Home
ಮೊಬೈಲ್

ಚಮತ್ಕಾರ ಮಾಡಲಿದೆ ಸ್ಯಾಮ್ ಸಂಗ್ ಗ್ಯಾಲಕ್ಸಿ

By Super
ಚಮತ್ಕಾರ ಮಾಡಲಿದೆ ಸ್ಯಾಮ್ ಸಂಗ್ ಗ್ಯಾಲಕ್ಸಿ
ಪ್ರತಿಷ್ಠಿತ ಸಾಮ್ ಸಂಗ್ ಕಂಪನಿ ನೂತನ ಮೊಬೈಲ್ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಈ ವರ್ಷದ ಅಂತ್ಯದಲ್ಲಿ ಸಾಮ್ ಸಂಗ್ ಗ್ಯಾಲಕ್ಸಿ ಎಸ್ ಗ್ಲೈಡ್ ಮೊಬೈಲ್ ಪ್ರಪಂಚಕ್ಕೆ ಅಡಿಯಿಡಲು ಸಿದ್ಧಗೊಂಡಿರುವುದಾಗಿ ಕಂಪನಿ ತಿಳಿಸಿದೆ.

ಆಂಡ್ರಾಯ್ಡ್ 2.3 ಆಪರೇಟಿಂಗ್ ಸಿಸ್ಟಮ್ ಬೆಂಬಲಿತ ಗ್ಯಾಲಕ್ಸಿ ಮೊಬೈಲ್ ಸಾಮ್ ಸಂಗ್ ಎಕ್ಸಿನೋಸ್ 4210 ಸಿಪಿಯು ಹೊಂದಿರುವುದು ವಿಶೇಷವೆನಿಸಿದೆ. ಇದರಲ್ಲಿ ನಿಮಗೆ ಬೇಕೆನಿಸುವ ಇನ್ನೂ ಅನೇಕ ಸೌಲಭ್ಯಗಳಿವೆ. ಅದೇನೆಂದು ಮುಂದೆ ನೋಡಿ.

ಗ್ಯಾಲಕ್ಸಿ ವಿಶೇಷತೆಗಳು:
* 4 ಇಂಚಿನ ಡಿಸ್ಲ್ಪೇಯೊಂದಿಗೆ 480*800 ಪಿಕ್ಸಲ್ ರೆಸೊಲ್ಯೂಷನ್
* ಮಲ್ಟಿ ಟಚ್ ಸ್ಕ್ರೀನ್ ತಂತ್ರಜ್ಞಾನ
* ಕ್ವೆರ್ಟಿ ಕೀಪ್ಯಾಡ್ ಮತ್ತು 1.2 ಗಿಗಾ ಹಟ್ಸ್ ಡ್ಯುಯಲ್ ಕೋರ್ ಪ್ರಾಸೆಸರ್
* ಮೈಕ್ರೊ SD ಕಾರ್ಡ್ ನಿಂದ ಮೆಮೊರಿ ವಿಸ್ತರಣೆ ಸಾಧ್ಯ.
* USB 2.0 ಪೋರ್ಟ್
* ಬ್ಲೂಟೂಥ್, ವೈ-ಫೈ ಸಂಪರ್ಕ
* GPS ತಂತ್ರಜ್ಞಾನ, LED ಫ್ಲಾಶ್ ಲೈಟ್
* 8 ಮೆಗಾ ಪಿಕ್ಸಲ್ ಕ್ಯಾಮೆರಾ ಮತ್ತು ಫ್ರಂಟ್ ಕ್ಯಾಮೆರಾ 1.3 ಮೆಗಾ ಪಿಕ್ಸಲ್
* ಪ್ರಾಕ್ಸಿಮಿಟಿ ಸೆನ್ಸಾರ್

ಇಷ್ಟೇ ಅಲ್ಲ, ಈ ಗ್ಯಾಲಕ್ಸಿ ಮೊಬೈಲ್ GSM 850, 900, 1800, 1900, UMTS 850 ಮತ್ತು UMTS 1900 ಸೆಲ್ಯುಲಾರ್ ನೆಟ್ ವರ್ಕ್ ಮತ್ತು GPRS, EDGE, UMTS ಮತ್ತು HSDPA ಸೆಲ್ಯುಲಾರ್ ಲಿಂಕ್ ಗಳನ್ನೂ ಸಹ ಬೆಂಬಲಿಸುತ್ತದೆ. ಮೊಬೈಲ್ ಕಳುವಾದ ಪಕ್ಷದಲ್ಲಿ, ಅದನ್ನು ಕಂಡುಹಿಡಿಯಲು 64 ಕೋರ್ಡ್ ಕಾಲ್ ಅಲರ್ಟ್ ಕೂಡ ನೀಡಲಾಗಿದೆ.

ಆದರೆ ಈ ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+