ಸ್ಮಾರ್ಟ್ ಆಗಿದೆ ಈ ಸೆನ್ಸೇಶನ್ XL ಸ್ಮಾರ್ಟ್ ಫೋನ್

Posted By: Staff

ಸ್ಮಾರ್ಟ್ ಆಗಿದೆ ಈ ಸೆನ್ಸೇಶನ್ XL ಸ್ಮಾರ್ಟ್ ಫೋನ್
ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಹೆಸರುವಾಸಿಯಾಗಿರುವ ಎಚ್ ಟಿಸಿ ಕಂಪನಿ ಇದೀಗ HTC ಸೆನ್ಸೇಶನ್ XL ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. HTC ಸೆನ್ಸೇಶನ್ XE ನಂತರ ಬಿಡುಗಡೆಗೊಂಡಿರುವ ಈ ಮೊಬೈಲ್ ನಲ್ಲಿ ಗ್ರಾಹಕರು ಇಚ್ಚಿಸುವ ವಿಶೇಷ ಆಯ್ಕೆಗಳನ್ನು ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ.

4.7 ಇಂಚಿನ ಎಲ್ ಸಿಡಿ ಸ್ಕ್ರೀನ್ 480 x 800 ರೆಸೊಲ್ಯೂಷನ್ ತುಂಬಾ ಸ್ಪಷ್ಟತೆ ನೀಡುತ್ತದೆ. 164 ಗ್ರಾಂ ತೂಕ ಹೊಂದಿರುವ ಮೊಬೈಲ್ ನಲ್ಲಿ 3D ಗ್ರಾಫಿಕ್ ಹಾರ್ಡ್ ವೇರ್ ಅಕ್ಸಲರೇಟರ್ ಇರುವುದರಿಂದ ಬಳಕೆದಾರರಿಗೆ ಕಂಪ್ಯೂಟರ್ ಗೇಮ್ ನ ಅನನ್ಯ ಅನುಭವ ನೀಡುತ್ತದೆ. ಆಂಡ್ರಾಯ್ಡ್ ಜಿಂಜರ್ ಬ್ರೆಡ್ 2.3 ಆಪರೇಟಿಂಗ್ ಸಿಸ್ಟಮ್ ಬೆಂಬಲಿತ ಸ್ಮಾರ್ಟ್ ಫೋನ್ 1.5 ಗಿಗಾ ಹಟ್ಸ್ ಸಿಂಗಲ್ ಕೋರ್ ಪ್ರೊಸೆಸರ್ ನಿಂದ ಉತ್ತಮ ಗುಣಮಟ್ಟ ಪ್ರದರ್ಶಿಸುತ್ತದೆ.

ಮೆಮೊರಿ ವಿಸ್ತರಣೆಗೆಂದು ಆಯ್ಕೆ ಇಲ್ಲದಿದ್ದರೂ ಮೊಬೈಲ್ ನಲ್ಲಿಯೇ ಲಭ್ಯವಿರುವ 16 ಜಿಬಿ ಮಾಹಿತಿ ಸಂಗ್ರಹಣೆಗೆ ಉತ್ತಮ ಅವಕಾಶ ನೀಡಲಿದೆ. 8 ಮೆಗಾ ಪಿಕ್ಸಲ್ ಕ್ಯಾಮರಾದಲ್ಲಿ ವೈಡ್ ಆಂಗಲ್ ಲೆನ್ಸ್ ಫೀಚರ್ ಇರುವುದರಿಂದ ಗುಣಮಟ್ಟದ ವಿಡಿಯೋ ಮತ್ತು ಫೋಟೊ ತೆಗೆಯಬಹುದಾಗಿದೆ. 1.3 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ ಇದರಲ್ಲಿದೆ. ಮಾಹಿತಿ ವಿನಿಮಯಕ್ಕೆ ಬ್ಲೂಟೂಥ್, ವೈ-ಫೈ ನೀಡಲಾಗಿದ್ದು, GPS, ಮೀಡಿಯಾ ಪ್ಲೇಯರ್ ಸಹ ಲಭ್ಯವಿದೆ. ಇಂಟರ್ ನೆಟ್ ಬಳಕೆದಾರರಿಗೆ HTML ಮತ್ತು ಫ್ಲಾಶ್ ಪ್ಲಾಟ್ ಫಾರ್ಮ್ ಸೌಲಭ್ಯವಿದೆ.

ಇದರ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಅನುಮಾನವೇ ಬೇಡ. 1600 mAh ಸ್ಟಾಂಡರ್ಡ್ ಬ್ಯಾಟರಿ ಒಳಗೊಂಡಿರುವ ಈ ಮೊಬೈಲ್ 11.3 ಗಂಟೆ ಟಾಕ್ ಟೈಂ ಮತ್ತು 360 ಗಂಟೆ ಸ್ಟಾಂಡ್ ಬೈ ಬ್ಯಾಟರಿ ಬ್ಯಾಕಪ್ ನೀಡುತ್ತೆ. 3ಜಿ ಇದ್ದ ಪಕ್ಷದಲ್ಲಿ 6.83 ಗಂಟೆ ಟಾಕ್ ಟೈಂ ಮತ್ತು 460 ಗಂಟೆ ಸ್ಟಾಂಡ್ ಬೈ ಟೈಂ ಬ್ಯಾಟರಿ ಬ್ಯಾಕಪ್ ನೀಡುತ್ತದೆ. ಈ ಸ್ಮಾರ್ಟ್ ಫೋನ್ ಬೆಲೆ ದೇಶದಲ್ಲಿ ಸುಮಾರು 45,000 ರು ಎಂದು ಅಂದಾಜಿಸಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot