ಸುದ್ದಿ ಮಾಡಲಿವೆ ಹ್ಯುವೈ ಅಸೆಂಡ್ II ಮತ್ತು ಬ್ಲೇಝ್

Posted By: Staff

ಸುದ್ದಿ ಮಾಡಲಿವೆ ಹ್ಯುವೈ ಅಸೆಂಡ್ II ಮತ್ತು ಬ್ಲೇಝ್
ದಿನೇ ದಿನೇ ಮೊಬೈಲ್ ಮಾರುಕಟ್ಟೆಗೆ ಅನೇಕ ಸ್ಮಾರ್ಟ್ ಫೋನ್ ಗಳು ಅಡಿಯಿಡುತ್ತಲೇ ಇವೆ. ಇದೀಗ ಹ್ಯುವೈ ಕಂಪನಿಯ ಹ್ಯುವೈ ಅಸೆಂಡ್ II ಮತ್ತು ಹ್ಯುವೈ ಬ್ಲೇಝ್ ಎಂಬ ಎರಡು ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಸುದ್ದಿ ಮಾಡಲು ಹೊರಟಿವೆ.

ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಈ ಮೊಬೈಲ್ ಗಳು ಆಂಡ್ರಾಯ್ಡ್ 2.2 ಫ್ರೋಯೊ ಆಪರೇಟಿಂಗ್ ಸಿಸ್ಟಮ್ ಗಿಂತ ಉತ್ತಮವೆನಿಸಿದೆ.

ಹ್ಯುವೈ ಅಸೆಂಡ್ II ಸ್ಮಾರ್ಟ್ ಫೋನ್ ನಲ್ಲಿ 2592 * 1944 ರೆಸೊಲ್ಯೂಷನ್ ನೊಂದಿಗೆ 5 ಮೆಗಾ ಪಿಕ್ಸಲ್ ಕ್ಯಾಮೆರಾ ಇದ್ದರೆ ಬ್ಲೇಝ್ 2048*1536 ಸ್ಕ್ರೀನ್ ರೆಸೊಲ್ಯೂಷನ್ ನೊಂದಿಗೆ 3.2 ಮೆಗಾ ಪಿಕ್ಸಲ್ ಕ್ಯಾಮೆರಾ ಹೊಂದಿದೆ. ಬ್ಲೇಝ್ 3ಜಿ ಯೊಂದಿಗೆ HSDPA ತಂತ್ರಜ್ಞಾನ ಒಳಗೊಂಡಿದ್ದರೆ, ಅಸೆಂಡ್ IIನಲ್ಲಿ ಇದು ಹೊರತಾಗಿದೆ.

ಆದರೆ ಅಸೆಂಡ್ II 3.5 ಇಂಚು ಸ್ಕ್ರೀನ್ ಡಿಸ್ಪ್ಲೇ 320*480 ಪಿಕ್ಸಲ್ ರೆಸೊಲ್ಯೂಷನ್ ಹೆಚ್ಚೆನಿಸಿದೆ. ಎರಡರಲ್ಲೂ ಬ್ಲೂಟೂಥ್, ವೈ-ಫೈ ಮತ್ತು ಇನ್ ಫ್ರೇರ್ಡ್ ಕನೆಕ್ಟಿವಿಟಿ ನೀಡಲಾಗಿದೆ. ಮಾಹಿತಿ ವಿನಿಮಯಕ್ಕೆ USB ಪೋರ್ಟ್ ಎರಡರಲ್ಲೂ ಇದೆ. ಅಸೆಂಡ್ II ಮತ್ತು ಬ್ಲೇಝ್ ಎರಡೂ ಮೊಬೈಲ್ ಗಳಲ್ಲಿನ ಬ್ಯಾಟರಿ 110 ಗ್ರಾಂ ಇದ್ದು, 1400 ಮೆಗಾ ಹಟ್ಸ್ ಬ್ಯಾಟರಿ ಪವರ್ ಹೊಂದಿದೆ. ಇವೆರಡೂ 300 ಗಂಟೆ ಸ್ಟಾಂಡ್ ಬೈ ಬ್ಯಾಟರಿ ಮತ್ತು 3.66 ಗಂಟೆ ಟಾಕ್ ಟೈಂ ಹೊಂದಿದೆ.

ಇವೆರಡರಲ್ಲೂ ಕಂಡುಬರುವ ವ್ಯತ್ಯಾಸವೆಂದರೆ, ಅಸೆಂಡ್ II GPS ಸೌಲಭ್ಯದ ಹೊರತಾಗಿದ್ದು ಬ್ಲೇಝ್ ನಲ್ಲಿ ಈ ಸೌಲಭ್ಯ ನೀಡಲಾಗಿದೆ. ಅಸೆಂಡ್ II ಗೆ 32 ಜಿಬಿ ಮೈಕ್ರೋ SD ಕಾರ್ಡ್ ನೀಡಿದ್ದರೆ ಬ್ಲೇಝ್ ಗೆ ಕೇವಲ 16 ಜಿಬಿ ಮೈಕ್ರೋ SD ಕಾರ್ಡ್ ಇದೆ. ಅಸೆಂಡ್ II ಬೆಲೆ 6000 ರೂ ಮತ್ತು ಬ್ಲೇಝ್ ಬೆಲೆ ಸುಮಾರು 4,000 ಎಂದು ಅಂದಾಜಿಸಲಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot