ಬಿಡುಗಡೆಗೆ ಮುಂದಾಗಿದೆ.

ಆಂಡ್ರಾಯ್ಡ್ 2.2 ಫ್ರೋಯೊ ಆಪರೇಟಿಂಗ್ ಸಿಸ್ಟಮ್ ಬೆಂಬಲಿತ ಅರೌಸ್ ಸ್ಮಾರ್ಟ್ ಫೋನ್ ಒಳ್ಳೆ ಸ್ಟೈಲಿಶ್ ಲುಕ್ ಮತ್ತು ಬ್ಲಾಕ್ ಫಿನಿಶಿಂಗ್ ಹೊಂದಿದೆ. ಈ ಅರೌಸ್ ಸ್ಮಾರ್ಟ್ ಫೋನ್ ನಲ್ಲಿ ಇನ್ನೂ ಏನೇನು ವಿಶೇಷತೆಯಿದೆ ಎಂದು ತಿಳಿಯೋಣ.

ವಿಶೇಷತೆಗಳು:
* ಡ್ಯೂಯಲ್ ಸಿಮ್ ಮೊಬೈಲ್
* 2.2 ಆಂಡ್ರಾಯ್ಡ್ ಫ್ರೋಯೊ ಆಪರೇಟಿಂಗ್ ಸಿಸ್ಟಮ್
* 4.3 ಇಂಚು ಡಿಸ್ಪ್ಲೇ ಟಚ್ ಸ್ಕ್ರೀನ್
* 800*480 ರೆಸೊಲ್ಯೂಷನ್ ಹೈಡೆಫಿನಿಷನ್ ಸ್ಕ್ರೀನ್
* ಬ್ಲೂಟೂಥ್ ಮತ್ತು ವೈ-ಫೈ ಸಂಪರ್ಕ
* ಡ್ಯೂಯಲ್ ಕ್ಯಾಮೆರಾ ತಂತ್ರಜ್ಞಾನ
* 2 ಮೆಗಾ ಪಿಕ್ಸಲ್ ಬ್ಯಾಕ್ ಕ್ಯಾಮೆರಾ, 0.3 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ
* 16 ಜಿಬಿವರೆಗೂ ಮೆಮೊರಿ ವಿಸ್ತರಣೆ
* ಮೈಕ್ರೋ SD ಕಾರ್ಡ್
* 256 ಎಂಬಿ RAM ಮತ್ತು Core CPU ARM ಪ್ರೊಸೆಸರ್
* ವಿಡಿಯೋ, ಆಡಿಯೋ ಮತ್ತು ಮೀಡಿಯಾ ಫಾರ್ಮೆಟ್

ಇನ್ನು ಈ ಮೊಬೈಲ್ ಬ್ಯಾಟರಿ ವಿಷಯಕ್ಕೆ ಬಂದರೆ, ಇದು 1200 ಮೆಗಾ ಹಟ್ಸ್ ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದ್ದು, 4 ಗಂಟೆ ಟಾಕ್ ಟೈಂ ಮತ್ತು 48 ಗಂಟೆ ಸ್ಟಾಂಡ್ ಬೈ ಟೈಂ ಒಳಗೊಂಡಿದೆ. ಅಷ್ಟೇ ಅಲ್ಲ, USB ಸ್ಲಾಟ್ ಮತ್ತು ಬಹುಭಾಷಾ ಬೆಂಬಲಿತವೂ ಆಗಿದೆ. ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸೆಲೆರೋಮೀಟರ್ ಮತ್ತು ಆಂಡ್ರಾಯ್ಡ್ ಮಾರ್ಕೆಟ್ ಪ್ಲೇಸ್ ಕೂಡ ನಿಮಗೆ ಉಪಯೋಗವಾಗಲಿದೆ. 1 ವರ್ಷದ ವಾರೆಂಟಿ ನೀಡಿರುವ ಕಂಪನಿ, ಈ ಅರೌಸ್ ಬೆಲೆ 9000 ರೂ ಎಂದು ಘೋಷಿಸಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot