ಆಂಡ್ರಾಯ್ಡ್ ಗೆ ಪ್ರತಿಸ್ಪರ್ಧಿ ಈ ಮೈಕ್ರೋಸಾಫ್ಟ್ ವಿಂಡೋಸ್ OS

ಬಳಕೆದಾರರಿಗೆ ಉಪಯೋಗಿಸಲು ಸುಲಭವಾಗುವಂತೆ ತಯಾರಿಸಲಾಗಿದ್ದು ಇದನ್ನು ವಿಂಡೋಸ್ ಇರುವ ಸ್ಮಾರ್ಟ್ ಪೋನಿನಲ್ಲಿ ಕಾರ್ಯ ನಿರ್ವಹಿಸುವಂತೆ ರೂಪಿಸಲಾಗಿದೆ.ಮೈಕ್ರೋಸಾಫ್ಟ್ ಅಕ್ಟೋಬರ್ 12ರಂದು ಇದನ್ನು ಬಿಡುಗಡೆ ಮಾಡಲು ತೀರ್ಮಾನಿಸಿದೆ.
ಮೈಕ್ರೋಸಾಫ್ಟ್ಜೊತೆ ಪಾಲುದಾರರಾಗಿರುವ ಎಲ್ ಜಿ, ಸ್ಯಾಮ್ ಸಂಗ್, ಎಚ್ ಟಿ ಸಿ ಕಂಪನಿಗಳು ತಮ್ಮ ಸ್ಮಾರ್ಟ್ ಪೋನಿನಲ್ಲಿ ವಿಂಡೋಸ್ ಪೋನ್ 7.5 ಮ್ಯಾಂಗೋ ಆಪರೇಟಿಂಗ್ ಸಿಸ್ಟಮ್ ಬಳಸುವಂತೆ ಮಾರ್ಪಾಡು ತರುವ ಸಾಧ್ಯತೆ ಇದೆ.
ಮೈಕ್ರೋಸಾಫ್ಟ್ ನಲ್ಲಿ ತುಂಬಾ ಅಪ್ಲೀಕೇಶನ್ ಡೌನ್ ಲೋಡ್ ಮಾಡಿಕೊಳ್ಳುವ ಸೌಲಭ್ಯದೊಂದಿಗೆ ಉತ್ತಮ ಮಾರುಕಟ್ಟೆಯನ್ನು ಪಡೆಯುವ ಯೋಜನೆಯನ್ನು ಹೊಂದಿದೆ. ಅದರಲ್ಲಿರು ಅಪ್ಲೀಕೇಶನ್ ಡೆಮೋವನ್ನು ಬಿಡುಗಡೆಯೆಂದು ತೋರಿಸಲಿದೆ.
ಅಕ್ಟೋಬರ್ 3 ರಂದು ಸ್ಯಾಮ್ ಸಂಗ್ ಬಿಡುಗಡೆ ಮಾಡಿದ್ದ ಸ್ಮಾರ್ಟ್ ಪೋನ್ ಒಮಿನಾ ಡಬ್ಲ್ಯೂ ನಲ್ಲಲಿ ಈ ಹೊಸ ವಿಂಡೋಸ್ ಬಳಸಿ ಕಾರ್ಯ ನಿರ್ವಹಿಸಬಹುದಾಗಿದೆ.
ಆಂಡ್ರಾಯ್ಡ್ ಗೆ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿರುವ ಈ ಆಪರೇಟಿಂಗ್ ಸಿಸ್ಟಮ್ ಸ್ಮಾರ್ಟ್ ಪೋನ್ ಆಪರೇಟಿಂಗ್ ರೇಸ್ ನಲ್ಲಿ ಗೆಲ್ಲುವ ಭರವಸೆಯೊಂದಿಗೆ ಬರುತ್ತಿದೆ.


Click it and Unblock the Notifications








